ವಡೋದರಾ (ಗುಜರಾತ್) : ಮಧ್ಯಪ್ರದೇಶದ ಕುಟುಂಬವೊಂದು ಗುಜರಾತ್ನ ವಡೋದರಾದ ಮಂಡಲೇಶ್ವರಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿದೆ. ದಂಪತಿ ಹಾಗೂ ಇಬ್ಬರು ಮಕ್ಕಳು ಕಾಲ್ನಡಿಗೆಯಲ್ಲಿ ನರ್ಮದಾ ನದಿಯನ್ನು ಪ್ರದಕ್ಷಿಣೆ ಹಾಕುವ ಮೂಲಕ 400 ಕಿಲೋ ಮೀಟರ್ ನಡೆದಿದ್ದಾರೆ.
ಇಡೀ ಜಗತ್ತನ್ನು ಆಕ್ರಮಿಸಿರುವ ಕೋವಿಡ್ ಅನ್ನು ನರ್ಮದಾ ನದಿ ಮಾತ್ರ ನಿಭಾಯಿಸಬಹುದು. ಅವಳ ಆಶೀರ್ವಾದದಿಂದ ಈ ಬಿಕ್ಕಟ್ಟನ್ನು ನಿಭಾಯಿಸಬಹುದು ಎಂದು ಕುಟುಂಬದ ಮುಖ್ಯಸ್ಥ ಅವನೀಶ್ ನಂಬಿದ್ದಾರೆ.
ಎರಡು ವರ್ಷಗಳ ಹಿಂದೆ ಅವರು ದಂಪತಿ ಸಮೇತರಾಗಿ ರಾಯ್ಪುರಕ್ಕೆ ಹೋಗಿದ್ದರಂತೆ. ಆ ವೇಳೆ ಹಿಂದಿರುಗುವಾಗ ಪತ್ನಿಗೆ ಹೆರಿಗೆ ನೋವು ಕಾಣಿಸಿದೆ. ಹೊಟ್ಟೆಯಲ್ಲೇ ಒಂದು ಮಗು ಮೃತಪಟ್ಟಿತ್ತಂತೆ.
ತಾಯಿ ಹಾಗೂ ಮತ್ತೊಂದು ಮಗುವನ್ನು ಉಳಿಸುವುದು ಕಷ್ಟ ಎಂದು ವೈದ್ಯರು ಹೇಳಿದಾಗ, ಅವನೀಶ್ ನರ್ಮದಾ ಕುರಿತು ಪ್ರಾರ್ಥಿಸಿದರಂತೆ. ಆಗ ಮಗು, ತಾಯಿ ಬದುಕುಳಿದರು. ಹಾಗಾಗಿ, ನಮ್ಮ ಕುಟುಂಬ ‘ನರ್ಮದಾ’ಗೆ ಋಣಿಯಾಗಿದ್ದೇವೆ ಎಂದರು.
ಅಂತಹ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದ್ದ ‘ನರ್ಮದಾ’ ಈ ಬಿಕ್ಕಟ್ಟನ್ನೂ ನಿವಾರಿಸಬಲ್ಲಳು ಎಂದು ಅವನೀಶ್ ನಂಬಿದ್ದಾರೆ. ಅವನೀಶ್ ವೃತ್ತಿಯಲ್ಲಿ ಪಾದ್ರಿ ಮತ್ತು ಜ್ಯೋತಿಷಿ ಆಗಿದ್ದು, ವಡೋದರಾದ ದೇವಾರ್ನಲ್ಲಿರುವ ಶಿವಭದ್ರ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.