ETV Bharat / bharat

ವಿಶ್ವ ಮಣ್ಣಿನ ದಿನ: ಆಹಾರ ಉತ್ಪಾದನೆಯಲ್ಲಿ ಮಣ್ಣಿನ ಜೀವಿಗಳ ಪಾತ್ರದ ಬಗ್ಗೆ FAO ವರದಿ

author img

By

Published : Dec 5, 2020, 12:46 PM IST

ಭೂಮಿಯ ಒಳಗಿರುವ ಜೀವವೈವಿಧ್ಯತೆಗೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಸುಸ್ಥಿರ ಅಭಿವೃದ್ಧಿಗೆ ಯೋಜಿಸುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದು ಮಹತ್ವದ್ದಾಗಿದೆ ಎಂದು ವರದಿ ಹೇಳುತ್ತದೆ.

ವಿಶ್ವ ಮಣ್ಣಿನ ದಿನಾಚರಣೆWorld Soil Day
ವಿಶ್ವ ಮಣ್ಣಿನ ದಿನಾಚರಣೆ

ಹೈದರಾಬಾದ್: ಹೊಸ ಎಫ್‌ಎಒ ವರದಿಯು ಸುಸ್ಥಿರ ಕೃಷಿ-ಆಹಾರವನ್ನು ಖಾತ್ರಿಪಡಿಸುವಲ್ಲಿ ಮಣ್ಣಿನ ಜೀವಿಗಳ ಸಾಮರ್ಥ್ಯವನ್ನು ಪರಿಶೀಲಿಸಿದೆ. ಆಹಾರ ಉತ್ಪಾದನೆ, ಪೌಷ್ಠಿಕ ಆಹಾರವನ್ನು ಹೆಚ್ಚಿಸುವುದು, ಮಾನವನ ಆರೋಗ್ಯ ಕಾಪಾಡುವಲ್ಲಿ, ಕಲುಷಿತ ತಾಣಗಳನ್ನು ನಿವಾರಿಸುವಲ್ಲಿ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮಣ್ಣಿನ ಜೀವಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಅವುಗಳ ಕೊಡುಗೆಯನ್ನು ಎಫ್‌ಎಒ ತನ್ನ ವರದಿಯಲ್ಲಿ ತಿಳಿಸಿದೆ. ಇಂದು (ಡಿಸೆಂಬರ್ 5) ವಿಶ್ವ ಮಣ್ಣಿನ ದಿನಾಚರಣೆಯ ಸಂದರ್ಭದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಜೀವವೈವಿಧ್ಯತೆಯ ನಷ್ಟವು ವಿಶ್ವದಲ್ಲಿ ಅತಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಭೂಮಿಯ ಒಳಗಿರುವ ಜೀವವೈವಿಧ್ಯತೆಗೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಸುಸ್ಥಿರ ಅಭಿವೃದ್ಧಿಗೆ ಯೋಜಿಸುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದು ಮಹತ್ವದ್ದಾಗಿದೆ ಎಂದು ವರದಿ ಹೇಳುತ್ತದೆ.

ಭೂಮಿಯ ಪರಿಸರ ವ್ಯವಸ್ಥೆಯಲ್ಲಿನ 40 ಪ್ರತಿಶತಕ್ಕಿಂತಲೂ ಹೆಚ್ಚು ಜೀವಿಗಳು ತಮ್ಮ ಜೀವನ ಚಕ್ರದಲ್ಲಿ ಮಣ್ಣಿನೊಂದಿಗೆ ಸಂಬಂಧ ಹೊಂದಿವೆ. ಏಕಕೋಶೀಯ ಮತ್ತು ಸೂಕ್ಷ್ಮದರ್ಶಕ ರೂಪಗಳಿಂದ ಹಿಡಿದು ಅಕಶೇರುಕಗಳಾದ ನೆಮಟೋಡ್​ಗಳು, ಎರೆಹುಳುಗಳು, ಆರ್ತ್ರೋಪಾಡ್​ಗಳು ಮತ್ತು ಅವುಗಳ ಲಾರ್ವಾದ ಹಂತಗಳು, ಹಾಗೆಯೇ ಸಸ್ತನಿಗಳು, ಸರೀಸೃಪಗಳು ಮತ್ತು ಉಭಯಚರಗಳು ತಮ್ಮ ಜೀವನದ ಹೆಚ್ಚಿನ ಭಾಗವನ್ನು ಭೂಗರ್ಭದಲ್ಲಿ ಕಳೆಯುತ್ತವೆ ಮತ್ತು ದೊಡ್ಡ ವೈವಿಧ್ಯತೆಯನ್ನು ಒಳಗೊಂಡಿವೆ.

