ಮಧುರೈ(ತಮಿಳುನಾಡು): ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮ ಗರಿಗೆದರಿದೆ. ಇಲ್ಲಿನ ಪ್ರಸಿದ್ಧ ಸಾಹಸಮಯ ಸಾಂಪ್ರದಾಯಿಕ ಆಟವಾದ 'ಜಲ್ಲಿಕಟ್ಟು' ಹಲವೆಡೆ ಆರಂಭವಾಗಿದೆ. ಅದರಲ್ಲೂ ಮಧುರೈನ ಅವನಿಯಾಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಹೆಚ್ಚು ಪ್ರಸಿದ್ಧವಾಗಿದೆ. ಸ್ಪರ್ಧೆ ಆರಂಭವಾಗಿದ್ದು, ಒಂದು ಸಾವಿರ ಗೂಳಿಗಳು ಮತ್ತು ಅವುಗಳನ್ನು ಪಳಗಿಸಲು 600 ಜನರು ಸಜ್ಜಾಗಿದ್ದಾರೆ.
-
#WATCH | Tamil Nadu: Jallikattu competition underway in Madurai's Avaniyapuram. pic.twitter.com/r9LJlf32F6
— ANI (@ANI) January 15, 2024 " class="align-text-top noRightClick twitterSection" data="
">#WATCH | Tamil Nadu: Jallikattu competition underway in Madurai's Avaniyapuram. pic.twitter.com/r9LJlf32F6
— ANI (@ANI) January 15, 2024#WATCH | Tamil Nadu: Jallikattu competition underway in Madurai's Avaniyapuram. pic.twitter.com/r9LJlf32F6
— ANI (@ANI) January 15, 2024
8 ಸುತ್ತುಗಳ ಸ್ಪರ್ಧೆ: ಈ ಸ್ಪರ್ಧೆಯು ಸಂಜೆ 4 ಗಂಟೆಯವರೆಗೆ 8 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ಸುತ್ತಿನಲ್ಲಿ 50ರಿಂದ 75 ಗೂಳಿ ಪಳಗಿಸುವವರು ಭಾಗವಹಿಸಲಿದ್ದಾರೆ. ಹೆಚ್ಚು ಗೂಳಿಗಳನ್ನು ಪಳಗಿಸಿದ ಸಾಹಸಿಗರು ಮುಂದಿನ ಸುತ್ತಿನಲ್ಲಿ ಆಡಲು ಅವಕಾಶ ಪಡೆಯುತ್ತಾರೆ. ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ 1000 ಹೋರಿಗಳು ಮತ್ತು 600 ಗೂಳಿ ಪಳಗಿಸುವವರನ್ನು ಆಯ್ಕೆ ಮಾಡಲಾಗಿದೆ.
ಮೊದಲ ಬಹುಮಾನ ಕಾರು: ಸ್ಪರ್ಧೆ ಆರಂಭಕ್ಕೂ ಮೊದಲು ಬೆಳಿಗ್ಗೆ ಆಯ್ಕೆಯಾದ ಗೂಳಿಗಳು ಮತ್ತು ಅವುಗಳನ್ನು ಪಳಗಿಸುವ ವ್ಯಕ್ತಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ ಸ್ಪರ್ಧೆಗೆ ಅವಕಾಶ ನೀಡಲಾಯಿತು. ಪ್ರಥಮ ಬಹುಮಾನ ಪಡೆದ ಗೂಳಿಗೆ ಮತ್ತು ಅತಿ ಹೆಚ್ಚು ಹೋರಿಗಳನ್ನು ಹಿಡಿದ ವ್ಯಕ್ತಿಗಳಿಗೆ ಕಾರು ಬಹುಮಾನವಾಗಿ ನೀಡಲಾಗುತ್ತದೆ.
ಹೋರಿ ಹಿಡಿಯುವಾಗ ಗಾಯಗೊಂಡ ವ್ಯಕ್ತಿ ಮತ್ತು ಗೂಳಿಗಳಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ವಿಶೇಷ ವೈದ್ಯಕೀಯ ಶಿಬಿರಗಳನ್ನು ಸ್ಫರ್ಧೆ ನಡೆಯುವ ಸ್ಥಳದಲ್ಲಿ ತೆರೆಯಲಾಗಿದೆ. ಆಂಬ್ಯುಲೆನ್ಸ್‌ಗಳನ್ನು ಸಹಿತ ಸನ್ನದ್ಧವಾಗಿ ಇಡಲಾಗಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಸ್ಪರ್ಧೆ ನಡೆಯುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 800ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ಗೂಳಿಗಳನ್ನು ಬಿಡುವ ಸ್ಥಳದಲ್ಲಿ ತೊಡಗಿಸಿಕೊಂಡಿದ್ದಾರೆ.
-
#WATCH | Tamil Nadu: Jallikattu competition underway in Avaniyapuram, Madurai. pic.twitter.com/uHsrlz3Gtw
— ANI (@ANI) January 15, 2024 " class="align-text-top noRightClick twitterSection" data="
">#WATCH | Tamil Nadu: Jallikattu competition underway in Avaniyapuram, Madurai. pic.twitter.com/uHsrlz3Gtw
— ANI (@ANI) January 15, 2024#WATCH | Tamil Nadu: Jallikattu competition underway in Avaniyapuram, Madurai. pic.twitter.com/uHsrlz3Gtw
— ANI (@ANI) January 15, 2024
ಕ್ರೀಡೆಯ ವಿಶೇಷತೆ: ಸಾಹಸಮಯ ಸ್ಪರ್ಧೆಯಾದ ಜಲ್ಲಿಕಟ್ಟು ವಿಶೇಷವಾಗಿದ್ದು, ಗೂಳಿಗಳನ್ನು ಪಳಗಿಸುವ ವ್ಯಕ್ತಿಯು ಅದರ ಕೊಂಬು, ಬಾಲ, ಕಾಲುಗಳನ್ನು ಹಿಡಿಯುವಂತಿಲ್ಲ. ಕೇವಲ ಅದರ ಭುಜವನ್ನು ಮಾತ್ರ ಹಿಡಿದು ಹೋರಿಯನ್ನು ತಡೆದು ನಿಲ್ಲಿಸಿದಲ್ಲಿ ಆತನನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ಜಲ್ಲಿಕಟ್ಟು ಸ್ಪರ್ಧೆಯು ಹಿಂಸಾತ್ಮಕವಾಗಿದ್ದು, ಸಾವಿಗೂ ಕಾರಣವಾಗುತ್ತದೆ. ಇದಕ್ಕೆ ನಿಷೇಧ ಹೇರಬೇಕು ಎಂದು ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ಸ್ಪರ್ಧೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದಿತ್ತು. ಈ ತೀರ್ಪಿನ ವಿರುದ್ಧ ಮತ್ತೆ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿಸಿದೆ.
ಇದನ್ನೂ ಓದಿ: ಕಂಬಳ, ಜಲ್ಲಿಕಟ್ಟು, ಎತ್ತಿನ ಬಂಡಿ ಓಟಕ್ಕೆ ಸುಪ್ರಿಂ ಕೋರ್ಟ್ ಸಾಂವಿಧಾನಿಕ ರಕ್ಷಣೆ