ತೆಲಂಗಾಣ: ತನ್ನ ಇಬ್ಬರು ಗಂಡು ಮಕ್ಕಳ ಮೇಲೆ ತಂದೆಯೊಬ್ಬ ಸೈಕೋನಂತೆ ವರ್ತಿಸಿದ್ದು, ಪುತ್ರನೊಬ್ಬ ಮೃತಪಟ್ಟಿರುವ ಘಟನೆ ತೆಲಂಗಾಣದ ನಾಗರ್ಕುರ್ನೂಲ್ನ ಮಂತತಿಯಲ್ಲಿ ನಡೆದಿದೆ.
ಆರೋಪಿ ಶಿವಶಂಕರ್ನ ಪತ್ನಿ 3 ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು, ಇನ್ನು ಮಾನಸಿಕ ಅಸ್ವಸ್ಥರಂತೆ ವರ್ತಿಸುವ ಇವರು, ಮದ್ಯದ ಚಟ ಸಹ ಅಂಟಿಸಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇಂದು ಮುಂಜಾನೆ ಇದ್ದಕ್ಕಿದ್ದಂತೆ ಸೈಕೋ ತರ ಆಡಿದ ಇವರು ತನ್ನಿಬ್ಬರು ಪುತ್ರರಾದ ಮಲ್ಲಿಕಾರ್ಜುನ್ ಮತ್ತು ಪ್ರಣಯ್ ಮೇಲೆ ಹಲ್ಲೆ ಮಾಡಿ, ಕೈಗಳನ್ನು ಕೊಯ್ದಿದ್ದಾರೆ. ಈ ಘಟನೆಯಲ್ಲಿ ಹಿರಿಯ ಮಗ ಮಲ್ಲಿಕಾರ್ಜುನ್ ಸಾವನ್ನಪ್ಪಿದ್ದಾನೆ. ಇನ್ನೂ ಪ್ರಣಯ್ ಪ್ರಾಣ ಉಳಿಸುವಲ್ಲಿ ಕುಟುಂಬಸ್ಥರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅತ್ತೆ-ಮಾವನಿಗೆ ಚಾಕುವಿನಿಂದ ಇರಿದ ಅಳಿಯ... ಕಾರಣವೇನು ಗೊತ್ತಾ?
ಸದ್ಯ ಪ್ರಣಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.