ETV Bharat / bharat

ಜೇಬಿನಿಂದ ಹಣ ಕದ್ದ ಸಂಶಯ: ಮಲಗಿದ್ದ 19 ವರ್ಷದ ಮಗನ ಕೊಡಲಿಯಿಂದ ಕೊಚ್ಚಿ ಕೊಂದ ಅಪ್ಪ - fathers hits his sons neck with axe

ಮಂಗಳವಾರ ಬೆಳಗ್ಗೆ 6 ಗಂಟೆಯಾಗಿತ್ತು. ನಾನು ಜೋರಾದ ಶಬ್ಧ ಕೇಳಿ ಓಡಿ ಬಂದು ನೋಡಿದರೆ, ನನ್ನ ಗಂಡನ ಕೈಯಲ್ಲಿ ಕೊಡಲಿ ಇತ್ತು. ಮಗ ರಕ್ತದ ಮಡುವಿನಲ್ಲೇ ಮಲಗಿದ್ದ ಎಂದು ತಾಯಿ ಕಣ್ಣೀರು ಸುರಿಸಿದ್ದಾರೆ.

Father hacks son to death over petty issue in Gujarat
ಮಲಗಿದ್ದ 19 ವರ್ಷದ ಮಗನ ಕೊಡಲಿಯಿಂದ ಕೊಚ್ಚಿ ಕೊಂದ ಅಪ್ಪ
author img

By

Published : Jun 28, 2022, 8:49 PM IST

ನವಸರಿ(ಗುಜರಾತ್​): ತನ್ನ ಜೇಬಿನಿಂದ ಹಣ ಕದ್ದ ಸಂಶಯದ ಮೇಲೆ 19 ವರ್ಷದ ಮಗನನ್ನು ತಂದೆಯೊಬ್ಬ ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಗುಜರಾತ್​ನ ನವಸರಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಸಾಹಿಲ್​ ಎಂಬಾತನೇ ಕೊಲೆಯಾದ ಯುವಕ. ಭಾಗುಭಾಯ್​ ಎಂಬಾತನೇ ಮಗನನ್ನು ಕೊಂದ ತಂದೆ.

ಮಂಗಳವಾರ ಆಗಷ್ಟೇ ಬೆಳಗಾಗಿತ್ತು. ಆದರೆ, ಭಾಗುಭಾಯ್​ ತನ್ನ ಮನೆಯಲ್ಲಿ ಮಲಗಿದ್ದ ಮಗನ ಕೊಲೆ ಮಾಡಿ ನೆತ್ತರು ಹರಿಸಿದ್ದ. ಈ ಬಗ್ಗೆ ಸ್ವತಃ ಭಗುಭಾಯ್​ ಪತ್ನಿ ಚಂಚಲ್​ಬೆನ್​ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

"ಬೆಳಗ್ಗೆ 6 ಗಂಟೆಯಾಗಿತ್ತು. ನಾನು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ನನ್ನ ಪತಿ ಭಾಗುಭಾಯ್ ಎಚ್ಚರಗೊಂಡಿದ್ದರೂ ನಂತರ ಆತ ಹಾಸಿಗೆಯಲ್ಲಿ ಮಲಗಿದ್ದ. ನನ್ನ 19 ವರ್ಷದ ಸಾಹಿಲ್​ ಇನ್ನೂ ಮಲಗಿಕೊಂಡಿದ್ದ. ಈ ವೇಳೆಯೇ ನನಗೆ ಜೋರಾದ ಶಬ್ಧ ಕೇಳಿತು. ನಾನು ಓಡಿ ಬಂದು ನೋಡಿದರೆ, ನನ್ನ ಗಂಡನ ಕೈಯಲ್ಲಿ ಕೊಡಲಿ ಇತ್ತು. ಆತನ ಎರಡ್ಮೂರು ಬಾರಿ ಮಗನ ಕುತ್ತಿಗೆಗೆ ಹೊಡೆದಿದ್ದ. ಇದರಿಂದ ಮಗ ಸಾಹಿಲ್​ ರಕ್ತದ ಮಡುವಿನಲ್ಲೇ ಮಲಗಿದ್ದ" ಎಂದು ತಾಯಿ ಹೇಳಿದ್ದಾರೆ.

"ಮಗನಿಗೆ ಕೊಡಲಿಗೆ ಹೊಡೆದ ನಂತರ ನನ್ನ ಪತಿ ಅಲ್ಲಿಯೇ ಕುಳಿತುಕೊಂಡಿದ್ದರು. ನಾನು ಏನೇ ಕೇಳಿದರೂ ಉತ್ತರಿಸಲಿಲ್ಲ. ಹೀಗಾಗಿ ನಾನು ಹೊರ ಬಂದು ಸಹಾಯಕ್ಕಾಗಿ ಬೇಡಿದೆ. ಆಗ ನೆರೆ-ಹೊರೆಯವರು ಆಂಬ್ಯುಲೆನ್ಸ್​ ಕರೆಸಿದರು. ನಂತರ ವೈದ್ಯರು ಮಗ ಮೃತಪಟ್ಟಿರುವುದಾಗಿ ತಿಳಿಸಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು" ಎಂದು ತನ್ನ ದೂರಿನಲ್ಲಿ ವಿವರಿಸಿದ್ದಾರೆ.

ಯಾಕೆ ಈ ಕೊಲೆ ಮಾಡಿರಬಹುದು ಎಂಬ ಪ್ರಶ್ನೆಗೆ ಆಕೆ, "ಸೋಮವಾರ ರಾತ್ರಿ ಟಬ್​ನಲ್ಲಿ ಸಾಹಿಲ್ ಮೂತ್ರವಿಸರ್ಜನೆ ಮಾಡಿದ್ದಕ್ಕೆ ಭಾಗುಭಾಯ್ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದ. ಅಲ್ಲದೇ, ತನ್ನ ಜೇಬಿನಿಂದ ಹಣ ಕದ್ದಿರುವ ಬಗ್ಗೆಯೂ ಮಗನ ಮೇಲೆ ಸಂಶಯ ಹೊಂದಿದ್ದ" ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಆರೋಪಿ ತಂದೆ ದಿನಗೂಲಿ ಕಾರ್ಮಿಕನಾಗಿದ್ದ. ಮೃತ ಮಗ​ 10ನೇ ತರಗತಿ ಓದಿದ್ದ. ಆದರೆ, ಈತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸದ್ಯದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿಎಸ್​ಐ ಎಸ್​.ಎಸ್​.ಮಾಲ್​ ತಿಳಿಸಿದ್ದಾರೆ. ಈ ಬಗ್ಗೆ ಖೇರ್​ಗ್ರಾಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆಯಾಗಿ 3 ತಿಂಗಳಾದ್ರೂ ಮನೆಗೆ ಬಾರದ ಪತ್ನಿ: ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.