ETV Bharat / bharat

ಪತ್ನಿಯ ಮೇಲೆ ಸಂಶಯ: ಬ್ಲೇಡ್‌ನಿಂದ 26 ದಿನಗಳ ಮಗುವಿನ ಕುತ್ತಿಗೆ ಕೊಯ್ದ ಪಾಪಿ ಅಪ್ಪ! - ನವಜಾತ ಶಿಶುಗಳ ತೀವ್ರ ನಿಗಾ ಘಟಕ

ಪತ್ನಿಯ ಮೇಲೆ ಸಂಶಯಗೊಂಡು ವ್ಯಕ್ತಿಯೊಬ್ಬ ಬ್ಲೇಡ್‌ನಿಂದ 26 ದಿನಗಳ ಮಗುವಿನ ಕುತ್ತಿಗೆ ಮತ್ತು ಬಲಗೈ ಕೊಯ್ದಿರುವ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

father-brutal-attacks-his-26-days-old-infant-child-for-doubt-about-his-wife
ಪತ್ನಿಯ ಮೇಲೆ ಸಂಶಯ: ಬ್ಲೇಡ್‌ನಿಂದ 26 ದಿನಗಳ ಮಗುವಿನ ಕುತ್ತಿಗೆ ಕೊಯ್ದ ಪಾಪಿ ಅಪ್ಪ!
author img

By

Published : Jul 11, 2023, 3:38 PM IST

ವೆಲ್ಲೂರು (ತಮಿಳುನಾಡು): ಪತ್ನಿಯ ಮೇಲಿನ ಅನುಮಾನದಿಂದ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಬ್ಬರು ತನ್ನ 26 ದಿನಗಳ ಮಗುವಿನ ಮೇಲೆ ಅಮಾನುಷವಾಗಿ ದಾಳಿ ಮಾಡಿದ ಆರೋಪ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಸದ್ಯ ಹಸುಳೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ತಂದೆ ತಲೆ ಮರೆಸಿಕೊಂಡಿದ್ದಾನೆ. ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ಪತ್ತೆಗೆ ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ: ಪತ್ನಿಯ ಶೀಲ ಶಂಕಿಸಿ ಪತಿಯಿಂದ ಹತ್ಯೆ ಯತ್ನ: ಸತ್ತಳೆಂದು ಭಾವಿಸಿ ಆಕೆಯನ್ನು ರಸ್ತೆ ಬದಿ ಎಸೆದ?!

ವೆಲ್ಲೂರು ಜಿಲ್ಲೆಯ ಆನೈಕಟ್ಟು ತಾಲೂಕಿನ ದೇವಿಚೆಟ್ಟಿಕುಪ್ಪಂ ಗ್ರಾಮದ ಮಣಿಕಂದನ್​ ಎಂಬಾತನೇ ಚಿಕ್ಕ ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪಿ. ಈತ ಚೆನ್ನೈನ ತಾಂಬರಂ ವಿಭಾಗದಲ್ಲಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಸೆಪ್ಟೆಂಬರ್‌ನಲ್ಲಿ ವೆಲ್ಲೂರು ಜಿಲ್ಲೆಯ ರೆಟ್ಟಿಯೂರು ಗ್ರಾಮದ ಯುವತಿಯನ್ನು ವಿವಾಹವಾಗಿದ್ದಾನೆ.

ಕಳೆದ ತಿಂಗಳಷ್ಟೇ ಪತ್ನಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಪತ್ನಿಯ ಗರ್ಭಾವಸ್ಥೆಯ ಸಮಯದಲ್ಲಿ ತನ್ನ ಕೆಲಸದ ನಿಮಿತ್ತ ಜಿಲ್ಲೆಯಿಂದ ಮಣಿಕಂದನ್​ ಹೊರಗಡೆ ಇದ್ದ. ಮಹಿಳೆ ತವರು ಮನೆಗೆ ಬಂದಿದ್ದಳು. ಇದೇ ಭಾನುವಾರ ಮಗುವನ್ನು ನೋಡಲು ಅತ್ತೆಯ ಮನೆಗೆ ಮಣಿಕಂದನ್​ ಹೋಗಿದ್ದ. ತನ್ನ ಹೆಂಡತಿ ಮತ್ತು ಮಗುವನ್ನು ನೋಡಿದ ಮೇಲೆ ಪತ್ನಿಯನ್ನು ಅನುಮಾನಿಸಲು ಶುರು ಮಾಡಿದ್ದಾನೆ.

ಇದನ್ನೂ ಓದಿ: ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಪತಿ; ಬಳಿಕ ತಾನೂ ಆತ್ಮಹತ್ಯೆಗೆ ಶರಣು.. ಅನಾಥರಾದ ಐವರು ಮಕ್ಕಳು

'ಮಗು ನನ್ನಂತೆ ಕಾಣುತ್ತಿಲ್ಲ' ಎಂದು ಪತ್ನಿಯ ಬಳಿ ತಗಾದೆ ತೆಗೆದಿದ್ದಾನೆ. ಇದರಿಂದ ಗಂಡ ಮತ್ತು ಹೆಂಡತಿ ನಡುವೆ ಜಗಳ ಶುರುವಾಗಿದೆ. ಇದೇ ವೇಳೆ ಕೋಪಗೊಂಡ ಮಣಿಕಂದನ್ ತನ್ನ 26 ದಿನಗಳ ಮಗುವನ್ನು ಕುತ್ತಿಗೆ ಮತ್ತು ಬಲಗೈಯನ್ನು ಬ್ಲೇಡ್‌ನಿಂದ ಬರ್ಬರವಾಗಿ ಕೊಯ್ದಿದ್ದಾನೆ. ಹೀಗಾಗಿ ಮಗುವಿಗೆ ರಕ್ತ ಸ್ರಾವವಾಗಿದ್ದು, ಆರೋಪಿಯಿಂದ ಕೈಯಿಂದ ಪತ್ನಿಯ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಶಿಶುವನ್ನು ರಕ್ಷಿಸಿದ್ದಾರೆ.

ಅಲ್ಲಿಂದ ಆನೈಕಟ್ಟು ಸರ್ಕಾರಿ ಆಸ್ಪತ್ರೆಗೆ ಮಗುವಿನ ಸಾಗಿಸಿದ್ದಾರೆ. ನಂತರ ಪ್ರಥಮ ಚಿಕಿತ್ಸೆ ಬಳಿಕ ಮಗುವನ್ನು ಅಡುಕ್ಕಂಪರೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಮಗು ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ವೈದ್ಯರು ಮಗುವಿನ ಆರೋಗ್ಯವನ್ನು ತೀವ್ರವಾಗಿ ನಿಗಾ ವಹಿಸಿದ್ದಾರೆ. ಮತ್ತೊಂದೆಡೆ, ಈ ಅಮಾನುಷ ಕೃತ್ಯದ ನಂತರ ಆರೋಪಿ ಪರಾರಿಯಾಗಿದ್ದಾನೆ. ಈ ಬಗ್ಗೆ ಆಣೆಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಣಿಕಂದನ್‌ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪತ್ನಿ ಕೆಂಪು ಮಗಳು ಕಪ್ಪು.. ಶಂಕಿಸಿ ಹೆಂಡ್ತಿ ಕೊಂದ ಪತಿ.. ತಾಯಿ ಕೊಲೆಯ ರಹಸ್ಯ ವಿವರಿಸಿದ ಮಗು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.