ETV Bharat / bharat

ಕೃಷಿ ಕಾಯ್ದೆಗಳ ಹಿಂಪಡೆದ ಕೇಂದ್ರ.. ಕಾಯ್ದೆಗಳ ಜಾರಿ, ಪ್ರತಿಭಟನೆಯ ಘಟನಾವಳಿಗಳ ಪಕ್ಷಿನೋಟ - Centre Repeals Farm Laws

ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ 1 ವರ್ಷದಿಂದ ಸತತವಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ವಿವಾದಿತ ಮೂರು ಕೃಷಿ ಕಾಯ್ದೆಗಳ ಜಾರಿ ಮತ್ತು ವಿರೋಧಕ್ಕಾಗಿ ನಡೆದ ಘಟನಾವಳಿಗಳ ಬಗ್ಗೆ ಒಂದು ಮೆಲುಕು ಹಾಕೋಣ.

Farm Laws Timeline
ಘಟನಾವಳಿಗಳ ಪಕ್ಷಿನೋಟ
author img

By

Published : Nov 19, 2021, 1:10 PM IST

ಕೃಷಿ ಕಾಯ್ದೆ ಜಾರಿ ವಿರೋಧಿಸಿ ಸತತ 1 ವರ್ಷದಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಯ ಕೂಗಿಗೆ ಕೇಂದ್ರ ಸರ್ಕಾರ ಕೊನೆಗೂ ಜಗ್ಗಿದೆ. ಸುಗ್ರೀವಾಜ್ಞೆ ಹೊರಡಿಸುವ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಕೇಂದ್ರ ಮುಂದಾಗಿತ್ತು. ಇದಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿ ಹಲವಾರು ಪ್ರತಿಭಟನೆಗಳು, ಪ್ರಾಣತ್ಯಾಗಗಳು ನಡೆದು ಹೋಗಿವೆ.

ದೆಹಲಿಯಲ್ಲಿ ಕಾಯ್ದೆಗಳ ವಿರುದ್ಧ 1 ವರ್ಷದಿಂದ ಸತತವಾಗಿ ಪ್ರತಿಭಟನೆ ನಡೆಸಲಾಗಿತ್ತು. ಈ ವಿವಾದಿತ ಮೂರು ಕೃಷಿ ಕಾಯ್ದೆಗಳ ಜಾರಿ ಮತ್ತು ವಿರೋಧಕ್ಕಾಗಿ ನಡೆದ ಘಟನಾವಳಿಗಳ ಹೂರಣ ಹೀಗಿದೆ.

ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ(ಜೂನ್ 05)

ಕೇಂದ್ರ ಸರ್ಕಾರ ಕೃಷಿ ಸಂಬಂಧಿತ 3 ಮಸೂದೆಗಳನ್ನು ಕಾಯ್ದೆಗಳಾಗಿ ಪರಿವರ್ತಿಸಲು ಅಗತ್ಯವಾದ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.

ಕಾಯ್ದೆಗಳಿಗೆ ಮೊದಲ ವಿರೋಧ (ಜೂನ್ 14)

ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್(ಉಗ್ರಹಾನ್) ಧ್ವನಿ ಎತ್ತಿತು.

ಪಂಬಾಬ್​ನಲ್ಲಿ ಮೊದಲ ಹೋರಾಟ ಶುರು( ಜೂನ್ 14 ರಿಂದ 30)

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಕಾಯ್ದೆಗಳ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದರು. ಬಂಡವಾಳಶಾಹಿ ಕಂಪನಿಗಳ ಮುಲಾಜಿಗೆ ಬಿದ್ದ ಸರ್ಕಾರ ಈ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವ್ಯವಸ್ಥೆಗೆ ಭಾರಿ ಹೊಡೆ ಬೀಳುವ ಅಪಾಯವಿದೆ ಎಂದು ಪ್ರತಿಭಟನಾನಿರತ ರೈತರು ದೂಷಿಸಲು ಶುರು ಮಾಡಿದರು. ಪಂಜಾಬ್​ನಲ್ಲಿ ಈ ಕಾಯ್ದೆಗಳ ವಿರುದ್ಧ ಮೊದಲ ಹೋರಾಟ ಆರಂಭವಾಗಯಿತು.