ಮಣ್ಣಿನ ಜೀವವೈವಿಧ್ಯತೆಗೆ ಬೆದರಿಕೆ: ಪರಿಸರ ವ್ಯವಸ್ಥೆಯ ಸೇವೆಗಳ ಮೂಲಕ ಮಣ್ಣಿನ ಜೀವವೈವಿಧ್ಯತೆಯ ಪಾತ್ರ ಕೃಷಿ ಮತ್ತು ಆಹಾರ ಸುರಕ್ಷತೆಗೆ ನಿರ್ಣಾಯಕವಾಗಿದೆ ಎಂದು ವರದಿ ಹೇಳಿದೆ. ಉದಾಹರಣೆಗೆ, ಮಣ್ಣಿನ ಸೂಕ್ಷ್ಮಾಣುಜೀವಿಗಳು ಸಾವಯವ ಮತ್ತು ಅಜೈವಿಕ ಸಂಯುಕ್ತಗಳನ್ನು ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ನೀರು ಮತ್ತು ಮಣ್ಣಿನಲ್ಲಿರುವ ಮಾಲಿನ್ಯಕಾರಕಗಳ ಶೋಧನೆ, ಅವನತಿ ಮತ್ತು ನಿಶ್ಚಲತೆಗೆ ಈ ರೂಪಾಂತರಗಳು ಸಹ ಪ್ರಮುಖವಾಗಿವೆ. ಇದರ ಜೊತೆಯಲ್ಲಿ, ಮಣ್ಣಿನ ವೈವಿಧ್ಯತೆಯು ಕೀಟಗಳು ಮತ್ತು ರೋಗಕಾರಕಗಳ ನಿಯಂತ್ರಣ, ತಡೆಗಟ್ಟುವಿಕೆ ಅಥವಾ ನಿಗ್ರಹವನ್ನು ಸುಧಾರಿಸಲು ಕೊಡುಗೆ ನೀಡುತ್ತದೆ. ಮಾನವ ಚಟುವಟಿಕೆಗಳಿಂದ ನಾಶವಾಗುತ್ತಿರುವ ಮಣ್ಣಿನ ಜೀವವೈವಿಧ್ಯವು ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಪತ್ತುಗಳಿಗೆ ಕಾರಣವಾಘಬಹುದು. ಕೃಷಿ ರಾಸಾಯನಿಕಗಳ ಅತಿಯಾದ ಬಳಕೆ ಮತ್ತು ದುರುಪಯೋಗವು ಮಣ್ಣಿನ ಜೀವವೈವಿಧ್ಯತೆಯ ನಷ್ಟಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಹವಾಮಾನ ಬದಲಾವಣೆಯನ್ನು ತಗ್ಗಿಸುವ ಮಣ್ಣಿನ ಸಾಮರ್ಥ್ಯ: ಮಣ್ಣಿನ ಸೂಕ್ಷ್ಮಾಣುಜೀವಿಗಳನ್ನು ಒಳಗೊಂಡ ಪ್ರಕೃತಿ ಆಧಾರಿತ ಪರಿಹಾರಗಳು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಮಹತ್ವದ ಸಾಮರ್ಥ್ಯವನ್ನು ಹೊಂದಿವೆ. ಇಂಗಾಲದ ಅನುಕ್ರಮ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ. ಮಾನವಜನ್ಯ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಒಂದು ಭಾಗವನ್ನು ಸಸ್ಯಗಳು ಹೀರಿಕೊಳ್ಳಬಹುದು ಮತ್ತು ಸೂಕ್ಷ್ಮಜೀವಿಯ ವಿಭಜನೆಯ ಮೂಲಕ ಮಣ್ಣಿನಲ್ಲಿ ಸಂಗ್ರಹಿಸಬಹುದು. ಇದು ಮಣ್ಣಿನ ಇಂಗಾಲವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕೃಷಿ ಚಟುವಟಿಕೆಗಳು ಮಣ್ಣಿನಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ಅನಿಲಗಳ ಅತಿದೊಡ್ಡ ಮೂಲವಾಗಿದೆ ಎಂದು ವರದಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.