ನವದೆಹಲಿ: ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿ ಇದೀಗ ರೈತರ ಹಿತದೃಷ್ಟಿಯಿಂದ ವಾಪಸ್ ಪಡೆಯುವುದಾಗಿ ಹೇಳಿರುವ 3 ಕೃಷಿಕಾಯ್ದೆ (ತಿದ್ದುಪಡಿ)ಗಳ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷವಾಗಿದೆ.
-
Farmers in large numbers gathered at the Singhu border to observe the first anniversary of protest against the three farm laws pic.twitter.com/gDBjr2VLgN
— ANI (@ANI) November 26, 2021 " class="align-text-top noRightClick twitterSection" data="
">Farmers in large numbers gathered at the Singhu border to observe the first anniversary of protest against the three farm laws pic.twitter.com/gDBjr2VLgN
— ANI (@ANI) November 26, 2021Farmers in large numbers gathered at the Singhu border to observe the first anniversary of protest against the three farm laws pic.twitter.com/gDBjr2VLgN
— ANI (@ANI) November 26, 2021
ಪ್ರತಿಭಟನೆಯ ಮೊದಲ ವರ್ಷಾಚರಣೆಗೆ ಪಂಜಾಬ್, ಹರಿಯಾಣ ಸೇರಿ ಹಲವು ಭಾಗದ ರೈತರು ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಭಾಗಕ್ಕೆ ಹಿಂತಿರುಗಿದ್ದು, ಈ ದಿನವನ್ನು ಆಚರಿಸುವ ಮೂಲಕ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ.
ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವದ ನಿಮಿತ್ತ ಇಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆ, ದೆಹಲಿ ಗಡಿಯಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಇಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವೆಡೆ ಪ್ರತಿಭಟನೆ:
ರೈತ ಮುಖಂಡರು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಖಚಿತಪಡಿಸಿವೆ. ದೆಹಲಿಯ ಹೊರತಾಗಿ, ಕರ್ನಾಟಕ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ವಿವಿಧ ಭಾಗಗಳು ಸೇರಿದಂತೆ ರೈತರು ಹಲವೆಡೆ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಎಲ್ಲ ಕಡೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ರೈತರಿಗೆ ಶ್ರದ್ಧಾಂಜಲಿ:
ಇನ್ನೂ ದೇಶದಾದ್ಯಂತ ರೈತರು ತಮ್ಮ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವ ಆಚರಿಸಲು ಸಜ್ಜಾಗುತ್ತಿದ್ದು, ರೈತ ಸಂಘದ ನಾಯಕ ರಾಕೇಶ್ ಟಿಕಾಯತ್ ಅವರು ತಮ್ಮ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆ. ವಾರ್ಷಿಕೋತ್ಸವದ ನಿಮಿತ್ತ ಪ್ರತಿಭಟನೆ ವೇಳೆ ಪ್ರಾಣ ಕಳೆದುಕೊಂಡ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
-
Haryana | Farmers hold 'Kisan Mahapanchayat' on the first anniversary of protests against the three farm laws at Bahadurgarh pic.twitter.com/XFb9zWqst1
— ANI (@ANI) November 26, 2021 " class="align-text-top noRightClick twitterSection" data="
">Haryana | Farmers hold 'Kisan Mahapanchayat' on the first anniversary of protests against the three farm laws at Bahadurgarh pic.twitter.com/XFb9zWqst1
— ANI (@ANI) November 26, 2021Haryana | Farmers hold 'Kisan Mahapanchayat' on the first anniversary of protests against the three farm laws at Bahadurgarh pic.twitter.com/XFb9zWqst1
— ANI (@ANI) November 26, 2021
ಪ್ರತಿಭಟನೆ ಸಲುವಾಗಿ ದೆಹಲಿ ಪ್ರವೇಶಿಸಲು ಅನುಮತಿ ಪಡೆದಿದ್ದೀರಾ ಮಾಧ್ಯಮದವರು ಪ್ರಶ್ನಿಸಿದಾಗ, ನಮಗೆ ಅನುಮತಿ ಏಕೆ ಬೇಕು? ಇದು ಚೀನಾವೇ? ಅಥವಾ ಇದು ಕೊರಿಯಾವೇ? ದೆಹಲಿಗೆ ಹೋಗಲು ಅನುಮತಿ ಏಕೆ ಬೇಕು? ಎಂದು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ನಮ್ಮೊಂದಿಗೆ ಮಾತನಾಡಬೇಕು
ರೈತಸಂಘದ ಮುಖಂಡರ ಆಶಯದಂತೆ ಸರ್ಕಾರ ಆದಷ್ಟು ಬೇಗ ರೈತರೊಂದಿಗೆ ಎಂಎಸ್‌ಪಿ ಬಗ್ಗೆ ಮಾತನಾಡಲು ಮುಂದಾಗಬೇಕು. ಸರ್ಕಾರವು ನಮ್ಮೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬಂದ ನಂತರವೇ ಪ್ರತಿಭಟನೆಗಳು ಕೊನೆಗೊಳ್ಳುತ್ತವೆ. ಆದ್ರೀಗ ಸರ್ಕಾರವು ಎಂಎಸ್‌ಪಿ ಸಮಸ್ಯೆಯ ಬಗ್ಗೆ ಮಾತನಾಡುತ್ತಿಲ್ಲ. ಯಾವುದೇ ಸಂವಹನವಿಲ್ಲದಿದ್ದರೆ ಸರ್ಕಾರ ಹೇಗೆ ಕೆಲಸ ಮಾಡುತ್ತದೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಲಖಿಂಪುರ್ ಖೇರಿ ಪ್ರಕರಣ: ಸುಪ್ರೀಂಕೋರ್ಟ್ ಹೊಸದಾಗಿ ರಚಿಸಿದ ಎಸ್‌ಐಟಿಯಿಂದ ತನಿಖೆ ಶುರು