ETV Bharat / bharat

ಮೂವರು ಹೆಣ್ಣು ಮಕ್ಕಳ ಕತ್ತಿನ ಮೇಲೆ ಪ್ರಹಾರ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ.. - Kottayam Medical College

ತನ್ನ ಮೂವರು ಹೆಣ್ಣು ಮಕ್ಕಳ ಕತ್ತು ಸೀಳಿ ತರುವಾಯ ತಂದೆ ನೇಣಿಗೆ ಶರಣಾಗಿರುವ ಘಟನೆ ಕೇರಳದ ಕೊಟ್ಟಾಯಂನ ರಾಮಪುರಂನಲ್ಲಿ ನಡೆದಿದೆ.

ರಾಮಪುರಂನ ನಿವಾಸಿ ಜೋಮೋನ್
ರಾಮಪುರಂನ ನಿವಾಸಿ ಜೋಮೋನ್
author img

By ETV Bharat Karnataka Team

Published : Sep 4, 2023, 6:20 PM IST

Updated : Sep 4, 2023, 6:43 PM IST

ಕೊಟ್ಟಾಯಂ (ಕೇರಳ) : ಇಲ್ಲಿನ ರಾಮಪುರಂ ಬಳಿ ತನ್ನ ಮೂರು ಹೆಣ್ಣು ಮಕ್ಕಳ ಕತ್ತಿನ ಮೇಲೆ ದಾಳಿ ಮಾಡಿ, ಆ ಬಳಿಕ ಆರೋಪಿ ತಂದೆ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯು ನಿನ್ನೆ (ಸೆಪ್ಟೆಂಬರ್​ -3-2023) ಮಧ್ಯರಾತ್ರಿ ಜರುಗಿದೆ ಎಂಬುದಾಗಿ ತಿಳಿದುಬಂದಿದೆ. ರಾಮಪುರಂನ ನಿವಾಸಿ ಜೋಮೋನ್​ (40) ತನ್ನ ಮಕ್ಕಳ ಕತ್ತು ಸೀಳಿದ ನಂತರ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಕೃತ್ಯದ ವೇಳೆ ಹೆಣ್ಣು ಮಕ್ಕಳು ಜೋರಾಗಿ ಕಿರುಚಿದ್ದರಿಂದಾಗಿ ಸಾರ್ವಜನಿಕರಿಗೆ ವಿಷಯ ತಿಳಿದಿದೆ. ಗಾಯಗೊಂಡ ಹೆಣ್ಣು ಮಕ್ಕಳು 13, 10, ಹಾಗೂ 7 ವರ್ಷದವರಾಗಿದ್ದಾರೆ. ಈಗಾಗಲೇ ಇವರೆಲ್ಲರನ್ನೂ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಿರಿಯ ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜೋಮೋನ್​ ನೇಣಿಗೆ ಶರಣಾಗಿ ಮೃತಪಟ್ಟ ಸ್ಥಳಕ್ಕೆ ರಾಮಪುರಂನ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಹಿತಿ ಪ್ರಕಾರ, ಕಳೆದ ಒಂದೂವರೆ ವರ್ಷದ ಹಿಂದೆ ಜೋಮೋನ್ ಹೆಂಡತಿ, ಇವರು ಹಾಗೂ ಮೂವರು ಮಕ್ಕಳನ್ನು ಬಿಟ್ಟು ಹೋಗಿದ್ದಳು. ಇದಾದ ನಂತರ ಮೂರು ಮಕ್ಕಳ ಪಾಲನೆಯನ್ನು ಜೋಮೋನ್​ ನೋಡಿಕೊಳ್ಳುತ್ತಿದ್ದರು. ಅಪರಾಧಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ವ್ಯಕ್ತಿ ಆಲ್ಕೋಹಾಲ್​​ ಕುಡಿದು ಈ ಕೃತ್ಯ ಎಸಗಿರಬಹುದು ಎಂದು ಅನುಮಾನಿಸಲಾಗಿದೆ. ಕೌಟುಂಬಿಕ ಸಮಸ್ಯೆಗಳೆನಾದರೂ ಕಾರಣವಿರಬಹುದೆ? ಎಂಬ ಕುರಿತಾಗಿ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

7 ತಿಂಗಳ ಮಗು ಹತ್ಯೆ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದು ಪತಿ ಆತ್ಮಹತ್ಯೆ: 38 ವರ್ಷದ ವ್ಯಕ್ತಿಯೋರ್ವ ಏಳು ತಿಂಗಳ ಮಗುವನ್ನು ಕೊಲೆಗೈದು, ಕಟ್ಟಿಕೊಂಡ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಕೊನೆಗೂ ತಾನು ಆತ್ಮಹತ್ಯೆಗೆ (ಸೆಪ್ಟೆಂಬರ್-​ 24-2021) ಶರಣಾಗಿದ್ದ ಘಟನೆ ಕಣ್ಣೂರಿನಲ್ಲಿ ನಡೆದಿತ್ತು. ಗಂಡನಿಂದ ತೀವ್ರ ಸ್ವರೂಪದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಅಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಅವರ ಆರೋಗ್ಯಸ್ಥಿತಿ ಗಂಭೀರವಾಗಿತ್ತು.

ಯಾವ ಕಾರಣಕ್ಕಾಗಿ ಈ ಘಟನೆ ನಡೆಯಿತು ಎಂಬ ಮಾಹಿತಿ ಲಭ್ಯವಾಗಿರಲಿಲ್ಲ. ಪತಿ ಸತೀಶ್​​​ ಅಡುಗೆ ಮನೆ ಚಾಕು ಬಳಸಿ ಮಗುವನ್ನು ಗಾಯಗೊಳಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿತ್ತು. ಇದಾದ ಬಳಿಕ ಹೆಂಡತಿ ಮೇಲೂ ಹಲ್ಲೆ ಮಾಡಿದ್ದ. ಇದರ ಬೆನ್ನಲ್ಲೇ ತಾನು ಆತ್ಮಹತ್ಯೆಗೆ ಶರಣಾಗಿದ್ದ.

ಇದನ್ನೂ ಓದಿ: 7 ತಿಂಗಳ ಮಗು ಹತ್ಯೆ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದು ಪತಿ ಆತ್ಮಹತ್ಯೆ

Last Updated : Sep 4, 2023, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.