ETV Bharat / bharat

ಮುಂದುವರಿದ ರೈತರ ಪ್ರತಿಭಟನೆ: ಜನವರಿ 8ರಂದು ಮುಂದಿನ ಹಂತದ ಮಾತುಕತೆ

author img

By

Published : Jan 6, 2021, 10:51 AM IST

ತೀವ್ರ ಚಳಿ ಹಾಗೂ ಮಳೆಯ ಸಂದರ್ಭದಲ್ಲೂ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆ ಸಫಲಗೊಳ್ಳದ ಕಾರಣ, ಹಂತದ ಮಾತುಕತೆ ಜನವರಿ 8ರಂದು ನಡೆಯಲಿದೆ.

protest
protest

ನವದೆಹಲಿ: ತೀವ್ರ ಚಳಿ ಹಾಗೂ ಮಳೆಯ ನಡುವೆಯೂ ರೈತರ ಪ್ರತಿಭಟನೆ ಮುಂದುವರೆದಿದೆ. ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಬೇಡಿಕೆಗಾಗಿ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆ ಕೂಡ ಸಫಲಗೊಂಡಿಲ್ಲ. ರೈತ ಸಂಘಟನೆಗಳ ಪ್ರತಿನಿಧಿಗಳು ಈ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಬೇಡಿಕೆಯ ಮೇಲೆಯೇ ಅಚಲವಾಗಿದ್ದರು. ಆದರೆ, ಸರ್ಕಾರವು ಕಾನೂನುಗಳ ನ್ಯೂನತೆಗಳು ಅಥವಾ ಅವುಗಳ ಇತರ ಆಯ್ಕೆಗಳ ಕುರಿತು ಚರ್ಚಿಸಲು ಬಯಸಿತ್ತು.

ಹೀಗಾಗಿ ಮುಂದಿನ ಹಂತದ ಮಾತುಕತೆ ಜನವರಿ 8ರಂದು ನಡೆಯಲಿದೆ. ಮೂರು ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರ ಆಂದೋಲನಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣವಾಗಿ ತಿಳಿದಿದ್ದು, ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಂಜಾಬ್ ಘಟಕದ ಮುಖಂಡರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.