ETV Bharat / bharat

ಕಾಸರಗೋಡಿನಲ್ಲಿ ಮನರೇಗಾ ಕಾರ್ಮಿಕರಿಗೆ ಅವಧಿ ಮೀರಿದ ಮಾತ್ರೆಗಳ ವಿತರಣೆ: ತನಿಖೆಗೆ ಆದೇಶ

author img

By

Published : Jul 12, 2023, 3:41 PM IST

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮನರೇಗಾ ಕಾರ್ಮಿಕರಿಗೆ ಅವಧಿ ಮೀರಿದ ಮಾತ್ರೆಗಳು ನೀಡಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

expired-medicine-issued-to-mgnrega-workers-in-kasaragod-dmo-ordered-for-enquiry
ಕಾಸರಗೋಡಿನಲ್ಲಿ ಮನರೇಗಾ ಕಾರ್ಮಿಕರಿಗೆ ಅವಧಿ ಮೀರಿದ ಮಾತ್ರೆಗಳ ವಿತರಣೆ: ತನಿಖೆಗೆ ಆದೇಶ

ಕಾಸರಗೋಡು (ಕೇರಳ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿಎನ್‌ಆರ್‌ಇಜಿಎ) ಯೋಜನೆಯ ಕೂಲಿ ಕಾರ್ಮಿಕರಿಗೆ ಅವಧಿ ಮೀರಿದ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಈ ಮಾತ್ರೆಗಳನ್ನು ಸೇವಿಸಿದ ಮನರೇಗಾ ಕಾರ್ಮಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆದರೆ, ಅದೃಷ್ಟವಶಾತ್​ ಇದುವರೆಗೆ ಯಾರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.

ಇಲ್ಲಿನ ಕಿನಾನೂರು-ಕರಿಂತಲಂ ಪಂಚಾಯಿತಿಯ ವಾರ್ಡ್ ನಂ.8ರ ಮಾಲೂರ್ಕಾಯಂನಲ್ಲಿ ಜುಲೈ 6ರಂದು ಹಾಗೂ 7ರಂದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬಂದ ನೂರಾರು ಕಾರ್ಮಿಕರಿಗೆ ಅವಧಿ ಮೀರಿದ ಡಾಕ್ಸಿಸೈಕ್ಲಿನ್ ಮಾತ್ರೆಗಳನ್ನು ವಿತರಿಸಲಾಗಿದೆ. ಆದರೆ, ಈ ಮಾತ್ರೆಗಳು ಅವಧಿಯು ಕಳೆದ ಮೇನಲ್ಲಿ ಕೊನೆಗೊಂಡಿತ್ತು ಎಂದು ವರದಿಯಾಗಿದೆ.

ಮನರೇಗಾ ಕಾರ್ಮಿಕರಿಗೆ ವಿತರಿಸಲೆಂದು ರೋಗ ನಿರೋಧಕ ಮಾತ್ರೆಗಳನ್ನು ಎಂಎನ್‌ಆರ್‌ಇಜಿಎ ಕಾರ್ಯಕ್ರಮದ ಮುಂಚೂಣಿ ಮೇಲ್ವಿಚಾರಕರು ಜುಲೈ 6ರಂದು ಔಷಧಾಲಯದಿಂದ ಖರೀದಿಸಿದ್ದರು. ಅಂದು ಸಂಜೆ ಮತ್ತು ಮರು ದಿನ ಕೂಲಿ ಕಾರ್ಮಿಕರಿಗೆ ಆ ಮಾತ್ರೆಗಳನ್ನು ವಿತರಿಸಿದ್ದಾರೆ. ಇವರನ್ನು ನಂಬಿ ಮಾತ್ರೆ ಎಲ್ಲ ಕಾರ್ಮಿಕರು ಮಾತ್ರೆಗಳನ್ನು ಸೇವಿಸಿದ್ದಾರೆ. ಆದರೆ, ಮಾತ್ರೆಗಳ ಅವಧಿ ಮೀರಿದ ವಿಷಯ ತಿಳಿದು ತೀವ್ರ ಆತಂಕದಲ್ಲಿದ್ದಾರೆ.

