ಅಲಿಗಢ (ಉತ್ತರ ಪ್ರದೇಶ): ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅನ್ನೋ ಗಾದೆ ಮಾತಿದೆ. ಇದರ ಅರ್ಥ ಮದುವೆ ಮಾಡುವುದಾಗಲಿ, ಮನೆ ಕಟ್ಟುವುದಾಗಲಿ ಅಷ್ಟು ಸುಲಭವಲ್ಲ ಎಂದಾಗುತ್ತದೆ. ಆದರೆ, ಉತ್ತರ ಪ್ರದೇಶದಲ್ಲಿ ಒಂದು ಕುಟುಂಬಸ್ಥರು ತಮ್ಮ ಮನೆಯ ಶ್ವಾನಕ್ಕೆ ಸೂಕ್ತವಾದ ಹೆಣ್ಣು ಶ್ವಾನ ಹುಡುಕಿ ಮದುವೆ ಮಾಡಿಸಿ ಗಮನ ಸೆಳೆದಿದ್ದಾರೆ.
ಹೌದು, ಅಲಿಗಢ ಜಿಲ್ಲೆಯ ಸುಖ್ವಲಿ ಗ್ರಾಮ ಮತ್ತು ತಿಕ್ರಿ ರಾಯ್‌ಪುರ ಗ್ರಾಮದ ಶ್ವಾನಗಳಿಗೆ ಸಂಬಂಧ ಬೆಳೆಸಿ ವಿಶಿಷ್ಟವಾದ ಮದುವೆ ಮಾಡಿಸಲಾಗಿದೆ. ಅಲ್ಲದೇ, ನವ ಶ್ವಾನ ಜೋಡಿಯ ಮೆರವಣಿಗೆ ಸಹ ಮಾಡಿ ಸಂಭ್ರಮಿಸಲಾಗಿದೆ. ವರ ಶ್ವಾನವು ಹರ್ಷಚಿತ್ತದಿಂದ ತನ್ನ ಬಾಲವನ್ನು ಅಲ್ಲಾಡಿಸುತ್ತ ಮೆರವಣಿಗೆಯ ವಾಹನದಲ್ಲಿ ಸಾಗಿ ಎಲ್ಲರ ಹುಬ್ಬೇರಿಸುವಂತೆಯೂ ಮಾಡಿದೆ.
ಎಂಟು ತಿಂಗಳ ಗಂಡು, ಏಳು ತಿಂಗಳ ಹೆಣ್ಣು ಶ್ವಾನ: ಸುಖ್ವಲಿ ಗ್ರಾಮದ ಮಾಜಿ ಮುಖ್ಯಸ್ಥರಾದ ದಿನೇಶ್ ಚೌಧರಿ ಅವರ ಎಂಟು ತಿಂಗಳ ಗಂಡು ನಾಯಿ ಟಾಮಿ ಮತ್ತು ತಿಕ್ರಿ ರಾಯ್‌ಪುರದ ನಿವಾಸಿ ಡಾ.ರಾಮಪ್ರಕಾಶ್ ಸಿಂಗ್ ಅವರ ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿ ನಡುವಿನ 'ವಿವಾಹ'ದ ಕಥೆ ಇದಾಗಿದೆ. ಎಂಟು ತಿಂಗಳು ಹಿಂದೆ ದಿನೇಶ್ ಚೌಧರಿ ಅವರ ಮಗ ಒಂದು ದಿನ ಸಣ್ಣ ನಾಯಿಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಬಂದಿದ್ದ. ಮೊದಮೊದಲು ಈ ನಾಯಿ ಮರಿ ಬಗ್ಗೆ ಕುಟುಂಬಸ್ಥರು ಸ್ವಲ್ಪ ಸಿಟ್ಟಾಗಿದ್ದರೂ, ನಂತರ ಕುಟುಂಬದ ಮತ್ತೊಂದು ಸದಸ್ಯನಂತೆ ಟಾಮಿ ಬೆಳೆಯ ತೊಡಗಿತ್ತು.