ಎನ್​ಡಿಎಯಿಂದ ಶಿರೋಮಣಿ ಅಕಾಲಿಕ ದಳ ಹೊರಕ್ಕೆ(ಸೆಪ್ಟೆಂಬರ್ 17)

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ(ಎನ್​ಡಿಎ) ದೀರ್ಘಕಾಲದವರೆಗೂ ಗುರುತಿಸಿಕೊಂಡಿದ್ದ ಶಿರೋಮಣಿ ಅಕಾಲಿಕ ದಳವು ಕೃಷಿ ಸಂಬಂಧಿತ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಮೈತ್ರಿಕೂಟದಿಂದ ಹೊರ ನಡೆಯಿತು. ಕೇಂದ್ರ ಆಹಾರ ಸಚಿವೆ ಸ್ಥಾನಕ್ಕೆ ಹರ್​ಸಿಮ್ರತ್​ ಕೌರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರೈಲು ತಡೆ ಚಳವಳಿ(ಸೆಪ್ಟೆಂಬರ್ 24)

ಪಂಜಾಬ್​ನಲ್ಲಿ ಮೊದಲು 3 ದಿನಗಳವರೆಗೂ "ರೈಲು ತಡೆ" ಚಳವಳಿಯನ್ನು ಆರಂಭಿಸಲಾಯಿತು. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಆರಂಭಿಸಿದ ಹೋರಾಟಕ್ಕೆ ಕಾಲನಂತರ ಹಲವು ರೈತ ಸಂಘಟನೆಗಳು ಬೆಂಬಲಿಸಿದರು.

ಕಾಯ್ದೆಗಳಿಗೆ ರಾಷ್ಟ್ರಪತಿ ಅಂಕಿತ (ಸೆಪ್ಟೆಂಬರ್ 27)

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ್ದ ಕೇಂದ್ರ ಸರ್ಕಾರ ಮೂರು ಕೃಷಿ ಸಂಬಂಧಿತ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ಮೂಲಕ ಅನುಮೋದನೆ ನೀಡಿದರು.

ಭಾರತದಾದ್ಯಂತ ರಸ್ತೆ ತಡೆಗೆ ರೈತರ ಕರೆ(ನವೆಂಬರ್ 03)

ಕಾಯ್ದೆಗಳ ಜಾರಿ ವಿರುದ್ಧ ರಸ್ತೆ ತಡೆ ನಡೆಸುವಂತೆ ರೈತ ಸಂಘಟನೆಗಳು ಕರೆ ನೀಡಿದ್ದವು.

ದೆಹಲಿ ಚಲೋ ಚಳವಳಿಗೆ ಕರೆ(ನವೆಂಬರ್ 25)

ಪಂಜಾಬ್ ಮತ್ತು ಹರಿಯಾಣದ ರೈತಪರ ಸಂಘಟನೆಗಳು "ದೆಹಲಿ ಚಲೋ" ಚಳವಳಿಗೆ ಕರೆ ಕೊಟ್ಟವು.

ದೆಹಲಿ ಗಡಿ ಪ್ರವೇಶಿಸಿದ ರೈತರು(ನವೆಂಬರ್ 27)

ದೆಹಲಿ ಚಲೋ ಕರೆಗೆ ಓಗೊಟ್ಟ ಸಾವಿರಾರು ರೈತರು ದೆಹಲಿಗೆ ಪ್ರವೇಶಿಸಲು ರಾಜ್ಯದ ಗಡಿಭಾಗದಲ್ಲಿ ಬರುತ್ತಿರುವಾಗ ಪೊಲೀಸರು ರೈತರನ್ನು ಗಡಿ ಪ್ರದೇಶದಲ್ಲಿಯೇ ತಡೆ ಹಿಡಿದರು.

ಟ್ರ್ಯಾಕ್ಟರ್​ಗಳ ಮೂಲಕ ದೆಹಲಿ ಪ್ರವೇಶ(ನವೆಂಬರ್ 28)

ಕಾಯ್ದೆಗಳ ವಿರುದ್ಧ ಸಾವಿರಾರು ಪ್ರತಿಭಟನಾನಿರತ ರೈತರು ಟ್ರ್ಯಾಕ್ಟರ್, ಟ್ರ್ಯಾಲಿ, ಎತ್ತಿನಬಂಡಿಗಳ ಸಮೇತ ನೂರಾರು ವಾಹನಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತಲುಪಿದರು.

