ETV Bharat / bharat

ಎಚ್ಚರಗೊಳ್ಳುವಲ್ಲಿ ವಿಫಲವಾದರೆ ಅದು ದುರಂತಕ್ಕೆ ಕಾರಣ : ವಿಜ್ಞಾನಿಗಳ ಸಮಿತಿಯ ಅಧ್ಯಕ್ಷ ಡಾ. ವಿದ್ಯಾಸಾಗರ್ - ದಿ ನ್ಯಾಷನಲ್ ಕೋವಿಡ್ -19 ಸೂಪರ್ ಮಾಡೆಲ್ ಕಮಿಟಿ ಅಧ್ಯಕ್ಷ

ಬಡವರು ವೈದ್ಯಕೀಯ ಆರೈಕೆಗಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರೆ, ಶ್ರೀಮಂತರು ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈಗ ಇದ್ದಕ್ಕಿದ್ದಂತೆ ಅವರಿಬ್ಬರ ಮೇಲೆ ಒತ್ತಡ ಹೆಚ್ಚಾಗಿದೆ ಮತ್ತು ವ್ಯವಸ್ಥೆ ಸಹ ಹಾನಿಗೊಳಗಾಗಿದೆ..

vidyasagar
vidyasagar
author img

By

Published : May 16, 2021, 6:22 PM IST

ಹೈದರಾಬಾದ್ ​: ಐಐಟಿ ಹೈದರಾಬಾದ್ ಪ್ರಾಧ್ಯಾಪಕ ಡಾ. ಎಂ. ವಿದ್ಯಾಸಾಗರ್, ಕೋವಿಡ್ ಕ್ರಮೇಣ ಕ್ಷೀಣಿಸುತ್ತಿರುವುದರಿಂದ, ಲಿಟ್ಮಸ್ ಪರೀಕ್ಷೆಯ ನಂತರ ನಾವು ಎಷ್ಟು ಜಾಗರೂಕತೆಯಿಂದ ವರ್ತಿಸುತ್ತೇವೆ ಎಂದು ಅಭಿಪ್ರಾಯಿಸಿದ್ದಾರೆ.

ಹಿಂದಿನ ತಪ್ಪುಗಳನ್ನು ಪುನರಾವರ್ತಿಸುವುದರಿಂದ ಆಗುವ ಹಾನಿ ಅಪಾರ ಎಂದು ಅವರು ಎಚ್ಚರಿಸಿದ್ದಾರೆ. ಕೊರೊನಾ ಹರಡುವಿಕೆ ನಿಯಂತ್ರಣದ ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ನೇಮಿಸಿದ ವಿಜ್ಞಾನಿಗಳ ಸಮಿತಿಯ ಅಧ್ಯಕ್ಷರಾಗಿ ಡಾ. ವಿದ್ಯಾಸಾಗರ್, ಎರಡನೇ ಅಲೆ ಆಕ್ರಮಣಕ್ಕೆ ಸಾಕಷ್ಟು ಸಿದ್ಧತೆ ಇಲ್ಲದಿರುವುದರಿಂದ ಜನರು ಆಮ್ಲಜನಕ ಸಿಲಿಂಡರ್‌ಗಳು, ಹಾಸಿಗೆಗಳು ಇತ್ಯಾದಿಗಳ ಕೊರತೆ ಎದುರಿಸಬೇಕಾಗಿದೆ ಎಂದು ಹೇಳಿದರು.

ಕೊರೊನಾ ತೀವ್ರತೆ, ಪ್ರಸ್ತುತ ಪರಿಸ್ಥಿತಿ ಬಗ್ಗೆ, ಅವರ ನೇತೃತ್ವದ ಸಮಿತಿ ಕೈಗೊಂಡ ಕಾರ್ಯಗಳ ಬಗ್ಗೆ ಅವರು 'ಈಟಿವಿ ಭಾರತ್'ಗೆ ವಿವರಿಸಿದರು.

ನಿಮ್ಮ ಸಮಿತಿಯ ರಚನೆ ಮತ್ತು ಅದರ ಕಾರ್ಯಕ್ಷಮತೆಯ ಬಗ್ಗೆ ದಯವಿಟ್ಟು ನಮಗೆ ತಿಳಿಸಿ

ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ಸರ್ಕಾರ 10 ಸದಸ್ಯರ ಸಮಿತಿಯನ್ನು ನೇಮಿಸಿತು. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತದೆ. ನನ್ನೊಂದಿಗೆ ಐಐಟಿ ಕಾನ್ಪುರದ ಮಣೀಂದ್ರ ಅಗರ್ವಾಲ್ ಮತ್ತು ಸೇನಾ ವೈದ್ಯಕೀಯ ಅಧಿಕಾರಿ ಮಾಥೂರಿ ಕನಿತ್ಕರ್ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉಳಿದ ಏಳು ಮಂದಿ ಕೂಡ ವಿಜ್ಞಾನಿಗಳು. ಕೊರೊನಾ ವೈರಸ್​ ಹೇಗೆ ಹರಡುತ್ತಿದೆ ಮತ್ತು ಯಾವ ಪ್ರದೇಶದಲ್ಲಿ ಹರಡುತ್ತಿದೆ ಎಂಬುದನ್ನು ನಿರ್ಣಯಿಸುವುದು ಸಮಿತಿಯ ಕೆಲಸ.ಇದಕ್ಕೆ 'ದಿ ನ್ಯಾಷನಲ್ ಕೋವಿಡ್ -19 ಸೂಪರ್ ಮಾಡೆಲ್ ಕಮಿಟಿ' ಎಂದು ಹೆಸರಿಸಲಾಗಿದೆ.

