ETV Bharat / bharat

ಮಿಲಿಯನ್​ ಡಾಲರ್​ ಚಿತ್ರ.. ರೈತನ ಬಡತನದ ನೊಗಕ್ಕೆ ಭುಜ ಕೊಟ್ಟ ತಾಯಿ, ಮಗಳು! - ಪತ್ನಿ ಮಗಳನ್ನು ನೊಗಕ್ಕೆ ಕಟ್ಟಿದ ರೈತ

ಬಡತನ ಅದೆಂಥಾ ಕ್ರೂರಿ. ದುಡಿದು ತಿನ್ನುವ ಕೈಗಳನ್ನೂ ಅದು ಬಿಟ್ಟಿಲ್ಲ. ತೆಲಂಗಾಣದಲ್ಲಿ ತಾಯಿ - ಮಗಳು ನೊಗವನ್ನು ಎಳೆದು ಫಸಲಿನ ಮಧ್ಯೆ ಬೆಳೆದ ಕಳೆಯನ್ನು ನಾಶ ಮಾಡುತ್ತಿರುವ ಚಿತ್ರ ಮಿಲಿಯನ್​ ಡಾಲರ್​ಗಳಲ್ಲಿ ಒಂದಾಗಿದೆ.

farmer-used-wife-and-daughter-as-yoke
ರೈತನ ಬಡತನದ ನೊಗಕ್ಕೆ ಭುಜ ಕೊಟ್ಟ ತಾಯಿ, ಮಗಳು!
author img

By

Published : Jul 30, 2022, 1:33 PM IST

ನಾರಾಯಣಪೇಟೆ (ತೆಲಂಗಾಣ): ಬಡವನನ್ನು ಬಡತನ ಮತ್ತಷ್ಟು ಬಡವಾಗಿಸುತ್ತದೆ ಎಂಬುದು ಸುಳ್ಳಲ್ಲ. ದುಡಿದು ತಿನ್ನುವ ಅನಿವಾರ್ಯತೆಗೆ ಸಿಲುಕುವ ರೈತರು ಏನೆಲ್ಲ ಮಾಡುತ್ತಾರೆ ಗೊತ್ತಾ. ಬೆಳೆಯ ಮಧ್ಯೆ ಇರುವ ಕಳೆಯನ್ನು ನಾಶ ಮಾಡಲು ಎತ್ತುಗಳಿಲ್ಲದ ಕಾರಣ ರೈತನೊಬ್ಬ ತನ್ನ ಪತ್ನಿ ಮತ್ತು ಮಗಳನ್ನೇ ಎತ್ತುಗಳಂತೆ ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಿರುವ ಮನ ಮಿಡಿಯುವ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.

ನಾರಾಯಣಪೇಟೆ ಜಿಲ್ಲೆಯ ಚಿಂತಕುಂಟಾ ಗ್ರಾಮದ ಬಡ ರೈತ ಲಕ್ಷ್ಮಣ್ಣ ಕುಟುಂಬಸ್ಥರ ಕರುಣಾಜನಕ ಕಥೆಯಿದು. ಪರರ ಒಂದು ಎಕರೆ ಜಮೀನಿನನ್ನು ಗುತ್ತಿಗೆ ಪಡೆದಿರುವ ಲಕ್ಷ್ಮಣ್ಣ ಅವರು, ಇತ್ತೀಚೆಗೆ ಬೆಂಡೆಕಾಯಿ ಕೃಷಿ ಮಾಡಿದ್ದಾರೆ. ಕೆಲ ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಫಸಲಿನ ಮಧ್ಯೆ ಕಳೆ ವಿಪರೀತ ಬೆಳೆದುಕೊಂಡಿದೆ.

ಕಳೆ ಬೆಳೆದಿದ್ದರಿಂದ ಫಸಲಿಗೆ ಅಡ್ಡಿಯಾಗಿದೆ. ಅದನ್ನು ಕೀಳಲು ಬಾಡಿಗೆ ಎತ್ತುಗಳನ್ನು ಪಡೆಯಬೇಕಾದರೆ 2,500 ರೂಪಾಯಿ ನೀಡಬೇಕು. ಇಷ್ಟು ಹಣ ತಮ್ಮ ಬಳಿ ಇಲ್ಲದ್ದರಿಂದ ರೈತ ಲಕ್ಷ್ಮಣ್ಣರಿಗೆ ಪತ್ನಿ ಮತ್ತು ಮಗಳು ನೆರವಾಗಿ ತಾವೇ, ಎತ್ತುಗಳಂತೆ ನೊಗಕ್ಕೆ ಭುಜ ಕೊಟ್ಟು ಕಳೆ ನಾಶ ಮಾಡುತ್ತಿದ್ದಾರೆ.

"ಬಡತನದ ಕಾರಣ ನಮ್ಮಲ್ಲಿ ಹಣವಿಲ್ಲ. ಪರರ ಎತ್ತುಗಳನ್ನು ಬಾಡಿಗೆ ಪಡೆಯುವ ಐಸತ್ತೂ ನಮ್ಮಲ್ಲಿಲ್ಲ. ಹಾಗಾಗಿ ಹೆಂಡತಿ ಮಕ್ಕಳೇ ಕಳೆ ನಾಶ ಮಾಡಲು ನೆರವಾಗುತ್ತಿದ್ದಾರೆ" ಎಂದು ಲಕ್ಷ್ಮಣ್ಣ ಅವರು ತಿಳಿಸಿದರು. ತಾಯಿ -ಮಗಳು ನೊಗ ಹೊತ್ತಿರುವ ಚಿತ್ರ ಕರುಳು ಕಿವುಚುವಂತಿದೆ.

ಓದಿ: ಇದು ಕ್ಯಾಸಿನೊ ನಿರ್ವಾಹಕನ ತೋಟದ ಮನೆ ಅಲ್ಲ, ಸಣ್ಣ ಮೃಗಾಲಯ.. ಪ್ರವೀಣ್​ ಸೇರಿ ಐವರಿಗೆ ಇಡಿ ನೋಟಿಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.