ಹಿಂಗೋಲಿ (ಮಹಾರಾಷ್ಟ್ರ): ಇಲ್ಲಿನ ಸೆಂಗಾಂವ್ ತಾಲೂಕಿನ ತಕ್ತೋಡ ಗ್ರಾಮದ ನಿವಾಸಿ ಕೈಲಾಸ್ ಪತಂಗೆ ಎಂಬ ರೈತ ಹೆಲಿಕಾಪ್ಟರ್ ಖರೀದಿಗಾಗಿ ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋಗಿದ್ದಾರೆ. ಹೊಲದಲ್ಲಿ ದುಡಿದು ಹೆಲಿಕಾಪ್ಟರ್ ಖರೀದಿಸಲು ಸಾಧ್ಯವಿಲ್ಲ, ಹಾಗಾಗಿ ಬ್ಯಾಂಕ್ನವರು ಸಾಲ ನೀಡಬೇಕು ಎಂದು ಅರ್ಜಿಯಲ್ಲಿ ಕೇಳಿಕೊಂಡಿದ್ದಾನೆ. ಈ ರೈತನ ಬೇಡಿಕೆ ಎಲ್ಲೆಡೆ ಬಹಳ ಚರ್ಚೆಗೆ ಗ್ರಾಸವಾಗಿದೆ.
ಹೆಲಿಕಾಪ್ಟರ್ ಖರೀದಿಸಿ ಬಾಡಿಗೆಗೆ ನೀಡಿದ್ರೆ ಗಂಟೆಗೆ 65,000 ರೂಪಾಯಿ ದುಡಿಯಬಹುದು. ಇದರಿಂದ ಭಾರಿ ಲಾಭ ಬರಲಿದೆ. ಕೃಷಿಯಲ್ಲಿ ಯಾವುದೇ ಲಾಭ ಆಗುತ್ತಿಲ್ಲ. ದೊಡ್ಡವರಿಗೆ ಮಾತ್ರ ದೊಡ್ಡ ಕನಸುಗಳಿರಬೇಕು ಎಂದು ಯಾರು ಹೇಳುತ್ತಾರೆ? ರೈತರೂ ದೊಡ್ಡ ಕನಸು ಕಾಣಬಹುದಲ್ಲ?. ಹೆಲಿಕಾಪ್ಟರ್ ಖರೀದಿಸಲು ಕೋಟಿಗಟ್ಟಲೆ ಹಣ ಬೇಕು. ಹಾಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇತರ ವ್ಯವಹಾರಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಆದ್ದರಿಂದ ನಾನು ಇದನ್ನು ಮಾಡಲು ನಿರ್ಧರಿಸಿದೆ ಎಂದು ರೈತ ಕೈಲಾಸ್ ಪತಂಗೆ ಹೇಳುತ್ತಾರೆ.
ಇದನ್ನೂ ಓದಿ:ಜನ್ಮ ಕೊಟ್ಟು ಆಸ್ಪತ್ರೆಯಲ್ಲೇ ಅವಳಿ ಮಕ್ಕಳ ಬಿಟ್ಟು ಹೋದ ಮಾನಸಿಕ ಅಸ್ವಸ್ಥೆ!