ಸಮಿತಿಯು ಎಲ್ಲಾ ವಿಭಾಗಗಳು ತಜ್ಞರನ್ನು ಒಳಗೊಂಡಿದೆ. ನಾವು ಕೋವಿಡ್ -19 ರ ತೀವ್ರತೆಯನ್ನು ನಿರ್ಣಯಿಸುತ್ತಿದ್ದೇವೆ ಮತ್ತು ಸರ್ಕಾರದಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಈ ಕುರಿತು ಎಚ್ಚರಿಸುತ್ತಿದ್ದೇವೆ. ನಾವು ಮಾರ್ಚ್ ಮೊದಲ ವಾರದಲ್ಲಿ ಕೆಲವು ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದೇವೆ ಮತ್ತು ಏಪ್ರಿಲ್ 2 ರಂದು ಸಲ್ಲಿಸಿದ ವರದಿಯಲ್ಲಿ ಮುಂದೆ ಎದುರಾಗಲಿರುವ ಆಪತ್ತಿನ ಬಗ್ಗೆ ವಿವರಿಸಿದ್ದೇವೆ.

ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಪ್ರಸ್ತುತ, ದೈನಂದಿನ ಕೊರೊನಾ ಪ್ರಕರಣಗಳು ದಾಖಲೆಯ ನಾಲ್ಕು ಲಕ್ಷಕ್ಕೆ ತಲುಪಿದೆ. ಅಂತಹ ತೀವ್ರತೆಯನ್ನು ನೀವು ನಿರೀಕ್ಷಿಸಬಹುದೇ?

ಇಲ್ಲ. ವೈರಸ್ ಪ್ರಸ್ತುತ ನಾವು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಹರಡುತ್ತಿದೆ. ಇದರ ತೀವ್ರತೆಯು ಗ್ರಹಿಸಲಾಗದು. ನಮ್ಮ ಮೌಲ್ಯಮಾಪನ ಅಂದಾಜು ಮಾತ್ರ. ಶೀಘ್ರದಲ್ಲೇ ಅದು ಹೆಚ್ಚಾಗುತ್ತದೆ ಎಂದು ನಾವು ನಂಬುತ್ತೇವೆ.

ಜನರು ಕೋವಿಡ್ ಮುನ್ನೆಚ್ಚರಿಕೆಗಳನ್ನು ಮರೆತು ಚುನಾವಣೆ, ಕುಂಭಮೇಳ ಮುಂತಾದ ರಾಜಕೀಯ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿದರು. ವೈರಸ್ ಹರಡಲು ಇವು ಎಷ್ಟರ ಮಟ್ಟಿಗೆ ಕಾರಣವಾಗಿವೆ?

ಎರಡನೇ ಕೊರೊನಾ ಅಲೆ ಮಾರ್ಚ್ 8-9ರಂದು ಮಹಾರಾಷ್ಟ್ರ, ಕೇರಳ ಛತ್ತೀಸ್‌ಗಢ ರಾಜ್ಯಗಳಲ್ಲಿ ಹರಡಿತು. ಕುಂಭಮೇಳ ಪ್ರಾರಂಭವಾಗುವ ಹೊತ್ತಿಗೆ ವೈರಸ್ ಎಲ್ಲೆ ಮೀರಿತ್ತು. ಕುಂಭಮೇಳ ಮಾತ್ರ ಮುಖ್ಯ ಕಾರಣವಲ್ಲ. ಚುನಾವಣಾ ಪ್ರಚಾರಗಳು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಕೋವಿಡ್‌ನ ಹರಡುವಿಕೆಗೆ ಕಾರಣವಾಗಬಹುದು. ಆದರೆ, ವೈರಸ್​ ಉಲ್ಬಣಗೊಳ್ಳಲು ಅವುಗಳು ಕಾರಣವಲ್ಲ.

ನಿಮ್ಮ ಸಮಿತಿಯು ಎರಡನೇ ಅಲೆ ಬಗ್ಗೆ ಕೇಂದ್ರಕ್ಕೆ ಮುಂಗಡ ಎಚ್ಚರಿಕೆಗಳನ್ನು ನೀಡಿದೆಯೇ?

ಈ ಕುರಿತು ನಮ್ಮ ಸಮಿತಿ ಏಪ್ರಿಲ್ 2 ರಂದು ವರದಿಯನ್ನು ಸಲ್ಲಿಸಿದೆ.

ಈ ಎಚ್ಚರಿಕೆಗಳನ್ನು ಸರ್ಕಾರ ಕಡೆಗಣಿಸಿದೆ ಎಂದುಕೊಳ್ಳಬಹುದೇ?