ಮಾತುಕತೆಗೆ ಅಮಿತ್​ ಶಾ ಆಹ್ವಾನ, ರೈತರ ತಿರಸ್ಕಾರ(ನವೆಂಬರ್​ 28)

ಪ್ರತಿಭಟನೆಯನ್ನು ಕೈಬಿಟ್ಟು, ಕೃಷಿ ಕಾಯ್ದೆಗಳಲ್ಲಿನ ಲೋಪಗಳ ಬಗ್ಗೆ ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್​ ಶಾರಿಂದ ರೈತ ನಾಯಕರಿಗೆ ಆಹ್ವಾನ. ಕೃಷಿ ಕಾಯ್ದೆ ವಾಪಸ್​ ಪಡೆದರಷ್ಟೇ ಮಾತುಕತೆ ಸಾಧ್ಯ ಎಂದು ಆಹ್ವಾನ ತಿರಸ್ಕರಿಸಿದ ರೈತರು.

ಪ್ರಧಾನಿಯಿಂದ ಮನ್​ ಕೀ ಬಾತ್​ನಲ್ಲಿ ಕೋರಿಕೆ(ನವೆಂಬರ್ 29)

ರೈತರ ಹೋರಾಟದ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕೀ ಬಾತ್​ನಲ್ಲಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಒಬ್ಬ ರೈತನ ಬಗ್ಗೆ ಪ್ರಸ್ತಾಪಿಸಿ ಕಾಯ್ದೆಗಳಿಂದಾಗುವ ಉಪಯೋಗದ ಮಾತನಾಡಿದ್ದರು.

ಕೇಂದ್ರ-ರೈತರ ಮಧ್ಯೆ ಮೊದಲ ಮಾತುಕತೆ(ನವೆಂಬರ್ 3 ರಿಂದ 5)

ಕೇಂದ್ರ ಸರ್ಕಾರ ಮತ್ತು ರೈತ ನಾಯಕರ ಮಧ್ಯೆ ಮೊದಲ ಬಾರಿಗೆ ಮಾತುಕತೆ ನಡೆಸಲಾಯಿತು. ಆದರೆ, ಕಾಯ್ದೆ ಹಿಂಪಡೆಯಲು ಕೇಂದ್ರ ಒಪ್ಪದ ಕಾರಣ ಮಾತುಕತೆ ವಿಫಲ. ಡಿ.5ರಂದು 2ನೇ ಸಲ ಮಾತುಕತೆ ಆಗಲೂ ಸಂಧಾನ ವಿಫಲ.

ಸುಪ್ರೀಂ ಕೋರ್ಟ್​ಗೆ ರೈತರ ದೂರು(ಡಿಸೆಂಬರ್​ 11)

ಕೃಷಿ ಕಾಯ್ದೆಗಳ ವಿರುದ್ಧ ಮೊದಲ ಬಾರಿಗೆ ಸುಪ್ರೀಂ ಕೋರ್ಟ್​ ಮೊರೆ ಹೋದ ರೈತರು. ಭಾರತೀಯ ಕಿಸಾನ್​ ಸಂಘದಿಂದ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ.

ಕೃಷಿ ಕಾಯ್ದೆ ತಿದ್ದುಪಡಿ ಪ್ರಸ್ತಾಪ ತಿರಸ್ಕರಿಸಿದ ರೈತರು(ಡಿಸೆಂಬರ್ 09)

ವಿವಾದಾತ್ಮಕ ಕೃಷಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದರು. ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದರು.

