ETV Bharat / bharat

Explainer: ಏನಿದು ನಿಫಾ ಸೋಂಕು? ಲಕ್ಷಣಗಳು ಮತ್ತು ನಿಯಂತ್ರಣ.. ಇಲ್ಲಿದೆ ಸಂಪೂರ್ಣ ವಿವರ! - ನಿಫಾ ವೈರಸ್ ಹಾವಳಿ

ನಿಫಾ ಅತ್ಯಂತ ವೇಗವಾಗಿ ಹರಡುವ ಸೋಂಕು. ಈ ಸೋಂಕಿನ ಲಕ್ಷಣಗಳೇನು.? ಈ ಸೋಂಕು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳೇನು..? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Know everything about Nipah infection, symptoms and prevention
Explainer: ನಿಫಾ ಸೋಂಕು, ಲಕ್ಷಣಗಳು, ನಿಯಂತ್ರಣದ ಕುರಿತ ಸಂಪೂರ್ಣ ಮಾಹಿತಿ
author img

By

Published : Sep 7, 2021, 10:01 AM IST

Updated : Sep 7, 2021, 10:10 AM IST

ನವದೆಹಲಿ: ನಿಫಾ, ಕೋವಿಡ್ ಹಾವಳಿಯ ಬೆನ್ನಲ್ಲೇ ಕಾಣಿಸಿಕೊಂಡ ಮತ್ತೊಂದು ವೈರಸ್.. ಸೆಪ್ಟೆಂಬರ್ 5ರಂದು ಕೇರಳದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತಾದರೂ, ಇದು ಮೊದಲ ಬಾರಿಗೆ ಕಂಡು ಬಂದಿದ್ದು, 2018ರಲ್ಲಿ, ನಂತರ 2019ರಲ್ಲೂ ಕೂಡಾ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಈಗ ಮತ್ತೊಮ್ಮೆ ಕೇರಳದ ಕೋಯಿಕ್ಕೋಡ್​​ನಲ್ಲಿ ಕಾಣಿಸಿಕೊಂಡು, ಕೋವಿಡ್​​ ಜೊತೆಗೆ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಕೇರಳದಲ್ಲೇ ನಿಫಾ ಕಾಣಿಸಿಕೊಂಡಿರುವುದು ಅಲ್ಲಿನ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈವರೆಗೆ 22 ಮಂದಿ ನಿಫಾ ವೈರಸ್​​ ಸೋಂಕಿನ ಹಾವಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಇನ್ನೂ ನಿಗೂಢ.. ನಂಬಿಕೆಯಷ್ಟೇ..!

ಕೋಯಿಕ್ಕೋಡ್‌ನ ಪೆರಂಬ್ರಾದ ಮುಹಮ್ಮದ್ ಸಬಿತ್ 2018ರಲ್ಲಿ ನಿಫಾ ಸೋಂಕಿಗೆ ಬಲಿಯಾಗಿದ್ದರು. ಇದೇ ಮೊದಲ ಸಾವು ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ನಂತರ ಸಬಿತ್ ಸಂಪರ್ಕಕ್ಕೆ ಬಂದವರಿಗೂ ಈ ಸೋಂಕು ಹರಡಿತ್ತು. ಅದು ಹೇಗೆ ಎಂಬುದು ಈಗಲೂ ನಿಗೂಢವಾಗಿದೆ. ಹಣ್ಣು ತಿನ್ನುವ ಬಾವಲಿಗಳು ನಿಫಾ ವೈರಸ್​ನ ಮೂಲ ಮತ್ತು ಅವುಗಳೇ ನಿಫಾ ವೈರಸ್​ ಹರಡಲು ಕಾರಣವೆಂದು ಈವರೆಗೂ ನಂಬಲಾಗಿದೆ.

