ETV Bharat / bharat

ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ರೈತನ ಮಗಳಿಗೆ ಸಿಕ್ತು 34 ಲಕ್ಷ ರೂಪಾಯಿಯ ವಜ್ರ - ಈಟಿವಿ ಭಾರತ ಕರ್ನಾಟಕ

ಜಮೀನಿನಲ್ಲಿ ಕಳೆ ಕೀಳುತ್ತಿದ್ದ ಸಂದರ್ಭದಲ್ಲಿ ರೈತನ ಮಗಳಿಗೆ ವಜ್ರದ ಹರಳು ಸಿಕ್ಕಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Diamond found in land
Diamond found in land
author img

By

Published : Aug 10, 2022, 7:54 PM IST

ಕರ್ನೂಲ್​(ಆಂಧ್ರಪ್ರದೇಶ): ಅದೃಷ್ಟವೇ ಹಾಗೆ. ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗದು. ನಸೀಬು ಚೆನ್ನಾಗಿದ್ದರೆ ಕಡುಬಡವನೂ ಇದ್ದಕ್ಕಿದ್ದಂತೆ ಕೋಟ್ಯಧಿಪತಿಯಾಗಬಹುದು. ಇದೀಗ ಅಂಥದ್ದೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕರ್ನೂಲ್​ ಜಿಲ್ಲೆಯ ರೈತನೋರ್ವ ದಿಢೀರ್ ಶ್ರೀಮಂತನಾಗಿದ್ದಾನೆ.

ಕರ್ನೂಲ್‌ನ ರೈತ ತನ್ನ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆದಿದ್ದ. ಮಗಳೊಂದಿಗೆ ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ 10 ಕ್ಯಾರೆಟ್​ ಗುಣಮಟ್ಟದ ವಜ್ರ ಸಿಕ್ಕಿದೆ. ವಜ್ರ ವ್ಯಾಪಾರಿಯೊಬ್ಬರು ಇದನ್ನು 34 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸೌದೆ ತರಲು ಕಾಡಿಗೆ ಹೋದಾಗ ಸಿಕ್ತು ವಜ್ರ: ಆದಿವಾಸಿ ಮಹಿಳೆಯ ಅದೃಷ್ಟವೇ ಬದಲು!

ತುಗ್ಗಲಿ ಮಂಡಲದ ಜಿ.ಎರ್ರಗುಡಿ ಗ್ರಾಮದ ರೈತನ ಕುಟುಂಬದಲ್ಲೀಗ ಸಂತಸ ಮನೆಮಾಡಿದೆ. ಕರ್ನೂಲ್​ನ ಜೊನ್ನಗಿರಿ, ಪಗಿದ್ರಾಯಿ, ಜಿ.ಎರ್ರಗುಡಿ, ತುಗ್ಗಲಿ ಭಾಗದ ಹೊಲಗಳಲ್ಲಿ ಈಗಾಗಲೇ ಹಲವು ಬಾರಿ ವಜ್ರಗಳು ಪತ್ತೆಯಾದ ನಿದರ್ಶನಗಳಿವೆ. ಮಳೆಗಾಲದ ಸಂದರ್ಭದಲ್ಲಿ ಕೆಲವೆಡೆ ವಜ್ರದ ಹರಳುಗಳು ಸಿಗುತ್ತಿವೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.