ETV Bharat / bharat

ಪ್ರಪಂಚದಾದ್ಯಂತ ವಾಟ್ಸ್​ಆ್ಯಪ್​​, ಇನ್​​ಸ್ಟಾಗ್ರಾಂ, ಫೇಸ್​ಬುಕ್​ ಡೌನ್​.. ಬಳಕೆದಾರರ ಪರದಾಟ

ಸೋಷಿಯಲ್​ ಮೀಡಿಯಾ ಬಳಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಜನರು ತೊಂದರೆಗೊಳಗಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

FACEBOOK
FACEBOOK
author img

By

Published : Oct 4, 2021, 10:00 PM IST

Updated : Oct 4, 2021, 10:11 PM IST

ನವದೆಹಲಿ: ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಗೊಳಪಡುವ ವಾಟ್ಸ್​ಆ್ಯಪ್​,ಇನ್​​ಸ್ಟಾಗ್ರಾಂ ಹಾಗೂ ಫೇಸ್​ಬುಕ್​​​ ಹಾಗೂ ಮೆಸೆಂಜರ್​​ ಇಂದು ಸಂಜೆ ಕ್ರಶ್​ ಆಗಿದ್ದು, ಅನೇಕ ದೇಶಗಳಲ್ಲಿ ಬಳಕೆ ವೇಳೆ ಸಮಸ್ಯೆ ಉಂಟಾಗಿದೆ.

ಸೋಷಿಯಲ್​ ಮೀಡಿಯಾ ಬಳಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಜನರು ತೊಂದರೆಗೊಳಗಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ಇಂದು ಸಂಜೆಯಿಂದಲೇ ಈ ಸಮಸ್ಯೆ ಉಂಟಾಗಿದೆ.

  • We’re aware that some people are having trouble accessing our apps and products. We’re working to get things back to normal as quickly as possible, and we apologize for any inconvenience: Facebook pic.twitter.com/pFemMSdIkk

    — ANI (@ANI) October 4, 2021 " class="align-text-top noRightClick twitterSection" data=" ">

ಫೇಸ್​ಬುಕ್​, ಇನ್ಸ್​ಸ್ಟಾ ಹಾಗೂ ವ್ಯಾಟ್ಸ್​​ಆ್ಯಪ್​ ಓಪನ್ ಮಾಡಿದ ಸಂದರ್ಭದಲ್ಲಿ ಕ್ಷಮಿಸಿ, ಏನೋ ತಪ್ಪಾಗಿದೆ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂಬ ಸಂದೇಶ ಕಾಣಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಫೇಸ್​​ಬುಕ್​​ ನಮ್ಮ ಆ್ಯಪ್​ ಹಾಗೂ ಉತ್ಪನ್ನಗಳ ಬಳಕೆಯಲ್ಲಿ ಗ್ರಾಹಕರು ಸಮಸ್ಯೆ ಅನುಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸೇವೆಯನ್ನ ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ನಾವು ಪ್ರಯತ್ನಿಸುತ್ತೇವೆ. ಹಾಗೂ ಬಳಕೆದಾರರಿಗೆ ಆಗಿರುವ ಸಮಸ್ಯೆಗೆ ನಾವು ಕ್ಷಮೆ ಕೇಳುತ್ತೇವೆ ಎಂದು ಹೇಳಿಕೊಂಡಿದೆ.

  • We’re aware that some people are having trouble accessing our apps and products. We’re working to get things back to normal as quickly as possible, and we apologize for any inconvenience.

    — Facebook (@Facebook) October 4, 2021 " class="align-text-top noRightClick twitterSection" data=" ">

ಭಾರತದಲ್ಲಿ ಅತಿ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾ ಬಳಕೆ ಮಾಡ್ತಿದ್ದು, ಪ್ರಮುಖವಾಗಿ ಫೇಸ್​ಬುಕ್​​, ಟ್ವಿಟರ್​, ಇನ್ಸ್​ಸ್ಟಾಗ್ರಾಂ ಹಾಗೂ ವಾಟ್ಸಾಪ್​ನಲ್ಲಿ ಅತಿ ಹೆಚ್ಚಿನ ಜನರು ಸಕ್ರಿಯರಾಗಿರುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು, ಇದೀಗ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್​​ಬುಕ್​, ಇನ್ಸ್​ಸ್ಟಾಗ್ರಾಂ ಹಾಗೂ ಟ್ವಿಟರ್​​ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆಯಾ ಎಂದು ಪರಿಶೀಲನೆ ಮಾಡಲು ಮುಂದಾಗಿದೆ. ಹೀಗಾಗಿ ತಾಂತ್ರಿಕ ಕಾರಣದಿಂದಾಗಿ ಎಲ್ಲ ಸರ್ವರ್​ ಕ್ರಾಶ್​ ಆಗಿವೆ.

  • "We’re aware that some people are experiencing issues with WhatsApp at the moment. We’re working to get things back to normal and will send an update here as soon as possible," says WhatsApp. pic.twitter.com/KJRybRzzpg

ಭಾರತದಲ್ಲಿ 410 ಮಿಲಿಯನ್​ಗಿಂತಲೂ ಹೆಚ್ಚಿನ ಬಳಕೆದಾರರು ಫೇಸ್​ಬುಕ್​ ಬಳಕೆ ಮಾಡ್ತಿದ್ದು, ವಾಟ್ಸ್​ಆ್ಯಪ್​​​ 530 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿದ್ದು, ಇನ್​​​ಸ್ಟಾಗ್ರಾಂನಲ್ಲಿ 210 ಮಿಲಿಯನ್​ ಬಳಕೆದಾರರು ಇದ್ದಾರೆ.

Last Updated : Oct 4, 2021, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.