ಪಂಜಾಬ್ : ಶ್ರೀ ಅಕಾಲ್ ತಖ್ತ್ ಸಾಹಿಬ್‌ನ ಜಥೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಸೋಮವಾರ ಸಿಖ್ಖರು ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ. ದೇಶ ಮತ್ತು ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ಸಿಖ್ಖರು ಪರವಾನಿಗೆ ಪಡೆದ ಆಧುನಿಕ ಶಸ್ತ್ರಾಸ್ತ್ರವನ್ನು ಹೊಂದುವ ಅಗತ್ಯವಿದೆ ಎಂದು ಜಥೇದಾರ್ ಹೇಳಿದ್ದಾರೆ.
ಗುರು ಹರಗೋವಿಂದರ ಸಿಂಹಾಸನಾರೋಹಣ ದಿನದ ಸಂದರ್ಭದಲ್ಲಿ ಜಥೇದಾರ್ ಈ ಹೇಳಿಕೆ ನೀಡಿದ್ದಾರೆ. ಮಿರಿ ಮತ್ತು ಪೀರಿಯ ಸಿದ್ಧಾಂತವನ್ನು ಗುರು ಗೋವಿಂದ್ ಸಿಂಗ್ ಅವರು ನೀಡಿದರು. ಮೊಘಲ್ ಆಡಳಿತಗಾರರು ಭಾರತದ ಮೇಲೆ ಆಕ್ರಮಣ ಮಾಡಿದಾಗ, ಸಿಖ್ಖರಿಗೆ ಶಸ್ತ್ರಸಜ್ಜಿತರಾಗಲು ಕಲಿಸಿದವರು ಗುರು ಹರಗೋವಿಂದರು ಎಂದು ಅವರು ಹೇಳಿದರು. ಈಗ ನಾವೂ ಗಟ್ಕಾ (ಸಮರ ಕಲೆ) ಜೊತೆ ಚಮತ್ಕಾರಿಕ ಕಲೆ ಕಲಿಯಬೇಕಾಗಿದೆ ಎಂದರು.
ಗುರು ಹರಗೋವಿಂದರ ಸಿಂಹಾಸನಾರೋಹಣದ ದಿನದಂದು ಅವರು ಸಿಖ್ ಸಮುದಾಯಕ್ಕೆ ಸಂದೇಶವನ್ನು ರವಾನಿಸಿದರು. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತೆ ಸಿಖ್ ಸಮುದಾಯಕ್ಕೆ ಮನವಿ ಮಾಡಿದರು. "ಇಂದು, ಎಲ್ಲಾ ಸಿಖ್ಖರು ಬಾನಿ (ಪವಿತ್ರ ಪಠ್ಯ)ಗೆ ಬದ್ಧರಾಗಿರುವುದು, ಶಸ್ತ್ರಸಜ್ಜಿತರಾಗಲು ಮತ್ತು ಇಂದಿನ ಯುಗದ ಆಧುನಿಕ ಶಸ್ತ್ರಾಸ್ತ್ರಗಳನ್ನು ಕಾನೂನುಬದ್ಧವಾಗಿ ಹೊಂದಲು ಅವಶ್ಯಕವಾಗಿದೆ" ಎಂದು ಜಥೇಧರ್ ಹೇಳಿದರು.
ಇದನ್ನೂ ಓದಿ: ಬರೋಬ್ಬರಿ 72 ಮರಿಗಳಿಗೆ ಜನ್ಮ ನೀಡಿದ ಎರಡು ಮೊಸಳೆ.. ಅರಣ್ಯ ಸಿಬ್ಬಂದಿಯಿಂದ ತೀವ್ರ ನಿಗಾ
ಜಥೇಧರ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ವಿಜಯ್ ಭಾರದ್ವಾಜ್ ಅವರು, ಸಿಖ್ ಸಮುದಾಯವನ್ನು ಪ್ರತಿನಿಧಿಸುವ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥರಾಗಿ ಸಮುದಾಯಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಬಹುದು. ಆದರೆ, ಹಿಂದೂ ಸಮುದಾಯದವರು ತಮ್ಮ ಪರವಾನಿಗೆ ಹೊಂದಿದ ಆಯುಧಗಳನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವಂತೆ ಭಾರದ್ವಾಜ್ ಮನವಿ ಮಾಡಿದರು.