ಚಂಡೀಗಢ (ಪಂಜಾಬ್): ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಸೇರಿದಂತೆ 16 ಮಂದಿ ಹತ್ಯೆ ಪ್ರಕರಣದ ಅಪರಾಧಿಯಾದ ಕೈದಿ ಲಖ್ವಿಂದರ್ ಸಿಂಗ್ ತಮ್ಮ ಬಿಡುಗಡೆಗೆ ಒತ್ತಾಯಿಸಿ ಚಂಡೀಗಢನ ಬುರೈಲ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಹೀಗಾಗಿ ಇಂದು ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕರ್ನೈಲ್ ಸಿಂಗ್ ನೇತೃತ್ವದ ಸಮಿತಿಯ ಸದಸ್ಯರು ಭೇಟಿ ಮಾಡಿದ್ದಾರೆ.
ಲಖ್ವಿಂದರ್ ಸಿಂಗ್ ಕಳೆದ 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ದ್ರವ ಆಹಾರವನ್ನು ನೀಡಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಅಂಗಾಂಗಗಳು ಸಂಪೂರ್ಣವಾಗಿ ಸ್ಥಿರವಾಗಿವೆ ಎಂದು ಬುರೈಲ್ ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಪೆರೋಲ್‌ಗೆ ಸಿಂಗ್ ಅರ್ಜಿ ಸಲ್ಲಿಕೆ: ತಮ್ಮ ಬಿಡುಗಡೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಲಖ್ವಿಂದರ್ ಸಿಂಗ್ ಪೆರೋಲ್‌ಗೂ ಅರ್ಜಿ ಸಲ್ಲಿಸಿದ್ದಾರೆ. ಪೆರೋಲ್ ಮೇಲೆ ಬಿಡುಗಡೆಗೆ ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ. ಈ ಸಂಬಂಧ ದಾಖಲೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದರಿಂದಾಗಿ ಲಖ್ವಿಂದರ್ ಸಿಂಗ್ ಶೀಘ್ರದಲ್ಲೇ ಪೆರೋಲ್ ಪಡೆಯಬಹುದು ಎಂದು ಮೂಲಗಳ ತಿಳಿಸಿದೆ.
ಬಾಂಬ್ ಸ್ಫೋಟದಲ್ಲಿ ಮಾಜಿ ಸಿಎಂ ಸಾವು: 1995ರ ಆಗಸ್ಟ್ 31ರಂದು ನಡೆದ ಬಾಂಬ್ ಸ್ಫೋಟದಲ್ಲಿ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಾಲಯವು ಕೊಲೆ, ಕೊಲೆ ಯತ್ನ ಮತ್ತು ಕ್ರಿಮಿನಲ್ ಪಿತೂರಿಯ ಸೆಕ್ಷನ್‌ಗಳ ಅಡಿಯಲ್ಲಿ ಜಗತಾರ್ ಸಿಂಗ್ ಹವಾರಾ, ಬಲ್ವಂತ್ ಸಿಂಗ್ ರಾಜೋನಾ, ಶಂಶೇರ್ ಸಿಂಗ್, ಲಖ್ವಿಂದರ್ ಸಿಂಗ್ ಮತ್ತು ಗುರ್ಮೀತ್ ಸಿಂಗ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. 2007ರ ಜುಲೈನಲ್ಲಿ ಲಖ್ವಿಂದರ್ ಸಿಂಗ್ ಮತ್ತು ಇತರ ಆರೋಪಿಗಳಿಗೆ ಚಂಡೀಗಢ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇದಲ್ಲದೇ, ಸ್ಫೋಟಕ ವಸ್ತುಗಳ ಕಾಯ್ದೆಯಡಿಯಲ್ಲಿ ನಾಸಿಬ್ ಸಿಂಗ್ ಎಂಬಾತನಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಜಗತಾರ್ ಸಿಂಗ್ ಹವಾರಾ ಮತ್ತು ಬಲ್ವಂತ್ ಸಿಂಗ್ ರಾಜೋನಾ ಅವರಿಗೆ ಮರಣದಂಡನೆಗೆ ಗುರಿಯಾಗಿದ್ದಾರೆ. ಆದಾಗ್ಯೂ, ನಂತರ ಜಗತಾರ್ ಸಿಂಗ್ ಹವಾರಾ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಇಡೀ ಘಟನೆಯಲ್ಲಿ ದಿಲಾವರ್ ಸಿಂಗ್ ಎಂಬ ವ್ಯಕ್ತಿ ಮಾನವ ಬಾಂಬ್ ಆಗಿ ಬಂದಿದ್ದ.
ಜೈಲಿನಲ್ಲಿ ಸುರಂಗ ಕೊರೆದು ಪರಾರಿ: ಈ ಪ್ರಕರಣದ ವಿಚಾರಣೆಯು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ಸೋಂಧಿ ನೇತೃತ್ವದ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಜೊತೆಗೆ ಪರಮ್‌ಜಿತ್ ಸಿಂಗ್ ಭಿಯುರಾ ವಿಚಾರಣೆಯನ್ನು ನ್ಯಾಯಾಲಯ ಪ್ರತ್ಯೇಕವಾಗಿ ನಡೆಸಲಾಯಿತು. ಆಗ 2004ರ ಜನವರಿಯಲ್ಲಿ ಜಗತಾರ್ ಸಿಂಗ್ ತಾರಾ, ಪರಮ್ಜಿತ್ ಸಿಂಗ್ ಭಯೋರಾ ಮತ್ತು ಜಗತಾರ್ ಸಿಂಗ್ ಹವಾರಾ 94 ಅಡಿ ಉದ್ದದ ಸುರಂಗವನ್ನು ಕೊರೆದು ಬುರೈಲ್ ಜೈಲಿನಿಂದ ತಪ್ಪಿಸಿಕೊಂಡಿದ್ದರು.
ಥಾಯ್ಲೆಂಡ್‌ನಲ್ಲಿ ಮರು ಬಂಧನ: ಜೈಲಿನಿಂದ ತಪ್ಪಿಸಿಕೊಂಡ ನಂತರ ಭಯೋರಾ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದರು. ನಂತರ 2010ರ ಮಾರ್ಚ್ಗೆ ಪರಮ್ಜಿತ್ ಸಿಂಗ್ ಭಯೋರಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ವೇಳೆ ಕ್ರಿಮಿನಲ್ ಪಿತೂರಿಗಾಗಿ ಶಿಕ್ಷೆಗೊಳಗಾಗಿದ್ದರು. ಮತ್ತೊಂದೆಡೆ ಜಗತಾರ್ ಸಿಂಗ್ ತಾರಾನನ್ನು ಜೈಲಿನಿಂದ ತಪ್ಪಿಸಿಕೊಂಡ ಬಳಿಕ 2015ರಲ್ಲಿ ಥಾಯ್ಲೆಂಡ್‌ನಲ್ಲಿ ಸೆರೆಹಿಡಿಯಲಾಗಿತ್ತು. ಇದಾದ ನಂತರ 2018ರ ಮಾರ್ಚ್ನಲ್ಲಿ ಚಂಡೀಗಢ ನ್ಯಾಯಾಲಯವು ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು.
ಇದನ್ನೂ ಓದಿ: ಕಳ್ಳತನವೇ ಫುಲ್ ಟೈಮ್ ಜಾಬ್.. 160 ಪ್ರಕರಣಗಳ ಚಾಲಾಕಿಗೆ ಇಡೀ ಕುಟುಂಬವೇ ಸಾಥ್