ETV Bharat / bharat

Explained: ಅವಿಶ್ವಾಸ ಗೊತ್ತುವಳಿ ಎಂದರೇನು? - ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ

No-Confidence Motion: ಅವಿಶ್ವಾಸ ಗೊತ್ತುವಳಿ ಎಂದರೇನು, ಇದನ್ನು ಹೇಗೆ ಮಂಡಿಸಲಾಗುತ್ತದೆ ಗೊತ್ತೇ?

No confidence motion
No confidence motion
author img

By

Published : Aug 8, 2023, 6:16 PM IST

Updated : Aug 8, 2023, 6:36 PM IST

ಅವಿಶ್ವಾಸ ಗೊತ್ತುವಳಿ- ವ್ಯಾಖ್ಯಾನ : ಸಂಸದೀಯ ಪ್ರಜಾಪ್ರಭುತ್ವದಲ್ಲಿ, ನೇರವಾಗಿ ಆಯ್ಕೆಯಾದ ಸದನದಲ್ಲಿ ಬಹುಮತ ಹೊಂದಿದ್ದರೆ ಮಾತ್ರ ಆ ಸರ್ಕಾರ ಅಧಿಕಾರದಲ್ಲಿರಲು ಸಾಧ್ಯ. ಹೀಗಾಗಿ ಮಂತ್ರಿಮಂಡಲವು ಕೆಳಮನೆಗೆ ಸಾಮೂಹಿಕವಾಗಿ ಜವಾಬ್ದಾರನಾಗಿರುತ್ತದೆ. ಸಾಮೂಹಿಕ ಜವಾಬ್ದಾರಿಯನ್ನು ಎರಡು ತತ್ವಗಳನ್ನು ಜಾರಿಗೊಳಿಸುವ ಮೂಲಕ ಖಾತರಿಪಡಿಸಲಾಗುತ್ತದೆ, ಅವುಗಳೆಂದರೆ ಮೊದಲನೆಯದು, ಪ್ರಧಾನ ಮಂತ್ರಿಯ ಸಲಹೆಯಿಲ್ಲದೆ ಯಾವುದೇ ವ್ಯಕ್ತಿಯನ್ನು ಮಂತ್ರಿಮಂಡಲಕ್ಕೆ ನಾಮನಿರ್ದೇಶನ ಮಾಡಲಾಗುವುದಿಲ್ಲ; ಎರಡನೆಯದಾಗಿ, ಪ್ರಧಾನ ಮಂತ್ರಿಯವರು ವಜಾಗೊಳಿಸಬೇಕೆಂದು ಒತ್ತಾಯಿಸುವ ಯಾವುದೇ ವ್ಯಕ್ತಿಯನ್ನು ಪರಿಷತ್ತಿನ ಸದಸ್ಯರಾಗಿ ಉಳಿಸಿಕೊಳ್ಳಲಾಗುವುದಿಲ್ಲ. ಸರ್ಕಾರದ ಯಾವುದೇ ಒಂದು ನೀತಿಯು ಚರ್ಚೆಯ ಹಂತದಲ್ಲಿದ್ದಾಗ ಅದರ ಬಗ್ಗೆ ಸಚಿವರು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಮುಕ್ತರಾಗಿರುತ್ತಾರೆ ಎಂಬುದು ಸಾಮೂಹಿಕ ಜವಾಬ್ದಾರಿಯ ಸಾರ. ಆದರೆ ನಿರ್ಧಾರ ತೆಗೆದುಕೊಂಡ ನಂತರ ಪ್ರತಿಯೊಬ್ಬ ಸಚಿವರೂ ಯಾವುದೇ ಕಂಡೀಶನ್ ಇಲ್ಲದೆ ಸರ್ಕಾರದೊಂದಿಗೆ ನಿಲ್ಲಬೇಕೆಂದು ನಿರೀಕ್ಷಿಸಲಾಗುತ್ತದೆ.

ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲು ಎಂದರೇನು? : ಭಾರತದ ಸಂವಿಧಾನದ ಅನುಚ್ಛೇದ 75 (3) ಈ ತತ್ವವನ್ನು ಸಾಕಾರಗೊಳಿಸುತ್ತದೆ ಮತ್ತು ಮಂತ್ರಿಮಂಡಲವು ಜನರ ಸದನಕ್ಕೆ ಅಂದರೆ ಲೋಕಸಭೆಗೆ ಸಾಮೂಹಿಕವಾಗಿ ಜವಾಬ್ದಾರನಾಗಿರುತ್ತದೆ ಎಂದು ಖಾತರಿಪಡಿಸುತ್ತದೆ. ಸರ್ಕಾರವು ಸದನದ ವಿಶ್ವಾಸವನ್ನು ಕಳೆದುಕೊಂಡಿದ್ದರೆ ಅದು ರಾಜೀನಾಮೆ ನೀಡಬೇಕು ಅಥವಾ ಸದನವನ್ನು ವಿಸರ್ಜಿಸಬೇಕು ಎಂದು ಇದು ಸೂಚಿಸುತ್ತದೆ. ಆದಾಗ್ಯೂ, ವಿಶ್ವಾಸಮತದಲ್ಲಿ ಸೋಲು ಉಂಟಾದರೆ ಮಾತ್ರ ರಾಜೀನಾಮೆ ಅಥವಾ ವಿಸರ್ಜನೆಯ ಸಂದರ್ಭ ಬರುತ್ತದೆ. ರಾಜೀನಾಮೆ ನೀಡುವುದು ಅಥವಾ ಸದನವನ್ನು ವಿಸರ್ಜಿಸುವುದು ಇವುಗಳಲ್ಲಿ ಯಾವುದು ಮುಖ್ಯ ಎಂಬುದನ್ನು ಪರಿಗಣಿಸುವುದು ಪ್ರಾಥಮಿಕವಾಗಿ ಸರ್ಕಾರಕ್ಕೆ ಬಿಟ್ಟ ವಿಷಯ. ಅವಿಶ್ವಾಸ ಗೊತ್ತುವಳಿಯ ಮೇಲೆ ಮತ ಚಲಾಯಿಸುವಂತೆ ಒತ್ತಾಯಿಸುವ ಮೂಲಕ ಪ್ರತಿಪಕ್ಷಗಳು ಸದನದ ಅಭಿಪ್ರಾಯವನ್ನು ಪರೀಕ್ಷಿಸಬಹುದು.

ಅವಿಶ್ವಾಸ ಗೊತ್ತುವಳಿಯನ್ನು ಯಾಕೆ ಮಂಡಿಸುತ್ತಾರೆ? : ಸಾಂವಿಧಾನಿಕ ನಿಬಂಧನೆಗೆ ಅನುಸಾರವಾಗಿ, ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು ಮಂತ್ರಿಮಂಡಲದಲ್ಲಿ ವಿಶ್ವಾಸದ ಕೊರತೆಯನ್ನು ವ್ಯಕ್ತಪಡಿಸುವ ನಿರ್ಣಯವನ್ನು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಮಂಡಿಸಬಹುದು ಎಂದು ಹೇಳುತ್ತವೆ. ಅವುಗಳೆಂದರೆ: (ಎ) ನಿರ್ಣಯವನ್ನು ಮಾಡಲು ಸ್ಪೀಕರ್ ಕರೆದಾಗ ಸದಸ್ಯರು ಅನುಮತಿಯನ್ನು ಕೇಳುತ್ತಾರೆ; (ಬಿ) ಗೊತ್ತುವಳಿ ಮಂಡನೆಯನ್ನು ಕೇಳುವ ಸದಸ್ಯನು ಆ ದಿನ 10.00 ಗಂಟೆಯೊಳಗೆ ಮಂಡಿಸಲು ಉದ್ದೇಶಿಸಿರುವ ಗೊತ್ತುವಳಿಯ ಲಿಖಿತ ಸೂಚನೆಯನ್ನು ಪ್ರಧಾನ ಕಾರ್ಯದರ್ಶಿಗೆ ನೀಡಬೇಕು.

