ETV Bharat / bharat

ಪೊಲೀಸರಿಂದ ಮೂವರು ಪತ್ರಕರ್ತರ ಮೇಲೆ ಹಲ್ಲೆ: ಕಾಶ್ಮೀರ್​ ಪ್ರೆಸ್​ ಕ್ಲಬ್​ನಿಂದ ಖಂಡನೆ

author img

By

Published : Dec 10, 2020, 2:14 PM IST

Updated : Dec 10, 2020, 3:12 PM IST

ದಕ್ಷಿಣ ಕಾಶ್ಮೀರದಲ್ಲಿ ಪೊಲೀಸರು ಮೂವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದವರಲ್ಲಿ 'ಈಟಿವಿ ಭಾರತ' ವರದಿಗಾರರಾದ ಫಯಾಜ್ ಅಹ್ಮದ್ ಲೋಲು ಕೂಡ ಸೇರಿದ್ದಾರೆ.

ಪೊಲೀಸರಿಂದ ಮೂವರು ಪತ್ರಕರ್ತರ ಮೇಲೆ ಹಲ್ಲೆ
ಪೊಲೀಸರಿಂದ ಮೂವರು ಪತ್ರಕರ್ತರ ಮೇಲೆ ಹಲ್ಲೆ

ಶ್ರೀನಗರ (ಜಮ್ಮು ಕಾಶ್ಮೀರ): ಈಟಿವಿ ಭಾರತ ವರದಿಗಾರ ಸೇರಿದಂತೆ ಮೂವರು ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಇಂದು ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಶ್ರೀಗುಫ್ವಾರ ಪ್ರದೇಶದಲ್ಲಿ ನಡೆದಿದೆ.

ಈ ಮೂವರು ಪತ್ರಕರ್ತರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಐದನೇ ಹಂತದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ಕುರಿತು ವರದಿ ಮಾಡುತ್ತಿದ್ದರು.

"ನಾನು ಮತ್ತು ನನ್ನ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪತ್ರಕರ್ತರಾದ ಮುದಾಸೀರ್ ಖಾದ್ರಿ (ನ್ಯೂಸ್ 18) ಮತ್ತು ಜುನೈದ್ ರಫೀಕ್ (ಪಂಜಾಬ್ ಕೇಸರಿ) ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ " ಎಂದು ಅನಂತ್‌ನಾಗ್‌ನಿಂದ ಈಟಿವಿ ಭಾರತ್​​ಗೆ ವರದಿ ಮಾಡುತ್ತಿದ್ದ ವರದಿಗಾರ ಫಯಾಜ್ ಅಹ್ಮದ್ ಲೋಲು ಹೇಳಿದ್ದಾರೆ.

ಪೊಲೀಸರಿಂದ ಮೂವರು ಪತ್ರಕರ್ತರ ಮೇಲೆ ಹಲ್ಲೆ

"ನಾನು ಮತ ಚಲಾಯಿಸಲು ಅನುಮತಿ ಇಲ್ಲವೆಂದು ಹೇಳುತ್ತಿದ್ದ ಸ್ಥಳೀಯ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ (ಪಿಎಜಿಡಿ) ಅಭ್ಯರ್ಥಿಯ ಬೈಟ್ ತೆಗೆದುಕೊಳ್ಳುತ್ತಿದ್ದೆ. ಆಗ ನಾನು ಪೊಲೀಸರನ್ನು ಪ್ರಶ್ನಿಸಲು ಹೋದಾಗ ಅವರು ನನಗೆ ಹೊಡೆದಿದ್ದಾರೆ ಎಂದು ನಮ್ಮ ಪ್ರತಿನಿಧಿ ಹೇಳಿದ್ದಾರೆ.

"ಈ ಘಟನೆಯ ವೇಳೆ ಪಂಜಾಬ್ ಕೇಸರಿಯ ಜುನೈದ್ ರಫೀಕ್ ಅವರು ಪ್ರಜ್ಞೆ ತಪ್ಪಿದ್ದಾರೆ ಮತ್ತು ಶ್ರೀಗುಫ್ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ" ಎಂದು ಫಯಾಜ್ ಅಹ್ಮದ್ ಲೋಲು ಘಟನೆಯನ್ನು ವಿವರಿಸಿದ್ದಾರೆ.

ಇದನ್ನು ಓದಿ:ಅಪ್ರಾಪ್ತೆಯರ ಮೇಲೆ ಅತ್ಯಾಚಾರ: ಆರೋಪಿಗಳಿಗೆ 20 ವರ್ಷ ಕಠಿಣ ಜೀವಾವಧಿ ಸಜೆ

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಐಜಿಪಿ ಕಾಶ್ಮೀರ್​ ವಿಜಯ್ ಕುಮಾರ್ ಅವರು, ಸತ್ಯ ಸಂಗತಿ ಏನಿದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿ ಪೊಲೀಸರು ಮೂವರು ಪತ್ರಕರ್ತರನ್ನು ಥಳಿಸಿದ್ದನ್ನು ಕಾಶ್ಮೀರ ಪ್ರೆಸ್ ಕ್ಲಬ್ ಖಂಡಿಸಿದೆ.

Last Updated : Dec 10, 2020, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.