ETV Bharat / bharat

ಅಯೋಧ್ಯೆಯ ಹನುಮಾನ್ ದೇವಾಲಯಕ್ಕೆ ಹುಸಿಬಾಂಬ್ ಕರೆ: ಆರೋಪಿ ಅಂದರ್ - ಉತ್ತರ ಪ್ರದೇಶ

ಅಯೋಧ್ಯೆಯಲ್ಲಿ ಗುರು ಪೂರ್ಣಿಮೆ ಹಿನ್ನೆಲೆ ಹನುಮಾನ್ ದೇವಾಲಯದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಆದರೆ ಮದ್ಯದ ನಶೆಯಲ್ಲಿದ್ದ ವ್ಯಕ್ತಿವೋರ್ವ ಹುಸಿಬಾಂಬ್ ಕರೆ ಮಾಡಿದ್ದ. ಇದರಿಂದ ಕೆಲಕಾಲ ಎಲ್ಲರೂ ಆತಂಕ ಉಂಟಾಗಿತ್ತು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

fake-information-about-bomb-in-hanumangarhi-police-arrested-caller-in-ayodhya
ಅಯೋಧ್ಯೆಯ ಹನುಮಾನ್ ದೇವಾಲಯಕ್ಕೆ ಹುಸಿಬಾಂಬ್ ಕರೆ
author img

By

Published : Jul 25, 2021, 7:31 AM IST

ಅಯೋಧ್ಯೆ (ಉ.ಪ್ರ): ಇಲ್ಲಿನ ಸಹದತ್​​​​​​​ಗಂಜ್ ಪ್ರಾಂತ್ಯದ ಹನುಮಾನ್ ದೇವಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಪೊಲೀಸರು ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಆತನ ಬಂಧನದ ಬಳಿಕ ಇದು ಹುಸಿ ಬಾಂಬ್​ ಕರೆ ಅನ್ನೋದು ಪೊಲೀಸರಿಗೆ ತಿಳಿದಿದೆ.

ಗುರು ಪೂರ್ಣಿಮೆ ಸಂಭ್ರಮದಲ್ಲಿದ್ದ ಭಕ್ತಾದಿಗಳಿಗೆ ಹುಸಿಬಾಂಬ್ ಕರೆ ಆತಂಕಕ್ಕೆ ದೂಡಿತ್ತು. ದೇವಾಲಯದೊಳಗೆ ಬಾಂಬ್​ ಇಡಲಾಗಿದೆ ಎಂದು ಅಪರಿಚಿತನೋರ್ವ ಪೊಲೀಸರಿಗೆ ಕರೆ ಮಾಡಿದ್ದ, ಶನಿವಾರ ಗುರು ಪೂರ್ಣಿಮೆ ಹಿನ್ನೆಲೆ ದೇವಾಲಯದಲ್ಲಿ ಸಹಸ್ರಾರು ಭಕ್ತರು ನೆರೆದಿದ್ದರು.

ಈ ಹಿನ್ನೆಲೆ ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಎಸ್​ಎಸ್​​ಪಿ ಶೈಲೇಂದ್ರ ಪಾಂಡೆ ನೇತೃತ್ವದ ತಂಡ ಬಾಂಬ್​​​​ಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಅಲ್ಲದೆ ದೇವಾಲಯದ ವ್ಯಾಪ್ತಿಯಿಂದ ಭಕ್ತರನ್ನು ತೆರವುಗೊಳಿಸಿ ಬಾಂಬ್ ನಿಷ್ಕ್ರಿಯ ದಳ ಶೋಧ ನಡೆಸಿತ್ತು.

ಇತ್ತೀಚಿಗೆ ಲಖನೌದಲ್ಲಿ ಅಲ್​ಖೈದಾ ಸಂಘಟನೆಯ ಉಗ್ರನೋರ್ವನ ಬಂಧಿಸಿದ್ದ ಪ್ರಕರಣದ ಬಳಿಕ ಬಾಂಬ್ ಕರೆ ಬಂದ ಹಿನ್ನೆಲೆ ಪೊಲೀಸರು ಸಹ ಆತಂಕಕ್ಕೆ ಒಳಗಾಗಿದ್ದರು. ಬಿಗಿ ಭದ್ರತೆಯ ನಡುವೆ ದೇವಾಲಯದ ಒಳಗೆ ಹಾಗೂ ಹೊರಗಿನ ಎಲ್ಲಾ ವಾಹನಗಳು ಸೇರಿ ಮೂಲೆ ಮೂಲೆಯಲ್ಲೂ ಬಾಂಬ್​ಗಾಗಿ ಶೋಧ ನಡೆಸಿದ್ದರು. ಆದರೆ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ.

ಬಳಿಕ ಇದೊಂದು ಹುಸಿಬಾಂಬ್ ಕರೆ ಎಂದು ತಿಳಿದ ಪೊಲೀಸರು, ಹುಸಿ ಫೋನ್​ ಕರೆ ಮಾಡಿದ್ದಾತನ ಹುಡುಕಾಟ ಆರಂಭಿಸಿದ್ದರು. ಕರೆ ಬಂದು ಸುಮಾರು 3 ಗಂಟೆಯಲ್ಲೇ ಕರೆ ಮಾಡಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದರು. ಇಲ್ಲಿನ ಕಾನ್ಪುರ್ ಮೂಲದ ಅನಿಲ್ ಎಂಬಾತನನ್ನು ಕರೆ ಬಂದಿದ್ದ ಮೊಬೈಲ್ ಸಂಖ್ಯೆ ಆಧರಿಸಿ ಬಂಧಿಸಲಾಯಿತು. ಆತ ಮದ್ಯಪಾನ ಮಾಡಿ ಕರೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.

ಓದಿ: ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೂವರು ಉಗ್ರರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.