ETV Bharat / bharat

ಲಕ್ಷ ಹೂಡಿಕೆ ಮಾಡಿ ಕೋಟಿ ಪಡೆಯುವ ಆಮಿಷ: ತಲೆ ಮರೆಸಿಕೊಂಡ ಪ್ರಮುಖ ಆರೋಪಿ

ನಕಲಿ ಕಂಪನಿ ಹೆಸರಲ್ಲಿ 1 ಲಕ್ಷ ಹೂಡಿಕೆ ಮಾಡಿ , 240 ದಿನಗಳಲ್ಲಿ 4 ಕೋಟಿ ರೂಪಾಯಿ ಪಡೆಯುತ್ತೀರಿ ಎಂದು ಜನರಿಗೆ ಆಮಿಷ ಒಡ್ಡಿ ವಂಚನೆ ಮಾಡಿದ ಆರೋಪದಲ್ಲಿ, ಕಂಪನಿ ಮಾಲೀಕ ಮುಕ್ತಿರಾಜ್​ ವಿರುದ್ಧ ನಾಂಪಲ್ಲಿ ಸಿಸಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fake-trading-company-busted-owner-absconding
ಲಕ್ಷ ಹೂಡಿಕೆ ಮಾಡಿ ಕೋಟಿ ಪಡೆಯುವ ಆಮಿಷ : ತಲೆಮರೆಸಿಕೊಂಡ ಪ್ರಮುಖ ಆರೋಪಿ
author img

By

Published : Nov 16, 2022, 7:46 PM IST

ಹೈದರಾಬಾದ್ : ನಕಲಿ ಕಂಪನಿ ಹೆಸರಲ್ಲಿ ಲಕ್ಷ ಹೂಡಿಕೆ ಮಾಡಿ ಕೋಟಿ ಹಣ ಪಡೆಯುವ ಆಮಿಷ ಒಡ್ಡಿ ಜನರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 1 ಲಕ್ಷ ಹೂಡಿಕೆ ಮಾಡಿ , 240 ದಿನಗಳಲ್ಲಿ 4 ಕೋಟಿ ರೂಪಾಯಿ ಪಡೆಯುತ್ತೀರಿ ಎಂದು ವಂಚನೆ ಮಾಡಿದ ಆರೋಪದಲ್ಲಿ,ಕಂಪನಿ ಮಾಲೀಕ ಮುಕ್ತಿರಾಜ್​ ವಿರುದ್ಧ ನಾಂಪಲ್ಲಿ ಸಿಸಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮುಕ್ತಿ ರಾಜ್ ಮಲ್ಟಿ ಜೆಟ್ ಟ್ರೇಡಿಂಗ್ ಹೆಸರಿನ ನಕಲಿ ಸಂಸ್ಥೆಯ ಮೂಲಕ ಮುಂಬೈನಲ್ಲಿ ವ್ಯಾಪಾರ ಮಾಡುವ ನೆಪದಲ್ಲಿ ಸುಮಾರು 9000 ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

ಜೈಲಿನ ಅಧಿಕಾರಿಗಳಿಗೆ ಮೋಸ : ಇಲ್ಲಿನ ಹಬ್ಸಿಗುಡದಲ್ಲಿ ನಕಲಿ ಹೂಡಿಕೆ ಮತ್ತು ವ್ಯವಹಾರದ ಕಂಪನಿ ನಡೆಸುತ್ತಿದ್ದ ಆರೋಪಿ ರಾಜ್ಯದ ಕಾರಾಗೃಹ ಇಲಾಖೆಯ ಸುಮಾರು 200ಕ್ಕೂ ಅಧಿಕ ಉದ್ಯೋಗಿಗಳಿಗೆ ಸುಮಾರು 2 ಕೋಟಿ ರೂ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಅದಿಲಾಬಾದ್, ಖಮ್ಮಂ,ಮೆಹಬೂಬ್‌ನಗರ ಮತ್ತು ಹೈದರಾಬಾದ್‌ನ ಜೈಲು ಅಧಿಕಾರಿಗಳು ಈತನಿಗೆ ಹಣ ಪಾವತಿಸಿ ಮೋಸ ಹೋಗಿದ್ದಾರೆ.

ಅಲ್ಲದೇ ಆರೋಪಿ ಈಗಾಗಲೇ ಸೇರ್ಪಡೆಗೊಂಡಿದ್ದ ಜನರಲ್ಲಿ ಇನ್ನಷ್ಟು ಜನರನ್ನು ಸೇರಿಸುವಂತೆ ಸೂಚಿಸುತ್ತಿದ್ದ. ಈ ರೀತಿ ಹೆಚ್ಚಿನ ಜನರನ್ನು ಸೇರ್ಪಡೆ ಮಾಡುವ ಪ್ರತಿ ಸದಸ್ಯರಿಗೆ 700 ರೂ. ಹೆಚ್ಚುವರಿ ಕಮಿಷನ್ ನೀಡುವ ಆಮಿಷ ಒಡ್ಡುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನು ಹಣ ಹೂಡಿಕೆ ಮಾಡಿದ ಜನರು ತಮ್ಮ ಹಣವನ್ನು ಹಿಂಪಡೆಯಲು ಹೋದಾಗ ಕಚೇರಿ ಮುಚ್ಚಿರುವುದನ್ನು ಕಂಡು ಅನುಮಾನಗೊಂಡಿದ್ದಾರೆ. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮುಕ್ತಿ ರಾಜ್​ ತಲೆಮರೆಸಿಕೊಂಡಿದ್ದು , ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪತ್ರ ಬರೆದು ತ್ರಿವಳಿ ತಲಾಖ್: ಡೆಹ್ರಾಡೂನ್‌ನಲ್ಲಿ ವ್ಯಕ್ತಿ ವಿರುದ್ಧ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.