ಇದೇ ನಂಬಿಕೆಯ ಆಧಾರದ ಮೇಲೆ ಮೊದಲು ಕೋಯಿಕ್ಕೋಡ್ ಪ್ರದೇಶದಲ್ಲಿ ಸಾಕಷ್ಟು ತಪಾಸಣೆ ನಡೆಸಲಾಯಿತು. ಕೆಲವು ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಯಿತು. ಆದರ ಬಾವಲಿಗಳಿಂದಲೇ ನಿಫಾ ವೈರಸ್ ಮನುಷ್ಯರಿಗೆ ಹಬ್ಬಿದೆಯೇ ಅಥವಾ ಬೇರೆ ಮೂಲದಿಂದ ಮುನಷ್ಯರಿಗೆ ನಿಫಾ ವೈರಸ್ ಹಬ್ಬಿದೆಯೇ ಎಂಬುದು ಈಗಲೂ ಖಚಿತವಾಗಿಲ್ಲ.

ಮೊದಲ ನಿಫಾ ಸೋಂಕು ಸಾವು ಪ್ರಕರಣದ ಸಬಿತ್​ ಅವರಿಂದ ಇತರಿಗೂ ಕೂಡಾ ನಿಫಾ ವೈರಸ್ ಹಬ್ಬಿತ್ತು. ಅವರನ್ನು ತಪಾಸಣೆ ಮಾಡಿ, ವೈರಸ್ ಮೂಲ ಪತ್ತೆ ಹಚ್ಚುವಷ್ಟರಲ್ಲಿ ಅವರೂ ಕೂಡಾ ಸಾವನ್ನಪ್ಪಿದ್ದರು. ಇದು ನಿಫಾ ವೈರಸ್ ಮೂಲ ಪತ್ತೆ ಹಚ್ಚುವ ಕ್ರಿಯೆ ಮತ್ತಷ್ಟು ಕಗ್ಗಂಟಾಗುವಂತೆ ಮಾಡಿತ್ತು.

ವರ್ಷದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ನಿಫಾ ವೈರಸ್​ ಮಾನವನಿಗೆ ಹರಡುವ ಮೂಲದ ಕುರಿತು ಈವರೆಗೆ ಸಂಶೋಧನೆಗಳು ನಡೆಯುತ್ತಿವೆ. ಈ ವೈರಸ್ ವರ್ಷದಲ್ಲಿ ಕೆಲವು ಬಾರಿ ಮಾತ್ರ ಕಾಣಿಸಿಕೊಳ್ಳುವುದೇಕೆ ಎಂಬುದನ್ನೂ ಸಂಶೋಧನೆ ಮಾಡಲಾಗುತ್ತಿದೆ.

ನಿಫಾ ರೋಗಿಗೆ ಈ ಲಕ್ಷಣಗಳಿರುತ್ತವೆ..

ನಿಫಾ ವೈರಸ್​​​ಗೆ ವ್ಯಕ್ತಿಯೊಬ್ಬ ತುತ್ತಾದರೆ, ಸಾಮಾನ್ಯವಾಗಿ ಇಂತಹ ಲಕ್ಷಣಗಳು ರೋಗಿಯಲ್ಲಿ ಕಂಡು ಬರುತ್ತವೆ. ಜ್ವರ, ತಲೆನೋವು ಮತ್ತು ತಲೆತಿರುಗುವಿಕೆ. ಕೆಮ್ಮು, ಹೊಟ್ಟೆ ನೋವು, ವಾಕರಿಕೆ, ವಾಂತಿ, ಸುಸ್ತು ಮತ್ತು ಮಸುಕಾದ ದೃಷ್ಟಿ ಇವುಗಳು ನಿಫಾ ರೋಗಿಯಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ.

ನಿಫಾ ಅಪಾಯಕಾರಿ ಯಾಕೆ ಗೊತ್ತಾ?

ಮೇಲಿನ ಲಕ್ಷಣಗಳನ್ನು ನೋಡಿದಾಗ ಸಾಮಾನ್ಯ ರೋಗ ಎನಿಸಬಹುದು. ಆದರೆ, ನಿಫಾ ತುಂಬಾ ಅಪಾಯಕಾರಿ. ನಿಫಾ ವೈರಸ್ ಕಾಣಿಸಿಕೊಂಡ ನಾಲ್ಕರಿಂದ 14 ದಿನದೊಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ನಿಫಾ ವೈರಸ್ ಶ್ವಾಸಕೋಸದ ಮೇಲೆ ದಾಳಿ ಮಾಡಲು 21 ದಿನ ಬೇಕಾಗಲೂಬಹುದು. ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ರೋಗಿ ಕೋಮಾಗೆ ಜಾರುತ್ತಾನೆ. ಏಕೆಂದರೆ ಶ್ವಾಸಕೋಸ ಮಾತ್ರವಲ್ಲ, ಮೆದುಳಿನ ಮೇಲೆಯೂ ನಿಫಾ ದಾಳಿ ಮಾಡುತ್ತದೆ. ಮತ್ತೊಂದು ಅಪಾಯಕಾರಿ ವಿಚಾರವೆಂದರೆ, ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ನಿಫಾ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಲು ಸಮರ್ಥವಾಗಿರುತ್ತದೆ.

