ನವದೆಹಲಿ : ರೈತರ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವ ಆರೋಪದಡಿ ಟ್ವಿಟರ್ 250 ಖಾತೆಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿರ್ದೇಶನದ ಮೇರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
Modi style of governance-
— Rahul Gandhi (@RahulGandhi) February 2, 2021 " class="align-text-top noRightClick twitterSection" data="
Shut them up
Cut them off
Crush them down. pic.twitter.com/Rdi0A8ftgp
">Modi style of governance-
— Rahul Gandhi (@RahulGandhi) February 2, 2021
Shut them up
Cut them off
Crush them down. pic.twitter.com/Rdi0A8ftgpModi style of governance-
— Rahul Gandhi (@RahulGandhi) February 2, 2021
Shut them up
Cut them off
Crush them down. pic.twitter.com/Rdi0A8ftgp
ಬಾಯಿ ಮುಚ್ಚಿಸುವುದು, ಹತ್ತಿಕ್ಕುವುದು, ತುಳಿಯುವುದು ಮೋದಿ ಸರ್ಕಾರದ ಆಡಳಿತದ ಶೈಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದ 'ನಕಲಿ, ಬೆದರಿಸುವ ಮತ್ತು ಪ್ರಚೋದನಕಾರಿ' ಟ್ವೀಟ್‌ಗಳನ್ನು ಮಾಡಿದ್ದರೆಂದು ಆರೋಪಿಸಿ ಹಲವಾರು ಖಾತೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ನಿರ್ದೇಶಿಸಿದ ನಂತರ ಟ್ವಿಟರ್, ಸೋಮವಾರ ಸುಮಾರು 250 ಖಾತೆಗಳು ಮತ್ತು ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಓದಿ: ಪ್ರತಿಭಟನೆಗೆ ಪ್ರಚೋದನೆ ನೀಡ್ತಿರುವ ಆರೋಪ : 250 ಟ್ವಿಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ..
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿ ಈ ಟ್ವಿಟರ್ ಖಾತೆಗಳನ್ನು ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಆದೇಶಿಸಿದೆ ಎಂದು ತಿಳಿದು ಬಂದಿದೆ.