ಕಡಪ (ಆಂಧ್ರಪ್ರದೇಶ): ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ದಂಪತಿ ಸಾಗಿಲೆರು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಪೊರುಮಾಮಿಲ್ಲಾ ಶ್ರೀರಾಮನಗರ ನಿವಾಸಿಗಳಾದ ರಾಮಕೃಷ್ಣ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಜಲಾಶಯದಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಇದನ್ನೂ ಓದಿ:ಹೊಲದಲ್ಲಿ ಕುಳಿತು ಮದ್ಯ-ಆಹಾರ ಸೇವಿಸುತ್ತಲೇ ರಕ್ತ ಕಕ್ಕಿ ಪ್ರಾಣ ಬಿಟ್ಟ ವ್ಯಕ್ತಿ!
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.