ETV Bharat / bharat

Explained: ಅರುಣಾಚಲದಿಂದ ಮಹಾರಾಷ್ಟ್ರ.. ಏಳು ರಾಜ್ಯಗಳಲ್ಲಿ ಬಿಜೆಪಿ ಪಾರುಪತ್ಯದ ಪಯಣ - ಮಹಾ ವಿಕಾಸ್ ಅಘಾಡಿ ಪತನ

ಹಠಕ್ಕೆ ಬಿದ್ದ ಬಿಜೆಪಿ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು ಕೆಡವಿ ಅವಮಾನವಾದ ಜಾಗದಲ್ಲೇ ಸಮ್ಮಾನ ಮಾಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೈ-ವೋಲ್ಟೇಜ್ ನಾಟಕದ ನಂತರ ರಾಜ್ಯವನ್ನು ಪುನಃ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕೇಸರಿ ಪಡೆ ಯಶಸ್ವಿಯಾಗಿದೆ. 2014 ರ ನಂತರ ಇಂಥ ಬಂಡಾಯ ಹಾಗೂ ವಿಶೇಷ ತಂತ್ರಗಾರಿಕೆಯ ಮೂಲಕ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

Explained: BJP and its success story, from Maha' to Arunachal Pradesh; a tale of seven states

author img

By

Published : Jul 1, 2022, 3:36 PM IST

Updated : Jul 2, 2022, 11:51 AM IST

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಮಹಾ ನಾಟಕ ಮುಕ್ತಾಯಗೊಂಡಿದೆ. ಶಿಂಧೆ ಪಟ್ಟಿಗೆ ಉದ್ಧವ್​ ಸ್ಥಾನ ಕಳೆದುಕೊಂಡಿದ್ದಾರೆ. ಶಿವಸೈನಿಕರಲ್ಲಿ ನಡೆದ ಬಂಡಾಯಕ್ಕೆ ಉದ್ಧವ್​ ಅಡ್ಡ ಬಿದ್ದು, ಅಧಿಕಾರದಿಂದ ನಿರ್ಗಮಿಸಿದ್ದಾರೆ. ಅವರ ಜಾಗದಲ್ಲಿ ಅವರದೇ ಪಕ್ಷದ ಇನ್ನೊಬ್ಬ ಸಿಎಂ ಆಗಿ ಏಕನಾಥ ಶಿಂಧೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಮಿತ್ರರು ಮಾತ್ರ ಬದಲಾಗಿದ್ದಾರೆ.

ಹಠಕ್ಕೆ ಬಿದ್ದ ಬಿಜೆಪಿ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು ಕೆಡವಿ ಅವಮಾನವಾದ ಜಾಗದಲ್ಲೇ ಸಮ್ಮಾನ ಮಾಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೈ-ವೋಲ್ಟೇಜ್ ನಾಟಕದ ನಂತರ ರಾಜ್ಯವನ್ನು ಪುನಃ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕೇಸರಿ ಪಡೆ ಯಶಸ್ವಿಯಾಗಿದೆ. 2014 ರ ನಂತರ ಇಂಥ ಬಂಡಾಯ ಹಾಗೂ ವಿಶೇಷ ತಂತ್ರಗಾರಿಕೆಯ ಮೂಲಕ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಗೋವಾ, ಮಣಿಪುರ, ಮತ್ತು ಅರುಣಾಚಲ ಪ್ರದೇಶ ಈ ಎಲ್ಲ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಕೆಡವಿ ಬಿಜೆಪಿ ಅಧಿಕಾರಕ್ಕೆ ಏರುವಲ್ಲಿ ಯಶ ಕಂಡಿದೆ.