ಅವಿಶ್ವಾಸ ಗೊತ್ತುವಳಿ ಮಂಡನೆ ಹೇಗಿರುತ್ತದೆ? : ಗೊತ್ತುವಳಿ ಕ್ರಮಬದ್ಧವಾಗಿದೆ ಎಂದು ಸಭಾಧ್ಯಕ್ಷರು ಅಭಿಪ್ರಾಯಪಟ್ಟರೆ, ಅವರು ಗೊತ್ತುವಳಿಯನ್ನು ಸದನದ ಮುಂದೆ ಓದಬೇಕು ಮತ್ತು ಗೊತ್ತುವಳಿಯ ಪರವಾಗಿ ಇರುವ ಸದಸ್ಯರನ್ನು ತಮ್ಮ ಸ್ಥಾನಗಳಲ್ಲಿ ಎದ್ದು ನಿಲ್ಲುವಂತೆ ವಿನಂತಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಐವತ್ತಕ್ಕಿಂತ ಹೆಚ್ಚು ಸದಸ್ಯರು ಎದ್ದು ನಿಂತರೆ, ಗೊತ್ತುವಳಿ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ ಎಂದು ಘೋಷಿಸಬೇಕು ಮತ್ತು ನಿರ್ದಿಷ್ಟ ದಿನದಂದು ಗೊತ್ತುವಳಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಬೇಕು. ಗೊತ್ತುವಳಿ ಪ್ರಸ್ತಾಪ ಮಂಡನೆಯು ಒಪ್ಪಿಗೆಯಾದರೆ ಆ ದಿನದಿಂದ ಹತ್ತು ದಿನಗಳಿಗಿಂತ ಮೊದಲು ಅದಕ್ಕೆ ಚರ್ಚೆಯ ದಿನಾಂಕವನ್ನು ನಿಗದಿಪಡಿಸಬೇಕಾಗುತ್ತದೆ.

ಚರ್ಚೆ ಉಲ್ಲೇಖಿಸಿದ ವಿಷಯಗಳಿಗೆ ಮಾತ್ರ ಸೀಮಿತವಲ್ಲ : ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಯು ಗೊತ್ತುವಳಿಯ ಸೂಚನೆಯಲ್ಲಿ ಉಲ್ಲೇಖಿಸಲಾದ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಾಮಾನ್ಯವಾಗಿ, ಗೊತ್ತುವಳಿಯನ್ನು ಮಂಡಿಸುವವರು ಉಲ್ಲೇಖಿಸಿದ ವಿಷಯಗಳನ್ನು ಚರ್ಚಿಸಲಾಗುತ್ತದೆ ಆದರೆ ಗೊತ್ತುವಳಿಯ ಮೇಲಿನ ಚರ್ಚೆಯ ಸಮಯದಲ್ಲಿ ಯಾವುದೇ ಸದಸ್ಯನು ತಾನು ಇಷ್ಟಪಡುವ ಯಾವುದೇ ಇತರ ವಿಷಯವನ್ನು ಚರ್ಚಿಸಲು ಅವಕಾಶವಿರುತ್ತದೆ.

