ETV Bharat / bharat

ಮಗಳ ಮೇಲೆ ಕಾಮುಕ ತಂದೆಯಿಂದಲೇ ರೇಪ್: ಮರಣದಂಡನೆ ವಿಧಿಸಿದ ಕೋರ್ಟ್​​ - ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ

ಜನ್ಮ ನೀಡಿದ ಮಗಳ ಮೇಲೆಯೇ ಅತ್ಯಾಚಾರವೆಸಗಿರುವ ಕಾಮುಕ ತಂದೆಗೆ ಉತ್ತರ ಪ್ರದೇಶದ ಕೋರ್ಟ್‌ ಮರಣದಂಡನೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

UP Rape case
UP Rape case
author img

By

Published : Nov 24, 2021, 6:49 PM IST

ಬಹ್ರೇಚ್(ಉತ್ತರ ಪ್ರದೇಶ): ಅಪ್ರಾಪ್ತ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಕೋರ್ಟ್​ ಮಹತ್ವದ ತೀರ್ಪು ಹೊರಹಾಕಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ತಂದೆಗೆ ಮರಣದಂಡನೆ ವಿಧಿಸಿರುವ ಜೊತೆಗೆ, 51 ಸಾವಿರ ರೂ. ದಂಡ ವಿಧಿಸಿದೆ.

ಉತ್ತರ ಪ್ರದೇಶದ ಬಹ್ರೇಚ್​​ನ ಸುಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 40 ವರ್ಷದ ತಂದೆ ನನ್ಹು ಖಾನ್​​ ಎಂಬಾತ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ, ಆಕೆಯ ಬಾಲ್ಯವಿವಾಹವನ್ನೂ ಮಾಡಿದ್ದಾನೆ. ಆಕೆಯನ್ನು ಗಂಡನ ಮನೆಗೆ ಕಳುಹಿಸುವ ಬದಲು ಮನೆಯಲ್ಲೇ ಉಳಿಸಿಕೊಂಡು ದುಷ್ಕೃತ್ಯ ಮುಂದುವರೆಸಿದ್ದಾನೆ. ಇದರ ಬಗ್ಗೆ ತಾಯಿಗೆ ಗೊತ್ತಾಗುತ್ತಿದ್ದಂತೆ ಆಗಸ್ಟ್​​ 25ರಂದು ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾಳೆ.

ಇದನ್ನೂ ಓದಿ: 32 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ​, ಕೊಲೆ: ಪ್ರಕರಣದಲ್ಲಿ ಅಪ್ರಾಪ್ತನೇ ಆರೋಪಿ

ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಆರೋಪಿಯ ಬಂಧನ ಮಾಡಿರುವ ಪೊಲೀಸರು, ಕೇವಲ 11 ದಿನಗಳಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿತಿನ್​ ಪಾಂಡೆ ಆರೋಪಿಗೆ ಮರಣದಂಡನೆ ವಿಧಿಸಿ, 51 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ವಿಶೇಷವೆಂದರೆ, ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಮರಣದಂಡನೆ ವಿಧಿಸಿರುವ ಮೊದಲ ಪ್ರಕರಣ ಇದಾಗಿದ್ದು, ವೈಜ್ಞಾನಿಕ ಪುರಾವೆ ಸಂಗ್ರಹ ಮಾಡಲು ಗೋರಖ್​ಪುರದ ವಿಧಿ-ವಿಜ್ಞಾನ ಪ್ರಯೋಗಾಲಯದಿಂದ ಡಿಎನ್​ಎ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಿ, ವರದಿ ಸಹ ಪಡೆದುಕೊಳ್ಳಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.