ETV Bharat / bharat

ಕಲೋಲ್​ ಕ್ಷೇತ್ರದಲ್ಲಿ ಪತಿಯ ವಿರುದ್ಧ ಪತ್ನಿ ಪ್ರಚಾರ.. ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಸದ್ದು

ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಕುಟುಂಬಸ್ಥರೇ ಸೆಣಸಾಡುವುದು ಸಹಜ. ಗುಜರಾತ್​ನಲ್ಲೂ ಚೌಹಾಣ್​ ಕುಟುಂಬ ಮುಖಾಮುಖಿಯಾಗಲಿದೆ.

family-war-broke-out-on-kalol-assembly-seat
ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಸದ್ದು
author img

By

Published : Nov 18, 2022, 8:09 PM IST

ಕಲೋಲ್​(ಗುಜರಾತ್​): ಗುಜರಾತ್​ನಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಮಾತ್ರವಲ್ಲದೇ ಅದು ಕುಟುಂಬಕ್ಕೂ ವಿಸ್ತರಿಸಿದೆ. ಪ್ರಭಾತ್​ ಸಿಂಗ್​ ಚೌಹಾಣ್​ ಕುಟುಂಬವೇ ಇಲ್ಲಿ ಎದುರಾಳಿಗಳಾಗಿವೆ. ಕಲೋಲ್​ ವಿಧಾನಸಭೆ ಕ್ಷೇತ್ರದಲ್ಲಿ ಪತಿ - ಪತ್ನಿಯೇ ಎದುರಾಳಿಗಳಾಗಿದ್ದಾರೆ.

ಪಂಚಮಹಲ್​ ಕ್ಷೇತ್ರದಲ್ಲಿ ನಡೆಯುತ್ತಿದ್ದ ಕುಟುಂಬ ಪೈಪೋಟಿ ಈಗ ಕಲೋಲ್​ ಕ್ಷೇತ್ರದಲ್ಲೂ ಸದ್ದು ಮಾಡುತ್ತಿದೆ. ಇಲ್ಲಿ ಪತಿ ಪ್ರಭಾತ್‌ಸಿಂಗ್​ ಚೌಹಾಣ್ ಏಕಾಂಗಿಯಾಗಿ ಕಣಕ್ಕೆ ಧುಮುಕಿದ್ದರೆ, ಅವರ ಪತ್ನಿ ರಂಗೇಶ್ವರಿಬೆನ್ ಅವರು ತಮ್ಮ ಸೊಸೆ ಮತ್ತು ಕುಟುಂಬದ ಸಹಾಯದಿಂದ ಎದುರಾಳಿಯಾಗಿ ಸ್ಪರ್ಧಿಸಿದ್ದಾರೆ. ಇದು ಕ್ಷೇತ್ರದಲ್ಲಿ ತುರುಸಿನ ಪೈಪೋಟಿ ಹೆಚ್ಚಿಸಿದೆ.

ಈ ಕ್ಷೇತ್ರದ ವಶಕ್ಕೆ ಬಿಜೆಪಿ ಕಾಂಗ್ರೆಸ್​ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದೆ. ಮತದಾರರು ಈ ಬಾರಿ ಬಿಜೆಪಿಯನ್ನು ಕೈಬಿಟ್ಟು ಕಾಂಗ್ರೆಸ್​​ ಪರ ನಿಲ್ಲಲಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್​ ಈ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿ ಘೋಷಿಸಿಲ್ಲವಾದರೂ, ಈ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಪ್ರಭಾತ್ ಸಿಂಗ್​ ಚೌಹಾಣ್ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಫತೇಸಿಂಗ್ ಚೌಹಾಣ್ ಅವರನ್ನು ಕಣಕ್ಕಿಳಿಸಿದೆ.

ಟಿಕೆಟ್​ ಕೈತಪ್ಪಿದರೂ ಗಂಡನ ವಿರುದ್ಧ ಪ್ರಚಾರ: ಬಿಜೆಪಿಯಿಂದ ಟಿಕೆಟ್​ ನೀಡಲಿಲ್ಲ ಎಂಬ ಕಾರಣಕ್ಕಾಗಿ ಪ್ರಭಾತ್​ ಸಿಂಗ್​ ಚೌಹಾಣ್​ ಅವರು ಕಾಂಗ್ರೆಸ್​ ಸೇರಿ ಕಣದಲ್ಲಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕಿಯಾಗಿದ್ದ ಪ್ರಭಾತ್​ ಸಿಂಗ್​ ಚೌಹಾಣ್​ ಅವರ ಸೊಸೆ ಸುಮನ್​ಬೆನ್​ ಚೌಹಾಣ್ ಅವರು ಮಾವನ ವಿರುದ್ಧವೇ ಪ್ರಚಾರಕ್ಕಿಳಿದಿದ್ದಾರೆ.

ಬಿಜೆಪಿ ಈ ಬಾರಿ ಚೌಹಾಣ್ ಅವರ ಕುಟುಂಬಕ್ಕೆ ಟಿಕೆಟ್​ ನಿರಾಕರಿಸಿದೆ. ಆದರೂ ಬಿಜೆಪಿಯಲ್ಲಿರುವ ಚೌಹಾಣ್ ಅವರ ಪತ್ನಿ ಮತ್ತು ಸೊಸೆ, ಕಾಂಗ್ರೆಸ್​ ವಿರುದ್ಧ ಅಂದರೆ ಪ್ರಭಾತ್ ಸಿಂಗ್ ಚೌಹಾಣ್ ವಿರುದ್ಧ ಪ್ರಚಾರ ನಡೆಸುತ್ತಿದೆ.

ನನ್ನ ಕುಟುಂಬಸ್ಥರೇ ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಭಾತ್ ಸಿಂಗ್ ಚೌಹಾಣ್ ಹೇಳಿದರೆ, ಮಾವ ಕಾಂಗ್ರೆಸ್ ಸೇರಿರುವುದು ಅವರ ವೈಯಕ್ತಿಕ ವಿಚಾರ ಎಂದು ಮಾಜಿ ಶಾಸಕಿ ಸುಮನ್‌ಬೆನ್ ಅವರು ಹೇಳಿಕೆ ನೀಡಿದ್ದಾರೆ.

ಓದಿ: ಹಳೆ ಪಿಂಚಣಿ ಯೋಜನೆ ಜಾರಿಗೆ ಪಂಜಾಬ್​ ಸಚಿವ ಸಂಪುಟ ಅನುಮೋದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.