ETV Bharat / bharat

ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಡಾ. ಕೆ ಸುಬ್ರಮಣಿಯನ್ ನೇಮಕ

author img

By

Published : Aug 26, 2022, 6:39 AM IST

ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದು, 2022ರ ನವೆಂಬರ್ 1 ರಿಂದ ಇವರ ಸೇವಾವಧಿ ಪ್ರಾರಂಭವಾಗಲಿದೆ.

ಕೆ ಸುಬ್ರಮಣಿಯನ್
subramanian

ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್​) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಡಾ. ಕೆ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಗುರುವಾರ ಹೊರಡಿಸಿದ ಆದೇಶದಲ್ಲಿ, ಕೆ ಸುಬ್ರಮಣಿಯನ್ ಅವರು ನವೆಂಬರ್ 1 ರಿಂದ ಪ್ರಾರಂಭವಾಗುವ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೂ ಐಎಂಎಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ಮೈಸೂರಿಗೆ ಆಗಮಿಸಿ ತಂದೆ ಹುಟ್ಟುಹಬ್ಬ ಆಚರಿಸಿದ IMF ಪ್ರಥಮ ಉಪಮುಖ್ಯಸ್ಥೆ ಗೀತಾ ಗೋಪಿನಾಥ್

ಪ್ರಸ್ತುತ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರೊಫೆಸರ್ ಆಗಿರುವ ಸುಬ್ರಮಣಿಯನ್ ಅವರು 2018 ಮತ್ತು 2021 ರ ನಡುವೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು.

ಸುರ್ಜಿತ್ ಭಲ್ಲಾ ಅವರ ಉತ್ತರಾಧಿಕಾರಿಯಾಗಿ ಸುಬ್ರಮಣಿಯನ್ ಅವರು ಐಎಂಎಫ್‌ನಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಸುರ್ಜಿತ್ ಭಲ್ಲಾ ಅವರ ಅಧಿಕಾರಾವಧಿ ಅಕ್ಟೋಬರ್ 31 ರಂದು ಕೊನೆಗೊಳ್ಳುತ್ತದೆ.

ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ದರ ಕಡಿತಗೊಳಿಸಿದ ಐಎಂಎಫ್‌: ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.