ಮೇಷ: ಭವಿಷ್ಯದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಮಾನ್ಯ ಜ್ಞಾನ ಇರುವುದು ಒಳ್ಳೆಯದು. ನಿಮ್ಮ ಲೆಕ್ಕಾಚಾರಗಳನ್ನು ಮಾಡಿ ಮಾರ್ಗದರ್ಶನ ಪಡೆದುಕೊಳ್ಳಿ, ಜ್ಯೋತಿಷ್ಯದ ನಕ್ಷೆಗಳನ್ನು ತೆಗೆದುಕೊಳ್ಳಿ, ಆದರೆ ಅಂತಿಮವಾಗಿ ನಿಮ್ಮ ಜ್ಞಾನ ಮಾತ್ರ ಉಳಿಯುತ್ತದೆ.
ವೃಷಭ: ಈ ದಿನ ವಾದ-ವಿವಾದಗಳು ಮತ್ತು ಆಕ್ರಮಣಕಾರಿ ವರ್ತನೆಯ ಛಾಯೆಗಳು ದಿನದ ಬಹುತೇಕ ಭಾಗ ಇರುತ್ತವೆ. ನೀವು ಮಧ್ಯಾಹ್ನ ಮಿತ್ರರೊಂದಿಗೆ ದೀರ್ಘ ಚರ್ಚೆಗಳಲ್ಲಿ ಕಳೆಯಬಹುದು. ಸಂಜೆ ವೇಳೆಗೆ ವಿಷಯಗಳು ಬದಲಾಗುತ್ತವೆ. ನಿಮ್ಮ ಆತ್ಮಸಂಗಾತಿಯಿಂದ ವಿಶೇಷ ಆತಿಥ್ಯ ದೊರೆಯಬಹುದು ಸಂಭವ ಇದೆ.
ಮಿಥುನ : ಇಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಕಠಿಣ ಕಾರ್ಯ, ಆದರೆ ನೀವು ಅದನ್ನು ಪೂರೈಸಬೇಕು. ಅದಕ್ಕೆ ಸಮಯ ಬೇಕಾಗಬಹುದು. ಆದರೆ ಭರವಸೆ ಕಳೆದುಕೊಳ್ಳಬೇಡಿ. ಛಲ ಮತ್ತು ಕಠಿಣ ಪರಿಶ್ರಮಕ್ಕೆ ಬೆಲೆ ಬರುತ್ತದೆ. ನಿಮ್ಮ ಸುತ್ತಲೂ ನಡೆಯುವ ವಿಷಯಗಳ ಕುರಿತು ನಿಮ್ಮ ಅರಿವು ಹೆಚ್ಚಾಗಬಹುದು. ನೀವು ನಿಮ್ಮ ಸುತ್ತಲಿರುವವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ. ನೀವು ನಿಮ್ಮ ಪ್ರಿಯತಮೆಯನ್ನು ಶಾಪಿಂಗ್ಗೆ ಕರೆದೊಯ್ಯುತ್ತೀರಿ.
ಕರ್ಕಾಟಕ: ಇಂದು ನೀವು ಬಹುತೇಕ ಆಕ್ರಮಣಕಾರಿಯಾಗಿ ವರ್ತಿಸುತ್ತೀರಿ. ನೀವು ಮಧ್ಯಾಹ್ನವನ್ನು ವ್ಯಾಪಾರ ಸಹವರ್ತಿಗಳೊಂದಿಗೆ ಕಳೆಯುತ್ತೀರಿ. ನೀವು ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿತ ರೀತಿಯಲ್ಲಿ ಬಳಸಿದರೆ ನೀವು ಇಂದು ಬಹಳ ಮುಖ್ಯವಾದ ವ್ಯವಹಾರ ಪಡೆಯುತ್ತೀರಿ. ಸಂಜೆಯಲ್ಲಿ ನಿಮ್ಮ ಸಂಗಾತಿ ಆತ/ಆಕೆಯ ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ನೀವು ಆಕಾಶದಲ್ಲಿ ತೇಲುತ್ತೀರಿ.
ಸಿಂಹ: ನೀವು ಇಂದು ನಿಮ್ಮ ಸಿದ್ಧಾಂತಗಳಲ್ಲಿ ರಾಜಿಯಾಗುವುದಿಲ್ಲ. ಫಲಿತಾಂಶವಾಗಿ ನೀವು ನಿಮ್ಮಲ್ಲಿ ಸಂತೃಪ್ತರಾಗುತ್ತೀರಿ. ಆದಾಗ್ಯೂ ನಿಮ್ಮ ಸಮಾಧಾಕರ ವಿಧಾನವನ್ನು ಬಿಡದಿರಿ. ಇದು ನಿಮ್ಮ ವೃತ್ತಿ ವ್ಯವಹಾರಗಳಲ್ಲಿ ನೀವು ಪ್ರಾಯೋಗಿಕ ಮತ್ತು ವ್ಯಾಪಾರ ರೀತಿಯಲ್ಲಿದ್ದರೆ ನೆರವಾಗುತ್ತದೆ.