ನಿಖರವಾಗಿ ಹೇಳಲಾಗುವುದಿಲ್ಲ. ಸರ್ಕಾರ ವಿವಿಧ ಏಜೆನ್ಸಿಗಳು ಮತ್ತು ಸಮಿತಿಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅದನ್ನು ಕ್ರೋಡೀಕರಿಸುತ್ತದೆ ಮತ್ತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ಜನರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಒಟ್ಟು ಜನಸಂಖ್ಯೆಯ ಸುಮಾರು 60-70ರಷ್ಟು ಜನರು ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೊಂಡರೆ ಅಪಾಯವನ್ನು ತಪ್ಪಿಸಬಹುದು.

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೀಮಿತ ವ್ಯಾಕ್ಸಿನೇಷನ್ ವಿಧಾನವನ್ನು ಕೈಗೊಳ್ಳಲು ಮೊದಲು ನಿರ್ಧರಿಸಲಾಯ್ತು. ನಂತರ 45 ವರ್ಷಕ್ಕೆ ವಿಸ್ತರಿಸಲಾಯ್ತು. ಈಗ, ಮಕ್ಕಳನ್ನು ಹೊರತುಪಡಿಸಿ 18ನೇ ವಯಸ್ಸಿನಿಂದ ಎಲ್ಲರಿಗೂ ಲಸಿಕೆ ಹಾಕಲು ಅವಕಾಶವಿದೆ.

ಲಸಿಕೆ ಕೊರತೆಯನ್ನು ನೀಗಿಸಲು ಸರ್ಕಾರ ಕ್ರಮಕೈಗೊಂಡಿದೆ. ಔಷಧೀಯ ಕಂಪನಿಗಳು ಎಷ್ಟೇ ವೇಗವಾಗಿ ಲಸಿಕೆ ಉತ್ಪಾದನೆ ಮಾಡಿದರೂ, ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಮಧ್ಯೆ, ಜನರು ಸಾಧ್ಯವಾದಷ್ಟು ವೈರಸ್​ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಸ್ಕ್​ ಧರಿಸುವುದನ್ನು 2021ರ ಅಂತ್ಯದವರೆಗೂ ಮುಂದುವರಿಸಬೇಕು.

ನಿಮ್ಮ ಸಲಹೆಗಳು ಸರ್ಕಾರವನ್ನು ಹೊರತುಪಡಿಸಿ ಹೊರಗಿನ ಜಗತ್ತಿಗೆ ತಿಳಿಯುವ ಯಾವುದೇ ಮಾರ್ಗವಿಲ್ಲವೇ?

ಮಣೀಂದ್ರ ಅಗರ್ವಾಲ್ ಈ ಮಾಹಿತಿಯನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆಸಕ್ತರು ಅವರ ಟ್ವೀಟ್​ ನೋಡಬಹುದು.

ಪ್ರಸ್ತುತ ಸ್ಥಿತಿಗೆ ಕಾರಣವೇನು?

ಈ ಸ್ಥಿತಿಗೆ ಬಹುಮುಖ್ಯ ಕಾರಣವೆಂದರೆ ಬಹಳಷ್ಟು ಜನ ಈ ವೈರಸ್​ ತೀವ್ರತೆಯು ಕಡಿಮೆಯಾಗಿದೆ ಮತ್ತು ಕೊರೊನಾಗೆ ಇನ್ಮುಂದೆ ಕೇರ್​ ಮಾಡುವ ಅಗತ್ಯವಿಲ್ಲ ಎಂದು ನಂಬಿರುವುದು. ಕಳೆದ ವರ್ಷ ಕೊರೊನಾ ಮೊದಲ ಬಾರಿಗೆ ಭುಗಿಲೆದ್ದಾಗ, ಸೋಂಕಿತರಲ್ಲಿ ಹೆಚ್ಚಿನವರು ಬಡ ಜನರು.

ಆ ಸಮಯದಲ್ಲಿ ಶ್ರೀಮಂತರು ಮತ್ತು ಮೇಲ್ವರ್ಗದ ಸಮುದಾಯ ಸೇರಿ ಎಲ್ಲರೂ ಸೂಕ್ತ ಕಾಳಜಿಯನ್ನು ತೆಗೆದುಕೊಂಡರು. ಆದರೆ ಎಲ್ಲರೂ ಈಗ ಅದನ್ನು ನಿರ್ಲಕ್ಷಿಸಿದ್ದಾರೆ. ಈ ಬಾರಿ ಶ್ರೀಮಂತರ ಮೇಲೆ ವೈರಸ್ ದಾಳಿ ತೀವ್ರವಾಗಿದೆ.

ಬಡವರು ವೈದ್ಯಕೀಯ ಆರೈಕೆಗಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರೆ, ಶ್ರೀಮಂತರು ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈಗ ಇದ್ದಕ್ಕಿದ್ದಂತೆ ಅವರಿಬ್ಬರ ಮೇಲೆ ಒತ್ತಡ ಹೆಚ್ಚಾಗಿದೆ ಮತ್ತು ವ್ಯವಸ್ಥೆ ಸಹ ಹಾನಿಗೊಳಗಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.