ಮೇಷ: ನೀವು ಇಂದು ಮಹತ್ವಾಕಾಂಕ್ಷಿಯಾಗಿದ್ದೀರಿ ಅಥವಾ ಏನು? ನಿನ್ನದು ಖಚಿತವಾದ ಯೋಜನೆ ಮತ್ತು ದೋಷರಹಿತ ಅನುಷ್ಠಾನ. ಆದರೂ, ನಿಮ್ಮ ಪ್ರಗತಿ ಬಸವನ ಹುಳುವಿನಂತೆ. ನಿರಾಸೆ ಹೊಂದಬೇಡಿ. ನಿಮಗೆ ಕೃಪೆ ಇದೆ.
ವೃಷಭ: ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇದೆ. ಆದರೆ ಈ ಪ್ರಗತಿ ನೀವು ನಿರೀಕ್ಷಿಸಿದ ದಿಕ್ಕಿನಲ್ಲಿ ಇಲ್ಲ. ಹಣಕಾಸಿನ ಅವಕಾಶಗಳು ಮತ್ತು ಯಶಸ್ಸು ನಿಮ್ಮ ಬಾಗಿಲು ತಟ್ಟುತ್ತವೆ. ಅಪರೂಪದ ಅತಿಥಿಗಳು. ನೀವು ಭೌತಿಕ ಯಶಸ್ಸು ಗಳಿಸುತ್ತೀರಿ.
ಮಿಥುನ: ನಿಮ್ಮ ಭಾವನೆಗಳನ್ನು ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವ ಮೂಲಕ ಈ ದಿನವನ್ನು ಚೆನ್ನಾಗಿ ಪ್ರಾರಂಭಿಸಿದ್ದೀರಿ. ಅಲ್ಲದೆ ಇದು ನಿಮ್ಮ ಕುಟುಂಬಕ್ಕೆ ಪ್ರಸ್ತುತ ಹಣಕಾಸು ಸ್ಥಿತಿಯನ್ನು ಹೇಳುವ ಸಮಯ. ಇದು ನಿಮ್ಮ ಭಾವನೆಯನ್ನು ಉತ್ತಮಪಡಿಸುತ್ತದೆ. ನಿಮ್ಮ ಶಕ್ತಿಯ ಮಟ್ಟ ಏರುತ್ತದೆ. ಮತ್ತು ನೀವು ಹೊಸ ಹುರುಪಿನಿಂದ ಮುನ್ನಡೆಯುತ್ತೀರಿ. ನಿಮ್ಮ ಸಂಗಾತಿ ನಿಮಗೆ ಒಳ್ಳೆಯ ಅದೃಷ್ಟ ತರುತ್ತಾರೆ.
ಕರ್ಕಾಟಕ: ನಿಮ್ಮ ಜೀವನ ಸಂಗಾತಿಯಿಂದ ಉಡುಗೊರೆ ಪಡೆಯುತ್ತೀರಿ. ವ್ಯಾಪಾರ ಪಾಲುದಾರರೊಂದಿಗೆ ಸಂಬಂಧಗಳು ಚೆನ್ನಾಗಿವೆ. ಮತ್ತು ನೀವು ಅವರಿಂದ ಸಕಾರಾತ್ಮಕ ಸುದ್ದಿ ಪಡೆಯುತ್ತೀರಿ. ಸಂಗಾತಿಯೊಂದಿಗೆ ಭವಿಷ್ಯಕ್ಕೆ ಯೋಜನೆಗಳನ್ನು ರೂಪಿಸುವ ಸಮಯ. ನಿಮ್ಮ ಪ್ರೀತಿಪಾತ್ರರೊಂದಿಗೆ ಮಹತ್ತರ ಒಡನಾಟದ ಭಾವನೆ ಅನುಭವಿಸುತ್ತೀರಿ. ಅದು ನಿಮಗೆ ಸಂತೋಷ ನೀಡುತ್ತದೆ.
ಸಿಂಹ: ಬದಲಾವಣೆ ಹೊರತಾಗಿ ಯಾವುದೂ ಶಾಶ್ವತವಲ್ಲ ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹರಿವಿನೊಂದಿಗೆ ಚಲಿಸಿರಿ ಮತ್ತು ನಿಮ್ಮ ಸುತ್ತಲೂ ಆಗುತ್ತಿರುವ ಬದಲಾವಣೆಗಳ ಅಂತಃಪ್ರವಾಹದಲ್ಲಿ ಸಿಲುಕಿಕೊಳ್ಳಬೇಡಿ.
ಕನ್ಯಾ: ಆರೋಗ್ಯದ ವಿಷಯಕ್ಕೆ ಬಂದರೆ ಕಾಲಹರಣ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಉತ್ಸಾಹದಲ್ಲಿದ್ದೀರಿ. ಆದರೆ ಶಾಂತಿ ಮತ್ತು ಸಮಾಧಾನ ಇಂದಿನ ಪ್ರಭಾವಿ ಅಂಶಗಳು. ನೀವು ಹೊರಗಡೆ ಹೋಗಿ ಮತ್ತು ಆನಂದಿಸಿ ಕೇವಲ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಎಂದು ತಿಳಿಯಿರಿ.
