ಸವಾಯಿ ಮಧೋಪುರ್(ರಾಜಸ್ಥಾನ): ರೈಲು ಹಳಿಗೆ ಬಿದ್ದು ಇಬ್ಬರು ತೃತೀಯ ಲಿಂಗಿಗಳು ಮೃತಪಟ್ಟ ಭೀಕರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇಬ್ಬರು ಜಗಳವಾಡಿಕೊಂಡು ರೈಲಿಗೆ ತಲೆ ಕೊಟ್ಟಿದ್ದಾರೆ ಎಂದು ಹೇಳಲಾದರೆ, ರೈಲನ್ನು ಹತ್ತುವಾಗ ಡಿಕ್ಕಿಯಾಗಿ ಮೃತಪಟ್ಟರು ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ.
ಸವಾಯಿ ಮಾಧೋಪುರ್ ರೈಲು ನಿಲ್ದಾಣದಲ್ಲಿ ಈ ಇಬ್ಬರು ತೃತೀಯ ಲಿಂಗಿಗಳು ರೈಲು ಹತ್ತಿದ್ದಾರೆ. ಬಳಿಕ ಇಬ್ಬರ ಮಧ್ಯೆ ಕಿತ್ತಾಟವಾಗಿದೆ. ಇಬ್ಬರು ಬಡಿದಾಡಿಕೊಳ್ಳುತ್ತಿದ್ದಾಗ ಬಾಗಿಲಿನಿಂದ ಆಚೆ ಬಿದ್ದಿದ್ದಾರೆ. ಈ ವೇಳೆ, ಇನ್ನೊಂದು ಕಡೆಯಿಂದ ಬರುತ್ತಿದ್ದ ದುರಂತ್ ರೈಲು ಅವರ ಮೇಲೆ ಹತ್ತಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ಕುರಿತು ಪ್ರಯಾಣಿಕರೊಬ್ಬರು ತಿಳಿಸಿದ್ದು, ಜಗಳವಾಡಿಕೊಂಡು ರೈಲಿನಿಂದ ಆಚೆ ಬಿದ್ದರು. ಈ ವೇಳೆ ರೈಲು ಡಿಕ್ಕಿಯಾಯಿತು ಎಂದಿದ್ದಾರೆ. ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಓದಿ: ಮುಂಬೈನ ಕಟ್ಟಡದಲ್ಲಿ ಬೆಂಕಿ ಅನಾಹುತ.. 3 ಗಂಟೆ ಕಾರ್ಯಾಚರಣೆ: ವಿಡಿಯೋ