ಕಾನ್ಪುರ(ರಾಜಸ್ಥಾನ): ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜಾದೂಗಾರ ಓ ಪಿ ಶರ್ಮಾ ಅವರು ಶನಿವಾರ ರಾತ್ರಿ ಉತ್ತರಪ್ರದೇಶದ ಕಾನ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೋವಿಡ್ ಪಾಸಿಟಿವ್ ಬಂದ ನಂತರ ಕಳೆದ ಎರಡು ವರ್ಷಗಳಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಬೇಕಿತ್ತು. ಐದು ದಿನಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಕಾರಣ ಅವರನ್ನು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಅವರು ಮೃತರಾಗಿರುವುದಾಗಿ ತಿಳಿಸಿದರು ಎಂದು ಶರ್ಮಾ ಅವರ ಸಂಬಂಧಿ ಮುಖೇಶ್ ಗುಪ್ತಾ ಹೇಳಿದ್ದಾರೆ.
1971ರಲ್ಲಿ ಬಲ್ಲಿಯಾ ಜಿಲ್ಲೆಯಲ್ಲಿ ಜನಿಸಿದ ಒ ಪಿ ಶರ್ಮಾ ಅವರು ಒಬ್ಬ ಪ್ರಸಿದ್ಧ ಜಾದೂಗಾರನಲ್ಲದೆ, ಸಮಾಜವಾದಿ ಪಕ್ಷದ ರಾಜಕೀಯ ನಾಯಕರೂ ಆಗಿದ್ದರು. ಅವರು ಗೋವಿಂದನಗರ ವಿಧಾನಸಭಾ ಕ್ಷೇತ್ರದಿಂದ ಎಸ್‌ಪಿ ಪರ ಚುನಾವಣೆಗೆ ಸ್ಪರ್ಧಿಸಿದ್ದರು.
ಬಾಲ್ಯದಿಂದಲೂ ಮ್ಯಾಜಿಕ್ನಲ್ಲಿ ಆಸಕ್ತಿ ಹೊಂದಿದ್ದ ಶರ್ಮಾ, ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಅನೇಕ ಮ್ಯಾಜಿಕ್ ಪ್ರದರ್ಶನಗಳನ್ನು ನೀಡಿದ್ದಾರೆ. ಶರ್ಮಾ ಮೂವರು ಪುತ್ರರಾದ ಪ್ರೇಮ್ ಪ್ರಕಾಶ್ ಶರ್ಮಾ, ಸತ್ಯ ಪ್ರಕಾಶ್ ಶರ್ಮಾ ಮತ್ತು ಪಂಕಜ್ ಪ್ರಕಾಶ್ ಶರ್ಮಾ ಜೊತೆಗೆ ಪುತ್ರಿ ರೇಣು ಮತ್ತು ಪತ್ನಿ ಮೀನಾಕ್ಷಿ ಶರ್ಮಾ ಅವರನ್ನು ಅಗಲಿದ್ದಾರೆ.
ಇದನ್ನೂ ಓದಿ: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