ಹಣ್ಣು ತಿನ್ನುವ ಮೊದಲು..

ಕೊರೊನಾದಂತೆಯೇ ಅತ್ಯಂತ ವೇಗವಾಗಿ ಹರಡುವ ಗುಣವನ್ನು ನಿಫಾ ಹೊಂದಿದೆ. ಹಾಗಾಗಿ ರೋಗ ತಡೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಸಾಮಾನ್ಯವಾಗಿ ಹಣ್ಣು ತಿನ್ನುವ ಬಾವಲಿಗಳಿಂದಲೇ ನಿಫಾ ವೈರಸ್ ಹರಡುತ್ತದೆ ಎಂದು ನಂಬಲಾಗಿದೆ. ಬಾವಲಿಗಳು ಹೆಚ್ಚಿರುವ ಜಾಗದಲ್ಲಿ ಹಣ್ಣು ತಿನ್ನುವಾಗ ಎಚ್ಚರವಿರಬೇಕಾದ ಅಗತ್ಯವಿದೆ.

ನಿಫಾ ವೈರಸ್ ಇರುವ ಬಾವಲಿ ಕಚ್ಚಿರುವ ಹಣ್ಣನ್ನು ಮನುಷ್ಯರು ತಿನ್ನುವುದರಿಂದ ನಿಫಾ ಹರಡಲೂಬಹುದು. ಬಾವಲಿಗಳಿಗೆ ಹಣ್ಣಿನ ಮರಗಳೆಂದರೆ ಪ್ರೀತಿ ಅದರಲ್ಲೂ ಬಾಳೆ ಹಣ್ಣುಗಳೆಂದರೆ ಪಂಚಪ್ರಾಣ. ಅಂತಹ ಮರಗಳ ಹಣ್ಣುಗಳನ್ನು ತಿನ್ನುವಾಗ ಎಚ್ಚರಿಕೆ ಅನಿವಾರ್ಯ. ಹಣ್ಣುಗಳು ಮಾತ್ರವಲ್ಲದೇ ತರಕಾರಿಗಳನ್ನು ತಿನ್ನುವಾಗಲೂ ಸರಿಯಾಗಿ ತೊಳೆದು ತಿನ್ನಬೇಕು.

ಮಾಂಸ ತಿನ್ನುವಾಗಲೂ..

ಈವರೆಗೂ ನಿಫಾ ಯಾವ ಪ್ರಾಣಿಯಿಂದ ಅಥವಾ ಯಾವ ಮೂಲದಿಂದ ಹರಡುತ್ತದೆ ಎಂಬುದು ಖಚಿತವಾಗಿಲ್ಲ. ಆದ್ದರಿಂದ ಮಾಂಸ ತಿನ್ನುವಾಗಲೂ, ಸಂಪೂರ್ಣವಾಗಿ ಬೇಯಿಸಿ, ತಿನ್ನಬೇಕು. ಬಾವಲಿಗಳು ಹೆಚ್ಚಿರುವ ಮತ್ತು ನಿಫಾ ವೈರಸ್ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಪ್ರಾಣಿಗಳಿಗೂ, ನಿಫಾ ಹಬ್ಬಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೋವಿಡ್​ ಮಾರ್ಗಸೂಚಿಗಳನ್ನೇ ಪಾಲಿಸಿ..