ಸಂಸತ್‌ನಲ್ಲಿ ಪ್ರಧಾನಿ ಉತ್ತರ ನೀಡಬೇಕು : ಸದಸ್ಯರು ಗೊತ್ತುವಳಿಯ ಮೇಲೆ ಮಾತನಾಡಿದ ನಂತರ, ಸರ್ಕಾರದ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಪ್ರಧಾನಿ ಉತ್ತರಿಸುತ್ತಾರೆ. ಗೊತ್ತುವಳಿಯನ್ನು ಮಂಡಿಸುವವನಿಗೆ ಉತ್ತರಿಸುವ ಹಕ್ಕಿರುತ್ತದೆ. ಸಭಾಧ್ಯಕ್ಷರು, ನಿಗದಿಪಡಿಸಿದ ದಿನದಂದು ಅಥವಾ ನಿಗದಿಪಡಿಸಿದ ದಿನಗಳ ಕೊನೆಯ ದಿನದಂದು ನಿಗದಿತ ಸಮಯದಲ್ಲಿ, ಚರ್ಚೆ ಮುಗಿದ ನಂತರ, ಗೊತ್ತುವಳಿಯ ಮೇಲೆ ಸದನದ ನಿರ್ಧಾರವನ್ನು ನಿರ್ಧರಿಸಲು ಅಗತ್ಯವಿರುವ ಪ್ರತಿಯೊಂದು ಪ್ರಶ್ನೆಯನ್ನು ತಕ್ಷಣವೇ ಎತ್ತಬಹುದು.

ಭಾರತದ ಸಂಸತ್​ನಲ್ಲಿ ಈಗಿನ ಸಂಖ್ಯಾಬಲ ಹೇಗಿದೆ? : ಎನ್​ಡಿಎ (334) ಬಲವು ಈಗ ಭಾರತ ಅಥವಾ ಇಂಡಿಯಾ (I.N.D.I.A) (142) ಎಂದು ಕರೆಯಲ್ಪಡುವ ಪ್ರತಿಪಕ್ಷಗಳ ಗುಂಪಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂಬ ಅಂಶವನ್ನು ಗಮನಿಸಿದರೆ, ಪ್ರಸ್ತುತ ಅವಿಶ್ವಾಸ ನಿರ್ಣಯವು ಸಂಖ್ಯಾ ಪರೀಕ್ಷೆಯಲ್ಲಿ ವಿಫಲವಾಗಬಹುದು. ಮಣಿಪುರ ವಿಷಯದ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ಮತ್ತು ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಒತ್ತಾಯಿಸುವ ಮೂಲಕ ಚರ್ಚೆಯಲ್ಲಿ ಗೆಲ್ಲುತ್ತೇವೆ ಎಂದು ವಿರೋಧ ಪಕ್ಷಗಳ ಬಣ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್​ಕ್ಲೂಸಿವ್ ಅಲೈಯನ್ಸ್ (ಇಂಡಿಯಾ)) ನಾಯಕರು ವಾದಿಸುತ್ತಾರೆ.

ಮೊದಲ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಯಾವಾಗ? : ಅವಿಶ್ವಾಸ ಗೊತ್ತುವಳಿಯನ್ನು ಐತಿಹಾಸಿಕವಾಗಿ ಒಂದು ನಿರ್ದಿಷ್ಟ ವಿಷಯ ಅಥವಾ ವಿಷಯದ ಮೇಲೆ ಚರ್ಚೆಗೆ ಒತ್ತಾಯಿಸುವ ಕಾರ್ಯತಂತ್ರದ ಸಾಧನವಾಗಿ ಬಳಸಲಾಗುತ್ತದೆ. 1963 ರಲ್ಲಿ ಮೂರನೇ ಲೋಕಸಭೆಯಲ್ಲಿ ಆಚಾರ್ಯ ಜೆ.ಬಿ. ಕೃಪಲಾನಿ ಅವರು ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರದ ವಿರುದ್ಧ ಮೊದಲ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ನಿರ್ಣಯದ ಮೇಲಿನ ಚರ್ಚೆಯು ನಾಲ್ಕು ದಿನಗಳಲ್ಲಿ 21 ಗಂಟೆಗಳ ಕಾಲ ನಡೆಯಿತು. ಇದರಲ್ಲಿ 40 ಸಂಸದರು ಭಾಗವಹಿಸಿದ್ದರು.

