ನವದೆಹಲಿ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ ಪರಾಭವಗೊಂಡ ನಂತರ ವೇಗದ ಬೌಲರ್ ಮೊಹಮದ್ ಶಮಿ ವಿರುದ್ಧ 'ಆನ್ಲೈನ್ ದಾಳಿ'ಗೆ ಸಂಬಂಧಿಸಿದಂತೆ ಎಲ್ಲಾ ಅವಾಚ್ಯ ಕಮೆಂಟ್ಗಳು, ಪೋಸ್ಟ್ಗಳನ್ನು ತೆಗೆದು ಹಾಕಿರುವುದಾಗಿ ಫೇಸ್ಬುಕ್ ಹೇಳಿದೆ.
ಐಎಎನ್ಎಸ್ಗೆ ಪ್ರತಿಕ್ರಿಯೆ ನೀಡಿರುವ ಫೇಸ್ಬುಕ್ ಇಂಥ ದಾಳಿಯನ್ನು ಯಾರೂ, ಎಲ್ಲಿಯೂ ಕೂಡಾ ಎದುರಿಸಬಾರದು. ಈ ದಾಳಿಗಳು ನಮ್ಮ ಪ್ಲಾಟ್ಫಾರ್ಮ್ನಲ್ಲಿ ಅವಶ್ಯಕತೆ ಇಲ್ಲ. ಆದ್ದರಿಂದ ಕಮೆಂಟ್ಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.
ಮೊಹಮದ್ ಶಮಿ ವಿರುದ್ಧ ಈ ರೀತಿಯ ದಾಳಿ ಆರಂಭವಾಗುತ್ತಿದ್ದಂತೆ ನಾವು ಕಮೆಂಟ್ಗಳನ್ನು ತೆಗೆದುಹಾಕಲು ಕ್ರಮ ಕೈಗೊಂಡೆವು. ನಮ್ಮ ನೀತಿ ನಿಯಮಗಳಿಗೆ ಒಪ್ಪಿಗೆಯಾಗದ ಕಮೆಂಟ್ಗಳನ್ನು ತೆಗೆದುಹಾಕುವ ಕಾರ್ಯ ಮುಂದುವರೆಯುತ್ತಿದೆ ಎಂದು ಫೇಸ್ಬುಕ್ ಹೇಳಿದೆ.
ಪಾಕ್ ವಿರುದ್ಧದ ಟಿ20 ಪಂದ್ಯದಲ್ಲಿ ಸೋಲಿನ ಬೆನ್ನಲ್ಲೇ ಭಾರತ ತಂಡದ ಪ್ರದರ್ಶನದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 3.5 ಓವರ್‌ಗಳಲ್ಲಿ 43 ರನ್ ನೀಡಿದ್ದ ಮೊಹಮದ್ ಶಮಿ ವಿರುದ್ಧ ಜನಾಂಗೀಯ ನಿಂದನೆ ಕೂಡಾ ಮಾಡಲಾಗಿತ್ತು. ಇನ್ನೂ ಕೆಲವರು ಮೊಹಮದ್ ಶಮಿ ಪಾಕಿಸ್ತಾನಕ್ಕೆ ಸೇರಿದವನು ಎಂದು ಮೂದಲಿಸಿದ್ದರು.
ಇದನ್ನೂ ಓದಿ: ಪಾಕ್ ಅಭಿಮಾನಿಯ ಚಳಿ ಬಿಡಿಸಿದ್ದ ಶಮಿ: ಟ್ರೋಲರ್ಗೆ ತಕ್ಕ ಪಾಠ ಕಲಿಸಿದ ಹಳೆಯ ವಿಡಿಯೋ