ಮೇಷ: ಇಂದು ನೀವು ಅತ್ಯಂತ ಸೂಕ್ಷ್ಮ ಅಥವಾ ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ. ಯಾವುದೂ ನಿಮಗೆ ಅನುಕೂಲಕರವಾಗಿರುವಂತೆ ಕಾಣುವುದಿಲ್ಲ. ಒತ್ತಡದಿಂದ ನಿರಾಳಗೊಳ್ಳಲು ನೀವು ನಿಮಗಾಗಿ ಕೊಂಚ ಸಮಯ ತೆಗೆದುಕೊಳ್ಳಿರಿ.
ವೃಷಭ: ನಿಮ್ಮ ಚಿಂತನಾಶಕ್ತಿ ಇಂದು ಅತ್ಯಂತ ದುರ್ಬಲವಾಗಿದೆ. ನಿಮ್ಮ ಸ್ವಾಮ್ಯತೆ ಸಂಘರ್ಷಕ್ಕೆ ಕಾರಣವಾಗಬಹುದು. ಅನಗತ್ಯ ಸಂಕೀರ್ಣಗಳನ್ನು ತಪ್ಪಿಸಲು ನಿಮ್ಮ ಕೋಪವನ್ನು ನಿಯಂತ್ರಿಸಿ. ಆತ್ಮಾವಲೋಕನ ನಿಮ್ಮ ಚಿಂತನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಸಮಸ್ಯೆಗಳನ್ನು ಕಂಡುಕೊಳ್ಳಲು ಮತ್ತು ಪರಿಹಾರಗಳನ್ನು ಚಿಂತಿಸಲು ಅವಕಾಶ ಕಲ್ಪಿಸುತ್ತದೆ.
ಮಿಥುನ: ನೀವು ಎಲ್ಲದರಿಂದ ವಿಮುಖರಾಗಿರುವಂತೆ ಭಾವಿಸುತ್ತೀರಿ. ಇದು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ದೂರ ಉಂಟು ಮಾಡಬಹುದು. ನಿಮ್ಮ ಕೋಪದಿಂದಾಗಿ ನೀವು ಅನಗತ್ಯ ಚರ್ಚೆಗಳಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು.
ಕರ್ಕಾಟಕ: ಕಲ್ಪನಾಲೋಕದಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಮೆಚ್ಚಿಕೊಳ್ಳುತ್ತಾರೆ. ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ದೇವರ ಆಶೀರ್ವಾದವೂ ಇರುತ್ತದೆ.
ಸಿಂಹ: ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲು ನೀವು ತಡೆಯಿರದೆ ಶ್ರಮಿಸುತ್ತೀರಿ. ನೀವು ನಿಮ್ಮ ತೀರ್ಮಾನಗಳ ಕುರಿತಂತೆ ಅಚಲವಾಗಿರುತ್ತೀರಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಸೋಮಾರಿಯಾಗಲು ನೀವು ಬಿಡುವುದಿಲ್ಲ. ನೀವು ಜೀವನದಲ್ಲಿ ಸಂತೋಷವಾಗಿರಲು ಅಡ್ಡಿಗಳು ಮತ್ತು ಭಯಗಳನ್ನು ಮೀರಬೇಕು. ಉನ್ನತ ಸ್ಥಾನದ ಮೇಲಾಧಿಕಾರಿಗಳಿಂದ ನೀವು ಅನುಕೂಲ ಪಡೆಯುತ್ತೀರಿ.
ಕನ್ಯಾ: ನಿಮ್ಮ ವ್ಯಾಪಾರ ಸಾಮರ್ಥ್ಯಗಳಿಗೆ ಸಂಬಂಧಿಸಿದ ಮುಖ್ಯವಾಗಿ ನಿಮ್ಮ ಹೂಡಿಕೆಗಳು ಮತ್ತು ಹಣಕಾಸಿನ ವಿಷಯಗಳ ಕುರಿತಾದ ಎಲ್ಲ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಿ. ದೀರ್ಘಾವಧಿಯಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮಹತ್ತರ ಆಲೋಚನೆಗಳಿಂದ ಬರುತ್ತೀರಿ. ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.
ತುಲಾ: ನೀವು ಜನರ ಮೆಚ್ಚುಗೆಯನ್ನು ಗಳಿಸಲು ಸಜ್ಜಾಗಿರಿ. ಇಂದು ಯೋಜನೆಗಳು, ಸ್ವಯಂ ಹಣಕಾಸು ಹೂಡಿಕೆ ಆಲೋಚನೆಗಳನ್ನು ಹೊಂದಿರುವವರಿಗೆ ಉತ್ತೇಜಕಾರಕ ದಿನವಾಗಿದೆ.
ವೃಶ್ಚಿಕ: ಮತ್ತಷ್ಟು ಆಳವಾಗಿ ಹುಡುಕಾಟದಲ್ಲಿ ತೊಡಗಿರಿ. ಕರ್ಮದ ಪರಿಣಾಮವಿರುತ್ತದೆ, ಆದರೆ ಫಲಿತಾಂಶ ಕುರಿತು ಹೆಚ್ಚು ಆಲೋಚಿಸಬೇಡಿ. ಜಂಟಿ ಸಹಯೋಗಗಳ ಕುರಿತು ಇಂದು ಕಾದು ನೋಡುವ ವಿಧಾನ ಅನುಸರಿಸಿ.
ಧನು: ಸಮಸ್ಯೆಗಳು ಇಂದು ನಿಮ್ಮನ್ನು ಮೂಲೆಗೆ ತಳ್ಳುತ್ತವೆ. ಆದರೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಅಂತಿಮ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ತಡವಾಗುವುದನ್ನು ನಿರೀಕ್ಷಿಸಿ. ದಿನ ಅಂತ್ಯವಾದಂತೆ ಉಪಯುಕ್ತ ಫಲಿತಾಂಶಗಳನ್ನು ನಿರೀಕ್ಷಿಸಿ.
ಮಕರ: ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ. ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.
ಕುಂಭ: ಸಮಾಜದ ವಿವಿಧ ವಲಯಗಳನ್ನು ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ.
ಮೀನ: ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.