ಈ ಮಾಹಿತಿ ಹೊರಬೀಳುತ್ತಿದ್ದಂತೆ ಕಾರ್ಮಿಕರು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಂಒ)ಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಸ್ವೀಕರಿಸಿದ ಕಾಸರಗೋಡು ಡಿಎಂಒ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಉಪ ಡಿಎಂಒ ಡಾ.ಗೀತಾ ಅವರಿಗೆ ವಿಚಾರಣೆಯ ಹೊಣೆ ವಹಿಸಲಾಗಿದೆ.

ಅವಧಿ ಮೀರಿದ ಮಾತ್ರೆಗಳನ್ನು ಸೇವಿಸುವ ಯಾವುದೇ ಕಾರ್ಮಿಕರಿಂದ ಇದುವರೆಗೆ ಯಾವುದೇ ಅನಾರೋಗ್ಯ ಅಥವಾ ಅಸ್ವಸ್ಥತೆ ವರದಿಯಾಗಿಲ್ಲ. ಪಂಚಾಯಿತಿ ವ್ಯಾಪ್ತಿಯ ಕುಟುಂಬ ಆರೋಗ್ಯ ಕೇಂದ್ರದಿಂದಲೇ ಔಷಧ ವಿತರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸೂಚನೆಯಂತೆ ಔಷಧಾಲಯದಿಂದ ಮಾತ್ರೆಗಳನ್ನು ಪಡೆಯಲಾಗಿದೆ. ಇಲಿ ಜ್ವರ ತಡೆಗೆ ಎಲ್ಲ ನೌಕರರಿಗೆ ತಲಾ ಎರಡು ಮಾತ್ರೆಗಳನ್ನು ವಿತರಿಸಲಾಗಿದೆ. ತಪ್ಪಿ ಹಳೆ ದಾಸ್ತಾನು ವಿತರಿಸಿರಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕಳೆದ ಗುರುವಾರ ಆಸ್ಪತ್ರೆಯಿಂದ ಮಾತ್ರೆಗಳನ್ನು ಸಹಿ ಮಾಡಿ ಪಡೆದುಕೊಂಡಿದ್ದೇನೆ. ಕರ್ತವ್ಯಕ್ಕೆ ಹಾಜರಿದ್ದ ಎಲ್ಲ ಕಾರ್ಮಿಕರಿಗೂ ಅವುಗಳನ್ನು ವಿತರಿಸಲಾಗಿದೆ. ಆಸ್ಪತ್ರೆಯಿಂದ ಮಾತ್ರೆಗಳನ್ನು ನೀಡಲಾಗಿರುವುದರಿಂದ ಅವುಗಳ ಅವಧಿ ಮುಗಿದಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಮುಂಚೂಣಿ ಮೇಲ್ವಿಚಾರಕರು ತಿಳಿಸಿದ್ದಾರೆ.

ಕೆಸರು ಮತ್ತು ಅನೈರ್ಮಲ್ಯದ ಸಂದರ್ಭಗಳಲ್ಲಿ ಕೆಲಸ ಮಾಡುವ ಮನರೇಗಾ ಕಾರ್ಮಿಕರು ಕಲುಷಿತ ನೀರಿಗೆ ಹೆಚ್ಚು ಒಡ್ಡಿಕೊಳ್ಳುತ್ತಾರೆ. ಆದ್ದರಿಂದ ಅವರು ಲೆಪ್ಟೊಸ್ಪೈರೋಸಿಸ್​ಗೆ ಗುರಿಯಾಗುವ ಅಪಾಯ ಹೆಚ್ಚು. ಆದ್ದರಿಂದ ಮಳೆಗಾಲದಲ್ಲಿ ಈ ಲೆಪ್ಟೊಸ್ಪೈರೋಸಿಸ್ ತಡೆಗಟ್ಟಲು ಕಾರ್ಮಿಕರಿಗೆ ಡಾಕ್ಸಿಸೈಕ್ಲಿನ್ ಮಾತ್ರೆಗಳನ್ನು ವಿತರಿಸುವುದು ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಬಂಗಾರ ಖಾತ್ರಿ ಮಾಡಿಕೊಂಡ ನರೇಗಾ ಕಾರ್ಮಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.