ದೆಹಲಿಗೆ ಹೊರಟ ರೈತರಿಗೆ ಪೊಲೀಸರ​ ತಡೆ(ಡಿಸೆಂಬರ್ 13)

ರಾಜಸ್ಥಾನ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ಹರಿಯಾಣದ ಗಡಿಯ ಮೂಲಕ ದೆಹಲಿಗೆ ಹೊರಟಿದ್ದ ಸಾವಿರಾರು ಪ್ರತಿಭಟನಾನಿರತ ರೈತರನ್ನು ಪೊಲೀಸರು ತಡೆದರು.ಇದರಿಂದ ಕೆರಳಿದ ಪ್ರತಿಭಟನಾಕಾರರು ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲೇ ಕುಳಿತು ಪ್ರತಿಭಟನೆ ಮಾಡಿದರು.

ಕಾಯ್ದೆಗಳ ವಿರುದ್ಧ ಕೋರ್ಟ್​ನಲ್ಲಿ ವಿಚಾರಣೆ (ಜನವರಿ 11,2021)

ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ.ಬೊಬ್ದೆ, ಎ.ಎಸ್.ಬೋಪಣ್ಣ ಮತ್ತು ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಿಂದ ವಿಚಾರಣೆ.

ಸುಪ್ರೀಂನಿಂದ ಕೇಂದ್ರಕ್ಕೆ ತರಾಟೆ(ಜನವರಿ 12)

ರೈತರ ಪ್ರತಿಭಟನೆಯನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿಗೆ ಸುಪ್ರೀಂ ಕೋರ್ಟ್​ ಗರಂ. ಕಾಯ್ದೆಗಳ ಮೇಲ್ವಿಚಾರಣೆ ಮತ್ತು ಬದಲಾವಣೆಗೆ ಸಮಿತಿ ರಚಿಸಲು ಸೂಚನೆ.

ಕಾಯ್ದೆಗಳ ತಾತ್ಕಾಲಿಕ ತಡೆಗೆ ಕೇಂದ್ರ ಒಪ್ಪಿಗೆ (ಜನವರಿ 20)

ಪ್ರತಿಭಟನೆಯ ತೀವ್ರ ಸ್ವರೂಪ, ಸುಪ್ರೀಂ ಕೋರ್ಟ್​ ತರಾಟೆ ಬಳಿಕ ಮೂರು ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ತಾತ್ಕಾಲಿಕವಾಗಿ ತಡೆ ಹಿಡಿಯಲು ಒಪ್ಪಿದ ಕೇಂದ್ರ ಸರ್ಕಾರ. ಇದಕ್ಕೂ ರೈತರಿಂದ ವಿರೋಧ ಮತ್ತು ಪ್ರತಿಭಟನೆ ಇನ್ನಷ್ಟು ಚುರುಕು.

ರೈತರು, ಪೊಲೀಸರ ಮಧ್ಯೆ ಕಾಳಗ(ಜನವರಿ 24)

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್​ ರ್ಯಾಲಿಗೆ ಅನುಮತಿ ನೀಡಿದ ಪೊಲೀಸರು. ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಕೆಂಪುಕೋಟೆಗೆ ನುಗ್ಗಿ ಗಲಭೆ. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯೆ ತಿಕ್ಕಾಟ, ಲಾಠಿಚಾರ್ಜ್​. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದ ರೈತರು. ಕೆಂಪುಕೋಟೆಯಲ್ಲಿ ಪಂಜಾಬ್​ನ 'ನಿಶಾನ್​ ಸಾಹಿಬ್'​ ಬಾವುಟ ಹಾರಿಸಿ ಅಪಮಾನ. ಸಾವಿರಾರು ರೈತರ ಮೇಲೆ ಕೇಸ್​ ದಾಖಲು. ಕೆಲ ನಾಯಕರ ಬಂಧನ.

ರೈತರ ಹೋರಾಟಕ್ಕೆ 1 ವರ್ಷ (ಜೂನ್​)

ರೈತರ ಹೋರಾಟಕ್ಕೆ ಒಂದ ವರ್ಷ ತುಂಬಿದ ಹಿನ್ನೆಲೆ ಬ್ಯ್ಲಾಕ್​ ಡೇ ಆಚರಣೆ.

ಕೃಷಿ ಕಾಯ್ದೆ ಹಿಂತೆಗೆತ ಘೋಷಿಸಿದ ಪ್ರಧಾನಿ(ನವೆಂಬರ್​ 19)

ವಿವಾದಿತ 3 ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಘೋಷಣೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.