ಪಂಜಾಬ್ : ಫರೀದ್ಕೋಟ್ ಮಾಡರ್ನ್ ಜೈಲಿನ ಸಹಾಯಕ ಅಧೀಕ್ಷಕ ಕರ್ತವ್ಯ ವೇಳೆ ಜೈಲಿನೊಳಗೆ ಕಡತದಲ್ಲಿ ಬಚ್ಚಿಟ್ಟುಕೊಂಡು ಮೊಬೈಲ್ ಫೋನ್ ಮತ್ತು 79 ಗ್ರಾಂ ಹೆರಾಯಿನ್ ಕೊಂಡೊಯ್ಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜೈಲು ಆಡಳಿತದ ದೂರಿನ ಮೇರೆಗೆ ಆತನನ್ನು ಬಂಧಿಸಿ, ಅವನ ಕಾರು ತಪಾಸಣೆ ನಡೆಸಲಾಗಿದೆ. ಈ ವೇಳೆ, 67,500 ರೂ. ನಗದು ಮತ್ತು ಮೂರು ಮೊಬೈಲ್ ಫೋನ್‌ಗಳು, ಮೂರು ಹೆಡ್‌ಫೋನ್‌ಗಳು, ಚಾರ್ಜರ್ ಸೇರಿದಂತೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಗಿಡ್ಡರಬಹಾದಲ್ಲಿರುವ ಆತನ ಮನೆಯಲ್ಲಿ ಶೋಧ ನಡೆಸಿದಾಗ ಆರು ಲಕ್ಷ ರೂಪಾಯಿ ಹಾಗೂ ಅಮಲು ಪದಾರ್ಥಗಳು ಪತ್ತೆಯಾಗಿವೆ. ಜೊತೆಗೆ ಆತನಿಗೆ ಸಹಾಯ ಮಾಡುತ್ತಿದ್ದ ಜೈಲು ಸೇರಿರುವ ಖೈದಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೀಘ್ರದಲ್ಲೇ ಪ್ರೊಡಕ್ಷನ್ ವಾರಂಟ್ ಮೇಲೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ಮುಂಬೈ: ₹1,400 ಕೋಟಿ ಮೌಲ್ಯದ ಮೆಫೆಡ್ರೊನ್ ಡ್ರಗ್ಸ್ ವಶ, ಐವರ ಬಂಧನ