ಈವರೆಗೆ ಮಂಡನೆಯಾದ ಅವಿಶ್ವಾಸ ಗೊತ್ತುವಳಿಗಳು ಎಷ್ಟು? : ಭಾರತೀಯ ಸಂವಿಧಾನವು ಜಾರಿಗೆ ಬಂದಾಗಿನಿಂದ, ಸಂಸತ್ತಿನಲ್ಲಿ 27 ಅವಿಶ್ವಾಸ ಗೊತ್ತುವಳಿಗಳನ್ನು ಮಂಡಿಸಲಾಗಿದೆ (ಈಗಿನದನ್ನು ಹೊರತುಪಡಿಸಿ). ಈ ಹಿಂದೆ 2018ರಲ್ಲಿ ಮಂಡಿಸಲಾಗಿತ್ತು. ಈ 27 ಅವಿಶ್ವಾಸ ಗೊತ್ತುವಳಿಗಳಲ್ಲಿ 15 ಗೊತ್ತುವಳಿಗಳನ್ನು ಇಂದಿರಾ ಗಾಂಧಿ ನೇತೃತ್ವದ ಸರ್ಕಾರಗಳ ವಿರುದ್ಧ ಕಾಲಕಾಲಕ್ಕೆ ಮಂಡಿಸಲಾಗಿದೆ. ಈ 27 ಅವಿಶ್ವಾಸ ಗೊತ್ತುವಳಿ ಮಂಡನೆಗಳ ಪೈಕಿ ಯಾವುದೂ ಯಶಸ್ವಿಯಾಗಿಲ್ಲ. ಆದಾಗ್ಯೂ, 1979 ರಲ್ಲಿ, ಮೊರಾರ್ಜಿ ದೇಸಾಯಿ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು. ಅದರ ಮೇಲಿನ ಚರ್ಚೆಯು ಅಪೂರ್ಣವಾಗಿ ಉಳಿದರೂ ಮೊರಾರ್ಜಿ ದೇಸಾಯಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಅವಿಶ್ವಾಸ ಗೊತ್ತುವಳಿ ಮೇಲೆ ಯಾವುದೇ ಮತದಾನ ನಡೆಯದಿದ್ದರೂ, ಅವಿಶ್ವಾಸ ಗೊತ್ತುವಳಿಯ ನಂತರ ಸರ್ಕಾರ ಬಿದ್ದುಹೋದ ಏಕೈಕ ಸಂದರ್ಭ ಇದು.

ಎನ್​ಡಿಎ ವಿರುದ್ಧ 2ನೇ ಸಲ ಅವಿಶ್ವಾಸ ಗೊತ್ತುವಳಿ: ಎನ್​ಡಿಎ ಸರ್ಕಾರ 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದೆ. ಮೊದಲ ಅವಿಶ್ವಾಸ ಗೊತ್ತುವಳಿಯನ್ನು ಜುಲೈ 20, 2018 ರಂದು ಮಂಡಿಸಲಾಗಿತ್ತು. ಎನ್​ಡಿಎ 325 ಸಂಸದರ ಬೆಂಬಲದೊಂದಿಗೆ ಗೊತ್ತುವಳಿಯನ್ನು ಸೋಲಿಸಿತು. ಗೊತ್ತುವಳಿಯ ಪರವಾಗಿ ಕೇವಲ 126 ಸಂಸದರು ಮಾತ್ರ ಮತ ಹಾಕಿದರು. 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದಿತು. 2024 ರಲ್ಲಿ ತಮ್ಮ ಪಕ್ಷದ ಗೆಲುವಿಗೆ ಅನುಕೂಲವಾಗುವಂತೆ ಪ್ರತಿಪಕ್ಷಗಳು 2023 ರಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಬಹುದು ಎಂದು ನರೇಂದ್ರ ಮೋದಿ ಭವಿಷ್ಯ ನುಡಿದಿದ್ದರು.

Last Updated : Aug 8, 2023, 6:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.