ಕೋವಿಡ್​ ನಿಯಂತ್ರಣಕ್ಕೆ ಪಾಲನೆ ಮಾಡುವ ಮಾರ್ಗಸೂಚಿಗಳನ್ನೇ ನಿಫಾ ನಿಯಂತ್ರಣಕ್ಕೂ ಪಾಲಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನೈರ್ಮಲ್ಯ ಬಹಳ ಮುಖ್ಯ. ರೋಗಿಯಿಂದ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ರೋಗಿಯು ಬಳಸಿದ ವಸ್ತುಗಳನ್ನು ಸೋಂಕು ರಹಿತಗೊಳಿಸಬೇಕು ಮತ್ತು ಪ್ರತ್ಯೇಕವಾಗಿ ಇಡಬೇಕು. ಆಗ ಮಾತ್ರ ನಿಫಾ ನಿಯಂತ್ರಣ ಸಾಧ್ಯ..

ಕೋವಿಡ್ ಮಾದರಿಯ ಟೆಸ್ಟೇ ಇಲ್ಲೂ ಇರುತ್ತೆ..

ಸದ್ಯಕ್ಕೆ ನಿಫಾ ವೈರಸ್​ ಅನ್ನು ಆರ್​ಟಿಪಿಸಿಆರ್ ಮಾದರಿಯಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಗಂಟಲು ದ್ರವವನ್ನು ಸಂಗ್ರಹಿಸಿ, ಅವುಗಳನ್ನ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಪರೀಕ್ಷೆಗಾಗಿ ಗಂಟಲು ದ್ರವವನ್ನು ಪುಣೆ ಅಥವಾ ಮಣಿಪಾಲದ ಲ್ಯಾಬ್​​ಗಳಿಗೆ 'ಎಲಿಸಾ' ಟೆಸ್ಟ್​ಗೆ ಕಳುಹಿಸಲಾಗುತ್ತದೆ. ಎಲಿಸಾ ಟೆಸ್ಟ್ ನಡೆಸುವ ಸೌಲಭ್ಯ ಕೇರಳದಲ್ಲಿ ಇಲ್ಲ.

ಕೇರಳದಲ್ಲಿ ಈಗಿನ ನಿಫಾ ವರದಿ..

ನಿಫಾ ಸೆಪ್ಟೆಂಬರ್ ಐದರಂದು ಕಾಣಿಸಿಕೊಂಡಿದ್ದು, ಕೋಯಿಕ್ಕೋಡ್​ನಲ್ಲಿ ನಿಫಾ ಲಕ್ಷಣಗಳಿದ್ದ ಎಂಟು ಮಂದಿಯನ್ನು ಪ್ರತ್ಯೇಕಗೊಳಿಸಲಾಗಿತ್ತು. ಅವರ ವರದಿ ಈಗ ನೆಗೆಟಿವ್ ಬಂದಿದೆ. ನಿಫಾ ಸೋಂಕಿತರ 251 ಮಂದಿಯ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಅದರಲ್ಲಿ 32 ಮಂದಿಯನ್ನು ಹೈ ರಿಸ್ಕ್ ಕೆಟಗರಿಗೆ ಸೇರಿಸಲಾಗಿದೆ.

ಕೇರಳ ಸರ್ಕಾರ 2018 ಮತ್ತು 2019ರಲ್ಲಿ ಕಾಣಿಸಿಕೊಂಡಿದ್ದ ನಿಫಾ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿತ್ತು. ಈ ಬಾರಿಯೂ ನಿಫಾ ವೈರಸ್​ ಅನ್ನು ನಾಮಾವಶೇಷ ಮಾಡಲಿ ಎಂಬುದು ಎಲ್ಲರ ಆಶಯ..

ಈ ಮಧ್ಯೆ ಭೋಪಾಲ್​ ಲ್ಯಾಬ್​ ಕಳುಹಿಸಿದ 8 ಮಂದಿಯ ನಿಫಾ ಸ್ಯಾಂಪಲ್​​​​ಗಳ ವರದಿ ಲಭ್ಯವಾಗಿದ್ದು, ಅವೆಲ್ಲ ನೆಗೆಟಿವ್​ ಬಂದಿದೆ. ಇದು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇದನ್ನೂ ಓದಿ: ಕೃತಕ ಸೂರ್ಯನಿಗಾಗಿ ಬ್ರಿಟನ್ ವಿಜ್ಞಾನಿಗಳ ಪ್ರಯೋಗ: ಕುತೂಹಲಕಾರಿ ಸಂಶೋಧನೆಯ ಪೂರ್ಣ ವಿವರ..

Last Updated : Sep 7, 2021, 10:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.