ETV Bharat / bharat

ಮಗಳ ಮೇಲೆ ಅತ್ಯಾಚಾರವೆಸಗಿ ವೇಶ್ಯಾವಾಟಿಕೆಗೆ ತಳ್ಳಿದ ತಂದೆ.. SP ಜಿಲ್ಲಾಧ್ಯಕ್ಷ ಸೇರಿ 28 ಮಂದಿ ವಿರುದ್ಧ FIR - ಮಗಳ ಮೇಲೆ ಅತ್ಯಾಚಾರ ಪ್ರಕರಣ

ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿರುವ ಕಾಮುಕ ತಂದೆ, ಆಕೆಯನ್ನ ವೇಶ್ಯಾವಾಟಿಕೆಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಕೆಲ ರಾಜಕೀಯ ಮುಖಂಡರು ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

UP Rape case
UP Rape case
author img

By

Published : Oct 12, 2021, 7:24 PM IST

ಲಲಿತಪುರ(ಉತ್ತರ ಪ್ರದೇಶ): ಕಾಮುಕ ತಂದೆಯೊಬ್ಬ ಹೆತ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಜೊತೆಗೆ ವೇಶ್ಯಾವಾಟಿಕೆಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಸೇರಿದಂತೆ 28 ಮಂದಿ ವಿರುದ್ಧ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಲಲಿತಪುರದಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ವರ್ಷಗಳಿಂದ ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗಿದೆ. ಬೆದರಿಕೆ ಹಾಕುವ ಮೂಲಕ ಪಾಪಿ ತಂದೆ ಖುದ್ದಾಗಿ ಈ ಕೆಲಸ ಮಾಡಿಸಿದ್ದು, ಸಂಬಂಧಿಕರು ಸೇರಿದಂತೆ ಅನೇಕರು ಆಕೆಯ ಮೇಲೆ ದುಷ್ಕೃತ್ಯವೆಸಗಿದ್ದಾರೆ. ಇದರ ಮಧ್ಯೆ ಮಗಳನ್ನ ಮಾರಾಟ ಮಾಡಲು ಅನೇಕ ಸಲ ಪ್ರಯತ್ನಿಸಿದ್ದಾನೆ.

ರಾಕ್ಷಸರ ದಾಳಿಯಿಂದ ಬಳಲುತ್ತಿದ್ದ ಬಾಲಕಿ ಕೊನೆಗೂ ತನ್ನ ತಾಯಿಯ ಸಹಾಯದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಅನೇಕ ರಾಜಕೀಯ ಮುಖಂಡರ ಹೆಸರೂ ಸಹ ಕೇಳಿ ಬಂದಿವೆ.

ಇದನ್ನೂ ಓದಿರಿ: ದೇಶಿ ವಿಮಾನಯಾನ ಪ್ರಯಾಣಿಕರಿಗೆ ಗುಡ್​ನ್ಯೂಸ್​​​.. ಅ. 18ರಿಂದ ಶೇ. 100ರಷ್ಟು ಆಸನ ಸಾಮರ್ಥ್ಯಕ್ಕೆ ಅವಕಾಶ

ನೀನು ನಿತ್ಯ ಇದೇ ಕೆಲಸ ಮಾಡು

ದೂರಿನಲ್ಲಿ ಸಂತ್ರಸ್ತೆ ತಿಳಿಸಿರುವ ಪ್ರಕಾರ, ಆರಂಭದಲ್ಲಿ ತಂದೆಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಾದ ಮರುದಿನ ಹೋಟೆಲ್​​ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಮತ್ತು ಬರುವ ಔಷಧ ನೀಡಿದ್ದು, ಮೂರ್ಛೆ ಹೋಗುತ್ತಿದ್ದಂತೆ ಆಕೆಯ ಮೇಲೆ ಕೆಲ ಯುವಕರು ಅತ್ಯಾಚಾರವೆಸಗಿದ್ದಾರೆ. ಪ್ರಜ್ಞೆ ಬಂದ ಬಳಿಕ ಆಕೆಯ ಬಟ್ಟೆ ಅಸ್ತವ್ಯಸ್ತಗೊಂಡಿದ್ದವು. ಅಲ್ಲಿಂದ ಮನೆಗೆ ಬಂದ ಬಳಿಕ ಹೋಟೆಲ್​​ನಲ್ಲಿ ಏನಾಯಿತು ಎಂದು ತಂದೆ ಬಳಿ ಕೇಳಿದ್ದಾಳೆ. ಈ ವೇಳೆ ಪ್ರತಿ ದಿನ ನೀನು ಇದೇ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾನೆ.

ಶಾಲೆ ಮುಗಿಯುತ್ತಿದ್ದಂತೆ ಹೋಟೆಲ್​ಗೆ ಕೆರೆದೊಯ್ಯುತ್ತಿದ್ದ ಕಿರಾತಕ

ಪ್ರತಿದಿನ ಶಾಲೆ ಮುಗಿಯುತ್ತಿದ್ದಂತೆ ಆಕೆಯನ್ನ ಹೋಟೆಲ್​ಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಅನೇಕ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದರ ಮಧ್ಯೆ ಆಕೆಯ ಚಿಕ್ಕಪ್ಪ, ಸೋದರ ಸಂಬಂಧಿಗಳು ಸೇರಿದಂತೆ ಅನೇಕ ಸಂಬಂಧಿಕರು ದುಷ್ಕೃತ್ಯವೆಸಗಿದ್ದಾರೆ. ಇದರ ಬಗ್ಗೆ ಸಹೋದರಿಗೆ ಮಾಹಿತಿ ನೀಡಿದಾಗ ಸುಮ್ಮನಿರುವಂತೆ ತಿಳಿಸಿದ್ದಾಳೆ. ಕಾಮುಕರ ಕೃತ್ಯದಿಂದಾಗಿ ನಲುಗಿ ಹೋಗಿರುವ ಬಾಲಕಿ, ಕೊನೆಗೆ ತಾಯಿಯ ಸಹಾಯದಿಂದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದು, ಇದೀಗ 28 ಜನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತಪುರ್ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿದ್ದು, ಸಂತ್ರಸ್ತೆಯನ್ನ ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಗಿದ್ದು, ವರದಿ ಬರುತ್ತಿದ್ದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.