ETV Bharat / bharat

70 ವರ್ಷದಲ್ಲಿ ಸೃಷ್ಟಿಸಲಾಗಿದ್ದ ಆಸ್ತಿ ಇದೀಗ ಮಾರಾಟ..ರಾಹುಲ್​ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು!

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲಾನ್​ ಜಾರಿಗೊಳಿಸಿ ಅನೇಕ ಆಸ್ತಿ ಮಾರಾಟ ಮಾಡಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ಯಾಕೆ ಮಾತನಾಡುತ್ತಿಲ್ಲ ಎಂದು ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದಾರೆ.

smriti irani
smriti irani
author img

By

Published : Aug 24, 2021, 10:17 PM IST

Updated : Aug 24, 2021, 10:32 PM IST

ನವದೆಹಲಿ: ಕಳೆದ 70 ವರ್ಷಗಳಲ್ಲಿ ಸೃಷ್ಟಿ ಮಾಡಲಾಗಿದ್ದ ಆಸ್ತಿಯನ್ನ ಇದೀಗ ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಆರೋಪ ಮಾಡಿರುವ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದು, 2008ರಲ್ಲಿ ಮುಂಬೈ-ಪುಣೆ ಎಕ್ಸ್​ಪ್ರೆಸ್​ ವೇ ಮಾರಾಟ ಮಾಡಿ 8000 ಕೋಟಿ ರೂಪಾಯಿ ಸಂಗ್ರಹ ಮಾಡಿದಾಗ ದೇಶ ಮಾರಾಟ ಮಾಡುತ್ತಿದೆ ಎಂದು ಅನಿಸಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಈಟಿವಿ ಭಾರತ ಜೊತೆ ಸ್ಮೃತಿ ಇರಾನಿ ಮಾತು

ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಯೋಜನೆ ಮೂಲಕ ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕೇಂದ್ರದ ಪ್ರಮುಖ 11 ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂಮಿ ಮಾರಾಟಕ್ಕೆ ಕೇಂದ್ರ ನಿರ್ಧಾರ ಮಾಡಿದೆ. ಇದರಿಂದ 6 ಲಕ್ಷ ಕೋಟಿ ರೂ ಸಂಗ್ರಹಿಸಲು ಮುಂದಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇದೇ ವಿಚಾರವಾಗಿ ಮಾತನಾಡಿದ್ದ ರಾಹುಲ್​ ಗಾಂಧಿ, ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಏನು ಅಭಿವೃದ್ಧಿ ಆಗಿಲ್ಲವೆಂದು ಬಿಂಬಿಸುವ ಕೇಂದ್ರ, ಇದೀಗ ಆ ಸಮಯದಲ್ಲಿ ಸೃಷ್ಟಿಯಾಗಿರುವ ಆಸ್ತಿ ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದ್ದರು.

  • #WATCH| "If Rahul Gandhi has a problem with monetization then he needs to explain that Rs 8000 crores raised after monetizing Mumbai-Pune expressway under Cong, was his party selling country?... Is he alleging that his mother was selling the country...?": Union Min Smriti Irani pic.twitter.com/wz0f1FFglY

    — ANI (@ANI) August 24, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ರಸ್ತೆ, ರೈಲ್ವೆ ಸೇರಿ 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಕೇಂದ್ರ ಸರ್ಕಾರದ ನಿರ್ಧಾರ.. ಕಾರಣ?

ತಿರುಗೇಟು ನೀಡಿದ ಸ್ಮೃತಿ ಇರಾನಿ, ನಾನು ಸಂಸದೆಯಾಗಿ ಆಯ್ಕೆಯಾಗುತ್ತಿರುವ ಅಮೇಥಿಯಲ್ಲಿ ಕಳೆದ 70ವರ್ಷಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆ ಇರಲಿಲ್ಲ. 2008ರಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ನವದೆಹಲಿ ರೈಲ್ವೆ ನಿಲ್ದಾಣ ಆರ್​ಎಫ್​ಪಿಗೊಳಪಡಿಸಿತು. ಸೋನಿಯಾ ಗಾಂಧಿ ನೇತೃತ್ವದ ಸರ್ಕಾರ ದೇಶ ಮಾರಾಟ ಮಾಡಲು ಧೈರ್ಯ ಮಾಡಿತ್ತು ಎಂದು ರಾಹುಲ್​ ಗಾಂಧಿ ಆರೋಪಿಸಿದ್ದರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್​ ಆಡಳಿತವಿರುವ ಅನೇಕ ರಾಜ್ಯಗಳು ಈಗಾಗಲೇ ತಮ್ಮ ರಾಜ್ಯದ ಆಸ್ತಿ ಮಾರಾಟ ಮಾಡುತ್ತಿವೆ. ಇದರ ಬಗ್ಗೆ ರಾಹುಲ್​ ಗಾಂಧಿ ಮಾತನಾಡಲು ಸಿದ್ಧ ಇರುವರೇ? ಮಹಾರಾಷ್ಟ್ರದ ಕಾಂಗ್ರೆಸ್​ ಸರ್ಕಾರ ಮುಂಬೈ- ಪುಣೆ ಎಕ್ಸ್​ಪ್ರೆಸ್​ ವೇಯನ್ನ ಮಾನಿಟೈಸ್ ಮಾಡುವ ಮೂಲಕ 8,000 ಕೋಟಿ ರೂ. ಗಳಿಕೆ ಮಾಡಿದೆ. ಇದರ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿಲ್ಲವೇಕೆ? ಎಂದು ವಾಗ್ದಾಳಿ ನಡೆಸಿದರು.

Last Updated : Aug 24, 2021, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.