ETV Bharat / bharat

ಕಾಮನ್‌ವೆಲ್ತ್ ಗೇಮ್ಸ್‌ ತರಬೇತಿಗಾಗಿ ಟರ್ಕಿಗೆ ತೆರಳಲಿರುವ ಒಲಂಪಿಕ್ ಚಿನ್ನದ ಹುಡುಗ 'ನೀರಜ್ ಛೋಪ್ರಾ'

author img

By

Published : Mar 23, 2022, 12:07 PM IST

ಅಮೆರಿಕದ ಒರೆಗಾನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್, ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಮತ್ತು ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ 2022 ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನು ಗಮನದಲ್ಲಿಟ್ಟುಕೊಂಡು ಈ ತರಬೇತಿ ನೀಡಲಾಗುತ್ತದೆ. 2022ರಲ್ಲಿ ನಡೆಯುವ ಸ್ಪರ್ಧೆಗಳಿಗೆ ಮುಂಚಿತವಾಗಿ ತಯಾರಿಗಾಗಿ ಅಂಟಲ್ಯದಲ್ಲಿ ತರಬೇತಿ ಶಿಬಿರವು ನಿರ್ಣಾಯಕವಾಗಿದೆ ಎಂದು ನೀರಜ್ ಹೇಳಿದ್ದಾರೆ..

Neeraj Chopra
ನೀರಜ್ ಛೋಪ್ರಾ

ನವದೆಹಲಿ : ಪ್ರಸ್ತುತ ಪಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ತರಬೇತಿ ಪಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ 'ನೀರಜ್ ಚೋಪ್ರಾ' ಅವರು ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಮತ್ತು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ಗೆ ತಯಾರಾಗಲು 44 ದಿನಗಳ ತರಬೇತಿ ಶಿಬಿರಕ್ಕಾಗಿ ಟರ್ಕಿಗೆ ತೆರಳಲಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನಲ್ಲಿ ತರಬೇತಿ ಪಡೆದ ನಂತರ ಚೋಪ್ರಾ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಮರಳಿದ್ದರು. ಅವರು ಈಗ ತಮ್ಮ ತರಬೇತುದಾರ ಡಾ. ಕ್ಲಾಸ್ ಬಾರ್ಟೋನಿಟ್ಜ್ ಮತ್ತು ಫಿಸಿಯೋಥೆರಪಿಸ್ಟ್ ಇಶಾನ್ ಮರ್ವಾಹಾ ಅವರೊಂದಿಗೆ ಮಾ. 28ರಿಂದ ಮೇ 11ರವರೆಗೆ ಟರ್ಕಿಯ ಅಂಟಲ್ಯದಲ್ಲಿರುವ ಗ್ಲೋರಿಯಾ ಸ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಪಡೆಯಲಿದ್ದಾರೆ.

ಹಾಗಾಗಿ, ಅವರು ಈ ತಿಂಗಳ ಕೊನೆಯಲ್ಲಿ ಟರ್ಕಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು 25-30 ಇತರ ಕ್ರೀಡಾಪಟುಗಳೊಂದಿಗೆ ಜೂನ್ 18ರಿಂದ ಜುಲೈ 13ರವರೆಗೆ ಒರೆಗಾನ್ (ಯುಎಸ್‌ಎ) ಚುಲಾ ವಿಸ್ಟಾದಲ್ಲಿ ತರಬೇತಿ ಶಿಬಿರಕ್ಕೆ ನೀರಜ್ ಅವರ ಹೆಸರನ್ನು ಸೇರಿಸಲಾಗಿದೆ.

ಅಮೆರಿಕದ ಒರೆಗಾನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್, ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಮತ್ತು ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ 2022 ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನು ಗಮನದಲ್ಲಿಟ್ಟುಕೊಂಡು ಈ ತರಬೇತಿ ನೀಡಲಾಗುತ್ತದೆ. 2022ರಲ್ಲಿ ನಡೆಯುವ ಸ್ಪರ್ಧೆಗಳಿಗೆ ಮುಂಚಿತವಾಗಿ ತಯಾರಿಗಾಗಿ ಅಂಟಲ್ಯದಲ್ಲಿ ತರಬೇತಿ ಶಿಬಿರವು ನಿರ್ಣಾಯಕವಾಗಿದೆ ಎಂದು ನೀರಜ್ ಹೇಳಿದ್ದಾರೆ.

"ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಳಿಗಾಲದ ತರಬೇತಿಯ ನಂತರ, 2022ರ ಟರ್ಕಿ ಪ್ರವಾಸವು ಸವಾಲಿನ ಮತ್ತು ನನ್ನ ತಯಾರಿ ಹಂತದ ಪ್ರಮುಖ ಭಾಗವಾಗಿದೆ. ನನ್ನ ತರಬೇತಿಯನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಸಾಧ್ಯವಾದಷ್ಟು ಶ್ರಮಿಸುತ್ತಿದ್ದೇನೆ. ಈ ವರ್ಷ ಉದ್ದೇಶಿತ ಸ್ಪರ್ಧೆಗಳಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ" ಎಂದು ಚೋಪ್ರಾ ಹೇಳಿದರು.

INR 22,38,394 ಅಂದಾಜು ವೆಚ್ಚದೊಂದಿಗೆ ತರಬೇತಿ ಸೌಲಭ್ಯ, ವಿಮಾನ ಟಿಕೆಟ್‌, ಹೋಟೆಲ್ ವಸತಿ, ವಿಮಾನ ಟಿಕೆಟ್‌ ಇತರ ನಿಬಂಧನೆಗಳ ಜತೆಗೆ ಇತರ ವೆಚ್ಚಗಳನ್ನು ಸಂಪೂರ್ಣವಾಗಿ ಸರ್ಕಾರ ಭರಿಸುತ್ತದೆ. USD 50 ದಿನದ ಪಾಕೆಟ್ ಭತ್ಯೆಯನ್ನು ನೇರವಾಗಿ ಕ್ರೀಡಾಪಟುವಿನ ಖಾತೆಗೆ ಜಮಾ ಮಾಡಲಾಗುತ್ತದೆ. ಕ್ರೀಡಾಪಟು ಅವರ ತರಬೇತುದಾರರೊಂದಿಗೆ ಇರುತ್ತಾರೆ. ಅವರು ಸರ್ಕಾರದಿಂದ ಧನ ಸಹಾಯವನ್ನು ಪಡೆಯುತ್ತಾರೆ.

ಇದನ್ನೂ ಓದಿ: 90 ಮೀಟರ್​ ಜಾವಲಿನ್​ ಎಸೆದು ಅತ್ಯುತ್ತಮರ ಪಟ್ಟಿಗೆ ಸೇರಬೇಕು: ಚಿನ್ನದ ಹುಡ್ಗ ನೀರಜ್​ ಚೋಪ್ರಾ ಗುರಿ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.