ಕರ್ನಾಟಕದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶದಿಂದ ಯಡಿಯೂರಪ್ಪ ಸರ್ಕಾರ ಅಧಿಕಾರ ಕಳೆದುಕೊಂಡಿದ್ದರೆ, ಮತ್ತೊಂದು ಬಾರಿ ಸುಪ್ರೀಂನಲ್ಲೇ ಹೋರಾಡಿ ವರ್ಷದ ಬಳಿಕ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಶಿಂಧೆ ಬಣ, ಅಲ್ಲಿ ಗೆದ್ದು ನಿರಾಯಾಸವಾಗಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.

ಅನರ್ಹತೆ ಪ್ರಕ್ರಿಯೆಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ನಿರಾಕರಿಸುವ ಮೂಲಕ ಹೊಸ ಸರ್ಕಾರದ ರಚನೆಗೆ ಅನುವು ಮಾಡಿಕೊಟ್ಟಂತಾಗಿದೆ.

ಇನ್ನು ಎಲ್ಲೆಲ್ಲಿ ಇಂಥ ಬಂಡಾಯಗಳು ನಡೆದಿದ್ದವು:

ಕರ್ನಾಟಕ: 2018ರಲ್ಲಿ ಕಾಂಗ್ರೆಸ್​ ಪಕ್ಷ ಎಚ್‌ಡಿ ಕುಮಾರಸ್ವಾಮಿ ಜತೆ ಒಪ್ಪಂದ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಆದರೆ 2018ರ ಚುನಾವಣೆಯಲ್ಲಿ 225 ಸ್ಥಾನ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳೊಂದಿಗೆ ಅತ್ಯಂತ ದೊಡ್ಡ ಪಕ್ಷವಾಗಿದ್ದರೆ, ಕಾಂಗ್ರೆಸ್​ 79 ಹಾಗೂ ಜೆಡಿಎಸ್​ 38 ಸ್ಥಾನಗಳನ್ನು ಪಡೆದುಕೊಂಡಿದ್ದವು. ಆದರೆ ಬಿಜೆಪಿಯನ್ನು ದೂರ ಇಡುವ ಸಲುವಾಗಿ ಕಾಂಗ್ರೆಸ್​- ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನ ಸಿಎಂ ಮಾಡಲಾಗಿತ್ತು. ಆದರೆ ಇದಕ್ಕೂ ಮೊದಲು ಅತಿದೊಡ್ಡ ಪಕ್ಷಕ್ಕೆ ಅಂದಿನ ರಾಜ್ಯಪಾಲರು ಸರ್ಕಾರ ರಚನೆ ಹಕ್ಕು ನೀಡಿದ್ದರು. ಅದರಂತೆ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರಿಗೆ ಬಹುಮತಕ್ಕೆ 8 ಶಾಸಕರ ಕೊರತೆ ಇತ್ತು. ರಾಜ್ಯಪಾಲರು ವಿಶ್ವಾಸ ಮತ ಸಾಬೀತಿಗೆ 15 ದಿನದ ಅವಕಾಶ ನೀಡಿದ್ದರು.

ರಾಜ್ಯಪಾಲರ ಈ ಆದೇಶದ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್​ನಲ್ಲಿ ರಾತ್ರೋರಾತ್ರಿ ವಿಚಾರಣೆ ಆರಂಭವಾಗಿ ಬೆಳಗಿನವರೆಗೂ ವಾದ- ಪ್ರತಿವಾದ ಆಲಿಸಿ ತಕ್ಷಣ ವಿಶ್ವಾಸಮತ ಸಾಬೀತಿಗೆ ಬಿಎಸ್​ವೈಗೆ ಆದೇಶಿಸಿತ್ತು. ಆಗ ಬಿಎಸ್​​ವೈ ಸರ್ಕಾರ ಮೂರೇ ದಿನದಲ್ಲಿ ಅಧಿಕಾರ ಕಳೆದುಕೊಂಡಿತ್ತು. ಆಗ ಅಧಿಕಾರಕ್ಕೆ ಬಂದಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್​​ ಸರ್ಕಾರ ವರ್ಷದ ಬಳಿಕ 17 ಶಾಸಕರ ಬಂಡಾಯದಿಂದ ಅಲ್ಪಮತಕ್ಕೆ ಕುಸಿದಿತ್ತು. ರಾಜೀನಾಮೆ ಪ್ರಹಸನದಲ್ಲಿ 17 ಶಾಸಕರು ಅನರ್ಹಗೊಂಡಿದ್ದರು. ಆಗ ಬಿಜೆಪಿ ರಾಜಕೀಯ ಮೇಲಾಟದಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿತ್ತು. ಮತ್ತೆ ಮರು ಚುನಾವಣೆ ನಡೆದು ಬಿಜೆಪಿ ಅಧಿಕಾರ ಭದ್ರ ಪಡಿಸಿಕೊಂಡಿತ್ತು.