ಕನ್ಯಾ: ನೀವು ಕೆಲ ಕ್ಷುಲ್ಲಕ ವಿಷಯಗಳಿಂದ ಕದಡಿದಂತಿರುತ್ತೀರಿ. ಇದು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವ ಕೋರ್ಸ್ ಸೇರಿಕೊಳ್ಳಲು ನಿಮಗೆ ಪ್ರೇರೇಪಿಸುತ್ತದೆ. ಆಪ್ತ ಸಂವಹನವು ನಿಮ್ಮನ್ನು ಲೈಂಗಿಕ ಆನಂದಕ್ಕೆ ಕೊಂಡೊಯ್ಯುವ ಸಾಧ್ಯತೆಯೂ ಇದೆ.
ತುಲಾ : ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ನಿಮಗೆ ಇಂದು ಅನುಕೂಲಕರ. ನಿಮ್ಮ ಒಡಹುಟ್ಟಿದವರೊಂದಿಗೆ ನಿಮ್ಮ ಬಾಂಧವ್ಯಗಳು ಸುಧಾರಿಸುತ್ತವೆ. ನೀವು ನಿಮ್ಮ ಆತ್ಮೀಯ ಮಿತ್ರರೊಂದಿಗೆ ಸಂತೋಷದ ಸಮಯ ಕಳೆಯುತ್ತೀರಿ.
ವೃಶ್ಚಿಕ : ಈ ದಿನ ನಿಮ್ಮ ಪ್ರೀತಿಪಾತ್ರರು ಮತ್ತು ನಿಮ್ಮ ಜವಾಬ್ದಾರಿಗಳ ನಡುವೆ ಸಮಾನವಾಗಿ ವಿಂಗಡಿಸಲ್ಪಟ್ಟಿದೆ. ನೀವು ಸಂವೇದನಾ ಶೀಲರಾಗಿದ್ದು, ನೀವು ಅವರಿಗೆ ನೆರವಾಗಲು ಹೊರಡುತ್ತೀರಿ. ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುವವರಿಗೆ, ವಿವಾಹದ ಪ್ರಸ್ತಾವನೆ ಸಂಜೆಯ ವೇಳೆಗೆ ಬರುತ್ತದೆ.
ಧನು: ಈ ದಿನ ಯಾವುದೇ ಗಮನಾರ್ಹವಾದುದು ಇರುವುದಿಲ್ಲ. ಆದರೆ ಇದು ಖಂಡಿತ ಒಳ್ಳೆಯ ನಾಳೆಯ ಭರವಸೆ ನೀಡುತ್ತದೆ. ಪಾರ್ಟ್ ಟೈಮ್ ಕೋರ್ಸ್ ತೆಗೆದುಕೊಳ್ಳಿ ಮತ್ತು ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಇದು ನಿಮಗೆ ಕೊಂಚ ಸ್ಥಳ ನೀಡುತ್ತದೆ. ನಿಮ್ಮ ಬಯಕೆಗಳನ್ನು ಜೀವಂತವಾಗಿರಿಸಿಕೊಳ್ಳುವುದು ಸೂಕ್ತ.
ಮಕರ : ಪ್ರೀತಿ ಇಂದು ನಿಮ್ಮ ಮನಸ್ಸಿನಲ್ಲಿದೆ. ಸ್ಮರಣೆಗಳಲ್ಲಿ ಮುಳುಗಿ ನೀವು ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರೊಂದಿಗೆ ಕಳೆದ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನೀವು ನಿಮ್ಮ ಹಳೆಯ ಮಿತ್ರರಿಗೆ ಕರೆ ಮಾಡಿ ಆ ಸ್ಮರಣೆಗಳನ್ನು ಹಂಚಿಕೊಳ್ಳುತ್ತೀರಿ. ವೃತ್ತಿಯಲ್ಲಿ ನೀವು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸುತ್ತೀರಿ. ಒಟ್ಟಾರೆ ಇಂದು ನಿಮಗೆ ಒಳ್ಳೆಯ ದಿನವಾಗಿದೆ.
ಕುಂಭ : ಇಂದು ನೀವು ಕೊಂಚ ಹೆಚ್ಚು ಸುಸಂಘಟಿತರಾಗಲು ಮನ ಬಯಸುತ್ತದೆ. ಇತರರಿಂದ ಐಡಿಯಾ ತೆಗೆದುಕೊಳ್ಳುವುದರಲ್ಲಿ ಯಾವುದೇ ಹಾನಿಯಿಲ್ಲ.
ಮೀನ: ನಿಮಗೆ ಇಂದು ಅನಗತ್ಯ ಚಿಂತೆಯಿಲ್ಲ. ನೀವು ಬಹಳ ತಾಳ್ಮೆಯ ಮತ್ತು ಉದಾರತೆ ಹೊಂದಿದವರಾಗಿದ್ದೀರಿ ಮತ್ತು ಇದರಿಂದ ಜನರನ್ನು ಸುಲಭವಾಗಿ ಕ್ಷಮಿಸುತ್ತೀರಿ. ಇದು ಬಹಳ ಒಳ್ಳೆಯದು. ಆದರೆ ಜನರು ನಿಮ್ಮನ್ನು ಅನುಕೂಲಕರವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಿ.