ಚಿತೋಡ್(ತಮಿಳುನಾಡು): ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಕ್ಲೋರಿನ್ ಅನಿಲ್ ಸೋರಿಕೆಯಾಗಿ ಓರ್ವ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಚಿತೋಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಮೋದರನ್ ಎಂಬಾತ ಈ ಫ್ಯಾಕ್ಟರಿಯನ್ನು ನಡೆಸುತ್ತಿದ್ದು, ದ್ರವರೂಪದ ಕ್ಲೋರಿನ್ ಅನ್ನು ಇಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸಿಲಿಂಡರ್ಗೆ ಕ್ಲೋರಿನ್ ರಿಫಿಲ್ ಮಾಡುವ ವೇಳೆ ಗ್ಯಾಸ್ ಲೀಕ್ ದಾಮೋದರನ್ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಒಟ್ಟು 20 ಮಂದಿ ಫ್ಯಾಕ್ಟರಿಯಲ್ಲಿದ್ದು, ಇದೇ ವೇಳೆ ಸ್ಥಳದಲ್ಲಿದ್ದ ಸುಮಾರು 13 ಮಂದಿ ಕುಸಿದು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಉಳಿದವರು ರಕ್ಷಣೆಗೆ ಧಾವಿಸಿ, ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅವರು ಮೂರ್ಛೆ ತಪ್ಪಿದ್ದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Jammu Encounter: ಓರ್ವ ಉಗ್ರನ ಬೇಟೆಯಾಡಿದ ಭದ್ರತಾ ಪಡೆ