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಬಿಜೆಪಿ- ಕಾಂಗ್ರೆಸ್​ ಸಮಬಲದ ಸೀಟು ಗೆದ್ದಿದ್ದವು. ಆಗ ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್​ ಕಮಲನಾಥ್​ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿತ್ತು.

2020 ರಲ್ಲಿ ರಾಜೀನಾಮೆಗಳು ಮತ್ತು ಪಕ್ಷಾಂತರಗಳ ನಂತರ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಮಾತುಕತೆಗಳ ನಂತರ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಸಿಂಧಿಯಾಗೆ ನಿಷ್ಠರಾಗಿದ್ದ ಎಲ್ಲ 22 ಶಾಸಕರು ರಾಜೀನಾಮೆ ಸಲ್ಲಿಸಿದರು. ಸಿಂಧಿಯಾ ನಡೆಯ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಸುಳಿವು ಇರಲಿಲ್ಲ ಹಾಗೂ ಕಾಂಗ್ರೆಸ್ ಹರಿಯಾಣದಲ್ಲಿದ್ದ 10 ಶಾಸಕರನ್ನು ಗುರ್‌ಗಾಂವ್‌ಗೆ ಮರಳಿ ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸುಪ್ರೀಂ ಕೋರ್ಟ್‌ನಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ಕೋರಿದ್ದವು ಹಾಗೂ ಸುಪ್ರೀಂ ಕೋರ್ಟ್ ಈ ಕೋರಿಕೆಯನ್ನು ಮಾನ್ಯ ಮಾಡಿತ್ತು. ಕೊನೆಗೂ ಸಿಎಂ ಕಮಲ್ ನಾಥ್ ಪದಚ್ಯುತಗೊಂಡು ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಕಮಲ್ ನಾಥ್ ಉತ್ತರಾಧಿಕಾರಿಯಾದರು.

ಮೇಘಾಲಯ: ಮೇಘಾಲಯದ ಕುತೂಹಲಕಾರಿ ಪ್ರಕರಣವು ಕರ್ನಾಟಕದಲ್ಲಿ ನಡೆದ ಪ್ರಹಸನಕ್ಕೆ ಬಹಳ ಹೋಲಿಕೆಯಾಗುತ್ತದೆ. ಆದರೆ ಇದರಲ್ಲಿ ಒಂದು ಪಾತ್ರ ಮಾತ್ರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಹೊಂದಿತ್ತು. ಬಿಜೆಪಿಯ ಮಿತ್ರಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 19 ಸ್ಥಾನಗಳನ್ನು ಗೆದ್ದಿತ್ತು. ಮಾಜಿ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚುನಾವಣಾ ನಂತರ ನಡೆಸಿದ ರಾಜಕೀಯ ತಂತ್ರಗಾರಿಕೆಯ ನಂತರ ಬಿಜೆಪಿಯು ಇತರ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಬಿಜೆಪಿ 34 ಶಾಸಕರ ಬೆಂಬಲ ಪಡೆದು ಎನ್‌ಪಿಪಿಯ ಕಾನ್ರಾಡ್ ಸಂಗ್ಮಾ ಅವರನ್ನು ಸಿಎಂ ಮಾಡಿ ಮೇಘಾಲಯದಲ್ಲಿ ಎನ್‌ಡಿಎ ಸರ್ಕಾರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು.

