ಜಾರ್ಖಂಡ್: ಇಲ್ಲಿನ ಗರ್ಹ್ವಾ ಎಂಬಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಮೂವರು ಸಾವಿಗೀಡಾಗಿದ್ದಾರೆ. ನರಭಕ್ಷಕ ಚಿರತೆಯನ್ನು ಗುರುತಿಸಿ ಕೊಲ್ಲಲು ಆದೇಶಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸದ್ಯಕ್ಕೆ ಚಿರತೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲು ಅನುಮತಿಸಿದೆ. ಇನ್ನೆರಡು ದಿನಗಳಲ್ಲಿ ಚಿರತೆಯನ್ನು ನರಭಕ್ಷಕ ಎಂದು ಘೋಷಿಸುವ ಸಾಧ್ಯತೆಯೂ ಇದೆ. ಇಲಾಖೆಯ ಪರಿಣತ ತಂಡ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಚಿರತೆಯನ್ನು ನರಭಕ್ಷಕ ಎಂದು ಘೋಷಿಸಿದಲ್ಲಿ ಕೊಲ್ಲಲು ಅರಣ್ಯ ಇಲಾಖೆ ಆದೇಶ ನೀಡುತ್ತದೆ. ಇದಕ್ಕಾಗಿ ಹೈದರಾಬಾದ್‌ನಿಂದ ತಜ್ಞರನ್ನು ಕರೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಗಢ್ವಾದಲ್ಲಿರುವ ಭಂಡಾರಿಯಾದಿಂದ ಬರ್ಗಢ್ ಕಡೆಗೆ ಚಿರತೆ ಹೋಗಿದೆ. ಈ ಪ್ರದೇಶವು ಛತ್ತೀಸ್‌ಗಢದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ ಎಂದು ಗರ್ವಾ ಡಿಎಫ್‌ಒ ದಿಲೀಪ್ ಕುಮಾರ್ ಹೇಳಿದ್ದಾರೆ. ಚಿರತೆಯನ್ನು ಕೊಲ್ಲಲು ಹೈದರಾಬಾದ್‌ನ ತಜ್ಞ ನವಾಬ್ ಸಪತ್ ಅಲಿ ಖಾನ್ ಅವರನ್ನು ಸಂಪರ್ಕಿಸಲಾಗಿದೆ. ಇಲಾಖೆಯು ನಿರಂತರವಾಗಿ ತಜ್ಞರೊಂದಿಗೆ ಸಂಪರ್ಕದಲ್ಲಿದ್ದು, ಅನುಮತಿ ದೊರೆತ ತಕ್ಷಣ ಅವರನ್ನು ಕರೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಚಿರತೆ ಸೆರೆಗೆ ಹಲವು ತಂತ್ರ: ಗರ್ಹ್ವಾದಲ್ಲಿ ಚಿರತೆ ಭೀತಿ ತಡೆಯಲು ಅರಣ್ಯ ಇಲಾಖೆ ಅನೇಕ ತಂತ್ರಗಳಿಗೆ ಮೊರೆ ಹೋಗಿದೆ. ಒಂದು ಸಾವಿರ ಚದರ ಮೀಟರ್‌ಗಳನ್ನು ಸುತ್ತುವರಿದ ನಂತರ ಪ್ರತಿ 100 ಮೀಟರ್‌ಗೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಮತ್ತು ಡಜನ್‌ಗಿಂತಲೂ ಹೆಚ್ಚು ಸ್ವಯಂಚಾಲಿತ ಪಂಜರಗಳನ್ನು ಇಡಲಾಗಿದೆ. ಇಡೀ ಪ್ರದೇಶದಲ್ಲಿ 10 ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ. ಎಲ್ಲಾ ತಂಡಗಳು ಚಿರತೆ ಹುಡುಕಾಟದಲ್ಲಿ ತೊಡಗಿವೆ. ಮೇಕೆಯನ್ನು ಸ್ವಯಂಚಾಲಿತ ಬೋನಿನೊಳಗೆ ಇರಿಸಿದೆ.
ಚಿರತೆ ದಾಳಿಗೆ ಮೂವರು ಬಲಿ: ಗರ್ವಾ ಪ್ರದೇಶದಲ್ಲಿ ಚಿರತೆ ಇದುವರೆಗೆ ಮೂವರು ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿದೆ. ಗರ್ವಾ ಪ್ರದೇಶದ ರಂಕಾ ರಾಮಕಾಂಡ ಮತ್ತು ಭಂಡಾರಿಯಾ ಪ್ರದೇಶಗಳಲ್ಲಿ ಚಿರತೆ ಮಕ್ಕಳನ್ನು ಕೊಂದಿತ್ತು.
ಇದನ್ನೂ ಓದಿ: COMPOSA ಬಲವರ್ಧನೆಗೆ ಮುಂದಾದರಾ ಮಾವೋವಾದಿಗಳು?: ಅಮೃತ್ಗೆ ಅಧಿಕಾರ ಹಸ್ತಾಂತರ!