ETV Bharat / bharat

ಕರ್ನಾಟಕದಲ್ಲಿ ಕಾಂಗ್ರೆಸ್​ ಭರವಸೆಗಳು ವಿಫಲ: ತೆಲಂಗಾಣ ಪ್ರಚಾರದಲ್ಲಿ ಮಾಜಿ ಸಿಎಂ ಬಿಎಸ್​​ವೈ ಟೀಕೆ - Yediyurappa in Hyderabad

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಪ್ರಚಾರ ಮಾಡಿದರು ಈ ವೇಳೆ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
author img

By ETV Bharat Karnataka Team

Published : Nov 22, 2023, 4:04 PM IST

Updated : Nov 22, 2023, 4:35 PM IST

ಮಾಜಿ ಸಿಎಂ ಬಿಎಸ್​​ವೈ ಸುದ್ದಿಗೋಷ್ಠಿ

ಹೈದರಾಬಾದ್​: ತೆಲಂಗಾಣದ ಜನತೆ ಕಾಂಗ್ರೆಸ್ ನೀಡಿದ ಪೊಳ್ಳು ಗ್ಯಾರಂಟಿಗಳಿಗೆ ಮರುಳಾಗಬಾರದು. ಕರ್ನಾಟಕದಲ್ಲಿ ಇಂಥದ್ದೇ ಉಚಿತಗಳನ್ನು ಘೋಷಿಸಿ ಜಾರಿ ಮಾಡಲಾಗದೇ ಮೋಸ ಮಾಡಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿರುವ ಅವರು ಹೈದರಾಬಾದ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ನೀಡಿದ 5 ಭರವಸೆಗಳು ಕರ್ನಾಟಕದಲ್ಲಿ ಜಾರಿಯಾಗಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತೆಲಂಗಾಣದ ಜನ ಕಾಂಗ್ರೆಸ್​ ಭರವಸೆಗಳನ್ನು ನಂಬಬೇಡಿ ಎಂದು ಮನವಿ ಮಾಡಿದರು. ತೆಲಂಗಾಣದಲ್ಲೂ 6 ಖಾತರಿ ಯೋಜನೆಗಳ ಹೆಸರಿನಲ್ಲಿ ಪಕ್ಷ ಹೊಸ ನಾಟಕ ಆರಂಭಿಸಿದೆ. ತೆಲಂಗಾಣ ಜನತೆ ಇದನ್ನು ನಂಬಿ ಮೋಸ ಹೋಗಬೇಡಿ ಎಂದರು.

ಕಾಂಗ್ರೆಸ್ ನೀಡಿದ ಭರವಸೆಗಳಿವು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಪ್ರಮುಖ ಆರು ಗ್ಯಾರಂಟಿಗಳನ್ನು ಜಾರಿಗೆ ಮಾಡಲಾಗುವುದು ಎಂದು ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ರೈತರ ಬೆಳೆ ಸಾಲ ಮನ್ನಾ, ಕೃಷಿ ಬಳಕೆಗೆ 24 ಗಂಟೆ ಉಚಿತ ವಿದ್ಯುತ್, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೆಸರಲ್ಲಿ ಬಡ ಯುವತಿಯರ ಮದುವೆಗೆ 1 ಲಕ್ಷ ರೂ. ಆರ್ಥಿಕ ನೆರವು ಹಾಗೂ 10 ಗ್ರಾಂ ಚಿನ್ನ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.

  • #WATCH | Hyderabad: Former Karnataka CM and BJP leader BS Yediyurappa says, "Karnataka model' is Congress' election model in other states. The Congress had promised five guarantees to voters in Karnataka and won the elections in May this year. It is selling the 'Karnataka model'… pic.twitter.com/kHrV5dLi9a

    — ANI (@ANI) November 22, 2023 " class="align-text-top noRightClick twitterSection" data=" ">

ಬಡ ಕುಟುಂಬಗಳಲ್ಲಿ ನವಜಾತ ಹೆಣ್ಣು ಮಕ್ಕಳಿಗೆ 'ಬಂಗಾರು ತಲ್ಲಿ' ಯೋಜನೆಯ ಮೂಲಕ ಹಣಕಾಸಿನ ನೆರವು, ಬಡ ಕುಟುಂಬದ ಯುವತಿಯರ ಮದುವೆಗೆ 1 ಲಕ್ಷ ರೂ. ಆರ್ಥಿಕ ನೆರವು ಹಾಗೂ 'ಇಂದಿರಮ್ಮ' ಉಡುಗೊರೆಯಾಗಿ 10 ಗ್ರಾಂ ಚಿನ್ನ, ತೆಲಂಗಾಣ ಚಳವಳಿಯ ಹುತಾತ್ಮರ ಕುಟುಂಬಗಳಿಗೆ 25 ಸಾವಿರ ರೂ. ಮಾಸಿಕ ಪಿಂಚಣಿ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ.

ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಶಿಕ್ಷಕರ ಹುದ್ದೆಗಳ ಭರ್ತಿ, 2 ಲಕ್ಷ ಬೆಳೆ ಸಾಲ ಮನ್ನಾ ಮತ್ತು ವಾರ್ಷಿಕ 3 ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲ, ರಾಜ್ಯ ಬಜೆಟ್‌ನ ಶೇ.15ರಷ್ಟು ಮೀಸಲಿಡುವುದರೊಂದಿಗೆ ಶಿಕ್ಷಣಕ್ಕೆ ಒತ್ತು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್​ನೆಟ್‌, ಪ್ರತಿ ಆಟೋ ಚಾಲಕರ ಖಾತೆಗೆ ವರ್ಷಕ್ಕೆ 12,000 ರೂ. ಜಮೆ ಮಾಡುವ ಭರವಸೆಯನ್ನು ಕಾಂಗ್ರೆಸ್​ ನೀಡಿದೆ.

ಇದನ್ನೂ ಓದಿ: ತಾಯಿ, ಮಗು ಸಾವು ಪ್ರಕರಣ: ಸಚಿವ ಜಾರ್ಜ್ ರಾಜೀನಾಮೆಗೆ ಆರ್​ ಅಶೋಕ್ ಆಗ್ರಹ

Last Updated : Nov 22, 2023, 4:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.