ತುಲಾ: ಗಾಳಿಯಲ್ಲಿ ಪ್ರೀತಿಯಿದೆ. ಮತ್ತು ಆಕಾಂಕ್ಷೆ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದೆ. ನಿಮ್ಮ ಕಣ್ಣು ಹಾಗೂ ಕಿವಿಯನ್ನು ತೆರೆದಿಟ್ಟುಕೊಳ್ಳಿ. ಏಕೆಂದರೆ ನೀವು ಸದ್ಯದಲ್ಲೇ ತೀವ್ರ ಆಕಾಂಕ್ಷೆಯ ಪ್ರೀತಿಯಲ್ಲಿ ಸಿಲುಕಿಕೊಳ್ಳಬಹುದು. ಆದರೆ ಹೊಸ ಪ್ರೀತಿಗೆ ದಾರಿ ಸದಾ ಕಡಿದಾಗಿರುತ್ತದೆ. ಮತ್ತು ನಿಮ್ಮ ಪ್ರೀತಿಪಾತ್ರರು ನಿಮ್ಮ ಜೇಬು ಖಾಲಿ ಮಾಡಬಹುದು.
ವೃಶ್ಚಿಕ: ಋಣಾತ್ಮಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ಮುಕ್ತವಾಗಿಸಿ. ನಿಮ್ಮ ತಂಡದಲ್ಲಿ ಕೆಲಸ ಮಾಡಲು ನಿಮಗೆ ಅತ್ಯಂತ ಉತ್ಸಾಹ ಬೇಕು ಮತ್ತು ನಿಮ್ಮ ತಂಡದವರಿಗೆ ಸಮಾನ ಜವಾಬ್ದಾರಿಗಳನ್ನು ನೀಡಿರಿ. ಸಾಮರ್ಥ್ಯ ಕಂಡುಕೊಂಡು ಅದಕ್ಕೆ ತಕ್ಕಂತೆ ಜವಾಬ್ದಾರಿ ನೀಡಿ. ಅವರ ಕೆಲಸದಲ್ಲಿ ನಂಬಿಕೆ ಇರಿಸಿ ಮತ್ತು ಉಳಿದಿದ್ದು ಸುಸೂತ್ರವಾಗುತ್ತದೆ.
ಧನು: ಅಂಧಕಾರ ಮತ್ತು ನಿರ್ವಿಣ್ಣ ನಿಮ್ಮಲ್ಲಿ ಇಂದಿನ ಭಾವನೆಗಳು. ಆದರೆ ಚಿಂತೆಗಳ ಮೋಡ ದಿನದ ನಂತರದಲ್ಲಿ ಒಡೆಯಲಿದೆ. ವಿದೇಶದಿಂದ ಶುಭಸುದ್ದಿ ಅಥವಾ ಮಿತ್ರರಿಂದ ಫೋನ್ ಕರೆ ನಿಮ್ಮ ಉತ್ಸಾಹ ಹೆಚ್ಚಿಸಲಿದೆ.
ಮಕರ: ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಮಂಜಸ ಮತ್ತು ಅಸಮಂಜಸ ದಾರಿಗಳಲ್ಲಿ ಪವರ್ ಗೇಮ್ ಆಡುತ್ತೀರಿ. ಬೌದ್ಧಿಕ ಪ್ರಗತಿ ಅಸಾಧಾರಣವಾಗಿದೆ. ಹಾಗೆಯೇ ನಿಮ್ಮ ಸ್ವಭಾವವೂ. ನಿಮ್ಮ ಸ್ವಭಾವದಲ್ಲಿ ವಿಶ್ವಾಸವಿರಿಸಿ ಏಕೆಂದರೆ ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತದೆ.
ಕುಂಭ: ಅನಿರೀಕ್ಷಿತವಾದುದನ್ನು ಇಂದು ನಿರೀಕ್ಷಿಸಿ! ಯಶಸ್ಸು, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಎಂದು ಭರವಸೆ ಕಳೆದುಕೊಳ್ಳುತ್ತೀರೋ ಅದು ನಿಮ್ಮ ದಾರಿಯಲ್ಲಿ ಬರುತ್ತದೆ. ಸಂಜೆಯಲ್ಲಿ, ಓದು, ಸಂಶೋಧನೆ, ಚರ್ಚೆ ಅಥವಾ ಅಂತಹ ಚಟುವಟಿಕೆಯ್ನು ನಡೆಸುತ್ತೀರಿ.
ಮೀನ: ಶ್ರೇಷ್ಠವಾದ ಸೋತವರು ಮತ್ತು ಉದಾರ ವಿಜೇತರಿಗಿಂತ ಹೆಚ್ಚು ಮುಖ್ಯ. ನೆನಪಿಟ್ಟುಕೊಳ್ಳಿ ಪ್ರತಿದಿನವೂ ಯಶಸ್ಸು ಬರುವುದಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಆತ್ಮ ಸಂಗಾತಿಯೊಂದಿಗೆ ಸಂತೋಷದ ಟ್ರಿಪ್ ಹೊರಡುವ ಸೂಚನೆಗಳಿವೆ.