ಗೋವಾ: ಇಲ್ಲಿಯೂ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 13 ಶಾಸಕರೊಂದಿಗೆ ಎರಡನೇ ಸ್ಥಾನ ಪಡೆದಿದ್ದ ಬಿಜೆಪಿ ಕಾಂಗ್ರೆಸ್‌ನ್ನು ಹಿಮ್ಮೆಟ್ಟಿಸಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು ಸ್ಥಾಪನೆ ಮಾಡಿಕೊಂಡ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಬೆಂಬಲವು ಬಿಜೆಪಿಗೆ ವರವಾಗಿ ಪರಿಣಮಿಸಿತು.

ಮಣಿಪುರ: ಮೇಘಾಲಯ ಮತ್ತು ಗೋವಾದಂತೆ, ಇಲ್ಲಿಯೂ ಬಿಜೆಪಿಗೆ ಸರ್ಕಾರ ರಚಿಸಲು ಸಾಕಷ್ಟು ಸಂಖ್ಯೆಯಿರಲಿಲ್ಲ. 60 ಸದಸ್ಯರ ಸದನದಲ್ಲಿ 21 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಕಾಂಗ್ರೆಸ್ 28 ಸ್ಥಾನಗಳೊಂದಿಗೆ ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಎದುರಿಸಿತ್ತು. ಇನ್ನು, ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ನ ಮಾಜಿ ನಾಯಕ ಎನ್ ಬಿರೇನ್ ಸಿಂಗ್ ಅವರು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶವು ಕಾಂಗ್ರೆಸ್​ನಿಂದ ಬಿಜೆಪಿಗೆ ಸಿಕ್ಕ ಮೊದಲ ಕಾಂಗ್ರೆಸ್ ರಾಜ್ಯವಾಗಿದೆ. 2014 ರಲ್ಲಿ 60 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಪ್ರಾದೇಶಿಕ ರಾಜಕೀಯ ಮತ್ತು ಬಿಜೆಪಿಯ ರಾಜಕೀಯ ಮೇಲಾಟಗಳಿಂದ ಅರುಣಾಚಲ ಪ್ರದೇಶ ರಾಜ್ಯವು ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ಎರಡು ವರ್ಷಗಳಲ್ಲಿ ನಬಮ್ ತುಕಿ, ಕಲಿಖೋ ಪುಲ್ ಮತ್ತು ಪೆಮಾ ಖಂಡು ಮುಖ್ಯಮಂತ್ರಿಗಳಾದರು.

ಬಿಜೆಪಿ ಬೆಂಬಲಿಸಿದ್ದ ಪುಲ್ ಅವರ ಸರ್ಕಾರವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ನಂತರ, ಪುಲ್ ಆತ್ಮಹತ್ಯೆ ಮಾಡಿಕೊಂಡರು. 44 ಕಾಂಗ್ರೆಸ್ ಶಾಸಕರ ಪೈಕಿ 43 ಶಾಸಕರ ಬೆಂಬಲವನ್ನು ಹೊಂದಿದ್ದ ಖಂಡು ಅವರು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ (ಪಿಪಿಎ) ಸ್ಥಾಪಿಸಿ ಸಿಎಂ ಆದ ತುಕಿ ಅವರನ್ನು ಕೆಳಗಿಳಿಸಿದರು. ಕಾಂಗ್ರೆಸ್‌ಗೆ ಮರಳಿದ ಖಂಡು ನಂತರ 33 ಪಿಪಿಎ ಶಾಸಕರೊಂದಿಗೆ ಬಿಜೆಪಿ ಸೇರಿದರು. 2019 ರ ವಿಧಾನಸಭಾ ಚುನಾವಣೆಯಲ್ಲಿ, ಖಂಡು 41 ಸ್ಥಾನಗಳನ್ನು ಗೆದ್ದು ಬಿಜೆಪಿ ಸಿಎಂ ಆದರು.

Last Updated : Jul 2, 2022, 11:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.