ETV Bharat / bharat

ಮುಂದುವರಿದ ರೈತರ ಹೋರಾಟ; ಇಂದು 11ನೇ ಸುತ್ತಿನ ಮಾತುಕತೆ - 11 ನೇ ಸುತ್ತಿನ ಮಾತುಕತೆ

ಯುನೈಟೆಡ್ ಕಿಸಾನ್ ಮೋರ್ಚಾದ ಸಭೆ ನಡೆಸಿದ್ದು, ಇದರಲ್ಲಿ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ರೈತ ಸಂಘದ ನಾಯಕ ಜಗ್ಜಿತ್ ಸಿಂಗ್ ದಲ್ಲೆವಾಲ್ ಮಾತನಾಡಿ, ಸಭೆ ನಡೆಯುತ್ತಿದ್ದು, ಸರ್ಕಾರದ ಪ್ರಸ್ತಾವನೆಯನ್ನು ಇನ್ನೂ ತಿರಸ್ಕರಿಸಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

NAT-HN-farmers protest against farm laws and talks with govt in delhi-desk
ಮುಂದುವರೆದ ಅನ್ನದಾತರ ಹೋರಾಟ; ಇಂದು 11 ನೇ ಸುತ್ತಿನ ಮಾತುಕತೆ
author img

By

Published : Jan 22, 2021, 8:30 AM IST

ನವದೆಹಲಿ: ರೈತರ ಪ್ರತಿಭಟನೆ ಮುಂದುವರೆದಿದ್ದು, ಸರ್ಕಾರದ ಪ್ರಸ್ತಾವನೆಯನ್ನು ನಿನ್ನೆ ಯುನೈಟೆಡ್ ಕಿಸಾನ್ ಮೋರ್ಚಾ ತಿರಸ್ಕರಿಸಿದೆ. ಕಾನೂನಿನ ಅನುಷ್ಠಾನವನ್ನು ಒಂದೂವರೆ ವರ್ಷಕ್ಕೆ ಮುಂದೂಡಬಹುದು ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆ ರೈತ ಸಂಘ ಮತ್ತು ಸರ್ಕಾರ ಮಾತುಕತೆ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬಹುದು.

ಯುನೈಟೆಡ್ ಕಿಸಾನ್ ಮೋರ್ಚಾದ ಸಭೆ ನಡೆಸಿದ್ದು, ಇದರಲ್ಲಿ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ರೈತ ಸಂಘದ ನಾಯಕ ಜಗ್ಜಿತ್ ಸಿಂಗ್ ದಲ್ಲೆವಾಲ್ ಮಾತನಾಡಿ, ಸಭೆ ನಡೆಯುತ್ತಿದ್ದು, ಸರ್ಕಾರದ ಪ್ರಸ್ತಾವನೆಯನ್ನು ಇನ್ನೂ ತಿರಸ್ಕರಿಸಲಾಗಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಕೆಲವು ರೈತ ಮುಖಂಡರು ಈ ಪ್ರಸ್ತಾವನೆಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಇಂದಿನ ಸಭೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ರೈತ ಮುಖಂಡ ದರ್ಶನ್ ಪಾಲ್ ಹೊರಡಿಸಿದ ಹೇಳಿಕೆ ಪ್ರಕಾರ, ಯುನೈಟೆಡ್ ಕಿಸಾನ್ ಮೋರ್ಚಾದ ಸಾಮಾನ್ಯ ಸಭೆಯಲ್ಲಿ ಸರ್ಕಾರ ಮಂಡಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಬರೇಲಿ ಪೊಲೀಸರಿಂದ ಮಂಜಿಂದರ್ ಸಿಂಗ್ ಸಿರ್ಸಾ ಬಂಧನ: ಅಕಾಲಿ ನಾಯಕರ ಟ್ವೀಟ್​

ಇಂದು ಪ್ರತಿಭಟನಾಕಾರ ರೈತ ಸಂಘಟನೆಗಳ ಮುಖಂಡರು ಮತ್ತು ಸರ್ಕಾರದ ನಡುವೆ 11ನೇ ಸುತ್ತಿನ ಪ್ರಮುಖ ಮಾತುಕತೆ ನಡೆಯಲಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.