ನೆಲ್ಲೂರು (ಆಂಧ್ರ ಪ್ರದೇಶ): ಇಲ್ಲಿನ ಸಜ್ಜಾಪುರಂ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಕೆರೆಗೆ ಉರುಳಿದ ಪರಿಣಾಮ ಐವರು ಸಾವನಪ್ಪಿದ್ದಾರೆ. ಗೊಲ್ಲಕಂಡುಕುರುವಿನ ಹತ್ತಿರದ ಮೀನು ಸಾಕಾಣಿಕ ಕೆರೆಗೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಲ್ಲಂಗಡಿಗಳನ್ನು ಕತ್ತರಿಸಲು ಹೋಗುವಾಗ, ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿದೆ. ಅಪಘಾತದಲ್ಲಿ ಕೃಷ್ಣವೇಣಿ, ಹರಿಬಾಬು, ಲಕ್ಷ್ಮಿ ಕಾಂತಮ್ಮ, ಪಂಚಾಲಯ ಮತ್ತು ವೆಂಕರಾಣಮ್ಮ ಸಾವನ್ನಪ್ಪಿದ್ದಾರೆ.
ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಗ್ರಾಮೀಣ ಶಾಸಕ ಕೋಟಮ್ರೆಡ್ಡಿ ಶ್ರೀಧರ್ ರೆಡ್ಡಿ ಸ್ಥಳಕ್ಕೆ ತಲುಪಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.