ಶ್ವಾನಗಳ ಮದುವೆ ಸಂಬಂಧ ಬೆಳೆದಿದ್ದು ಹೇಗೆ?: ಇದುವೆ ಟಾಮಿಗೆ ಸೂಕ್ತ ವಧುವನ್ನು ಹುಡುಕುವ ಸಮಯ ಬಂದಿದೆ ಎಂದು ದಿನೇಶ್ ಚೌಧರಿ ಮನೆಯಲ್ಲಿ ತಮಾಷೆಯಾಗಿ ಮಾಡಿಕೊಳ್ಳುತ್ತಿದ್ದರು. ಆಗ ಪರಿಚಯಸ್ಥರೊಬ್ಬರು ತಿಕ್ರಿ ರಾಯ್‌ಪುರದ ಡಾ.ರಾಮಪ್ರಕಾಶ್ ಸಿಂಗ್ ಅವರ ಸಾಕು ನಾಯಿ ಜೆಲ್ಲಿಯ ಕುರಿತು ಮಾಹಿತಿ ನೀಡಿದ್ದಾರೆ. ಇದು ಹಾಗೆ ಮುಂದುವರೆದು, ಮಾತುಕತೆಯಾಗಿ ಎರಡೂ ಶ್ವಾನಗಳ ಮಧ್ಯೆ ಮದುವೆ ಸಂಬಂಧ ಬೆಳೆದಿದೆ.
ಇತ್ತೀಚೆಗೆ ನಾವು ನಮ್ಮ ಟಾಮಿಗೆ ಸೂಕ್ತ ವಧುವನ್ನು ಹುಡುಕುವ ಸಮಯ ಬಂದಿದೆ ಎಂದು ತಮಾಷೆಯಾಗಿ ಚರ್ಚಿಸುತ್ತಿದ್ದೆವು. ಇದೇ ವೇಳೆ ಡಾ.ರಾಮಪ್ರಕಾಶ್ ಸಿಂಗ್ ಅವರ ಜೆಲ್ಲಿಯ ಹೆಸರನ್ನು ಸೂಚಿಸಿದರು. ಅಂತೆಯೇ, ಡಾ.ರಾಮಪ್ರಕಾಶ್ ಸಿಂಗ್ ಅವರನ್ನು ಸಂಪರ್ಕಿಸಿ ಜೆಲ್ಲಿಯೊಂದಿಗೆ ಟಾಮಿಯ ವಿವಾಹವನ್ನು ಪ್ರಸ್ತಾಪ ಮಾಡಿದೆವು. ಇದಕ್ಕೆ ನಾವೆಲ್ಲರೂ ಒಪ್ಪಿಕೊಂಡೆವು ಎಂದು ದಿನೇಶ್ ಚೌಧರಿ ತಿಳಿಸಿದ್ದಾರೆ.
ಸಂಪ್ರದಾಯದಂತೆ ನಡೆದ ಮದುವೆ: ಇದರ ನಂತರ ಟಾಮಿ ಮತ್ತು ಜೆಲ್ಲಿಯ ಮದುವೆಯನ್ನು ಸಂಪ್ರದಾಯದಂತೆ ಅದ್ದೂರಿಯಾಗಿ ಯೋಜನೆ ರೂಪಿಸಿದೆವು. ವರ ಟಾಮಿ ಮನೆಯವರು ವಧು ಜೆಲ್ಲಿಯ ಮನೆಗೆ ತೆರಳಿದೆವು. ಅಲ್ಲಿ ವಧು ಹಾಗೂ ವರರಿಗೆ ಆಶೀರ್ವಾದ ಮಾಡುವ ಪೂರ್ವಭಾವಿ ವಿಧಿ ವಿಧಾನ ನೆರವೇರಿಸಿದೆವು. ಅಂತಿಮವಾಗಿ ಶನಿವಾರದಂದು ಎರಡು ಮನೆಯ ಕಡೆಯವರು ಕೂಡಿ ಸಂತೋಷದಿಂದ ಟಾಮಿ ಮತ್ತು ಜೆಲ್ಲಿ ಮದುವೆ ಕಾರ್ಯ ಮುಗಿಸಿದೆವು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಶ್ವಾನ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ.. ಮಕ್ಕಳಿಗಾಗಿ ಹರಕೆ ಹೊತ್ತ ದಂಪತಿ ನಡೆಸಿತು ವಿವಾಹ