ಸೋನಾಮುರ (ತ್ರಿಪುರಾ): ಸೋನಮುರ ಶಾಖೆಯಲ್ಲಿರುವ ತನ್ನ ಸ್ಟೇಟ್ ಬ್ಯಾಂಕ್ ಖಾತೆಗೆ ನಕಲಿ ಹಣ ಜಮಾ ಮಾಡಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಪುರಾದ ಸೆಪಾಹಿಜಲಾ ಜಿಲ್ಲೆಯ ಸೋನಮುರಾ ಪ್ರದೇಶದ ಆಶಾ ಖತುನ್ ಬಂಧಿತ ಆರೋಪಿ. ಈಕೆ ಸೋನಮುರದ ರವೀಂದ್ರ ನಗರದಲ್ಲಿರುವ ತನ್ನ ಎಸ್‌ಬಿಐ ಬ್ಯಾಂಕ್ ಖಾತೆಗೆ ಶುಕ್ರವಾರ 2 ಲಕ್ಷದ 45 ಸಾವಿರ ರೂ. ಜಮಾ ಮಾಡಲು ಬಂದಿದ್ದಳು. ಆ ಹಣವನ್ನು ಬ್ಯಾಂಕ್ ಕ್ಯಾಷಿಯರ್ ಪರಿಶೀಲಿಸಿದಾಗ 500 ಮತ್ತು 100 ರೂ. ಮುಖಬೆಲೆಯ ನಕಲಿ ನಕಲಿ ನೋಟುಗಳು ಪತ್ತೆಯಾಗಿವೆ. ಕ್ಯಾಷಿಯರ್ ಕೂಡಲೇ ಈ ಮಾಹಿತಿಯನ್ನು ಸೇವಾ ವ್ಯವಸ್ಥಾಪಕ ಅಮಿತಾಭ ರಾಯ್ಗೆ ತಿಳಿಸಿದರು. ನಂತರ ಅವರು ಶಾಖಾ ವ್ಯವಸ್ಥಾಪಕ ಕುಂದನ್ ಸುಭಾಗೆ ಮಾಹಿತಿ ನೀಡಿದರು.
ಪೊಲೀಸರಿಗೆ ಈ ಬಗ್ಗೆ ಲಿಖಿತ ದೂರು ನೀಡಲಾಗಿದ್ದು, ಪೊಲೀಸರು ಆಶಾ ಖತುನ್ಅನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ವೇಳೆ ಮಹಿಳೆ ನೆರೆ ಗ್ರಾಮವಾದ ಶ್ರೀಮಂತಾಪುರದ ಜಾಯ್ನಾಲ್ ಮಿಯಾ ಅವರಿಂದ ಹಣ ಪಡೆದಿರುವುದಾಗಿ ತಿಳಿಸಿದ್ದು, ಕೋರ್ಟ್ ಏಪ್ರಿಲ್ 16ಕ್ಕೆ ವಿಚಾರಣೆ ಮುಂದೂಡಿದೆ. ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಓದಿ: ಕಾಶ್ಮೀರದಲ್ಲಿ 7 ಮಂದಿ ಉಗ್ರರ ಬೇಟೆ: ಮೂವರು ನಾಗರಿಕರು, ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