ETV Bharat / bharat

2025ರ ವೇಳೆಗೆ ದೇಶದಲ್ಲಿ ಎಥೆನಾಲ್ ಉತ್ಪಾದನೆ ದ್ವಿಗುಣ: ಕೇಂದ್ರದ ವಿಶ್ವಾಸ

ಪೆಟ್ರೋಲ್ (ಎಬಿಪಿ) ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವುದು ದೇಶದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪಾಂಡೆ ಹೇಳಿದ್ದಾರೆ. ಈ ಎಥೆನಾಲ್​ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದಿದ್ದಾರೆ.

author img

By

Published : Jun 15, 2021, 9:12 PM IST

Sudhanshu Pandey, Secretary, Department of Food and Public Distribution
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ

ನವದೆಹಲಿ: 2025ರ ವೇಳೆಗೆ ಭಾರತದಲ್ಲಿ ಎಥೆನಾಲ್​ ಉತ್ಪಾದನೆಯ ಸಾಮರ್ಥ್ಯ ದ್ವಿಗುಣವಾಗಲಿದೆ ಜೊತೆಗೆ ಶೇ.20ರಷ್ಟು ಗುರಿ ಸಾಧಿಸಲಿದ್ದೇವೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೇಡಿಕೆ ಮತ್ತು ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಂಡ ವಿವಿಧ ಕ್ರಮಗಳ ಪರಿಣಾಮವಾಗಿ 2025ರ ಒಳಗೆ ಎಥೆನಾಲ್​ ಉತ್ಪಾದನೆಯ ಸಾಮರ್ಥ್ಯವು ದ್ವಿಗುಣವಾಗಲಿದೆ. ಶೇ.20ರಷ್ಟು ಮಿಶ್ರಣದ ಗುರಿ ಸಾಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಟಣೆಯ ಪ್ರಕಾರ, ಪೆಟ್ರೋಲ್ (ಎಬಿಪಿ) ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವುದು ದೇಶದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪಾಂಡೆ ಹೇಳಿದ್ದಾರೆ. ಅಲ್ಲದೇ ಮಾಲಿನ್ಯರಹಿತ ಇಂಧನವಾಗಿರುವ ಜೊತೆಗೆ ಇ-20 ಇಂಧನದ ಬಳಕೆಯು ಕಾರ್ಬನ್ ಮಾನಾಕ್ಸೈಡ್ ಹೊರಸೂಸುವಿಕೆಯನ್ನು ಶೇ. 30-50ರಷ್ಟು ಮತ್ತು ಹೈಡ್ರೋಕಾರ್ಬನ್​ ಅನ್ನು ಶೇ.20ರಷ್ಟು ಕಡಿಮೆ ಮಾಡುವುದರಿಂದ ಪರಿಸರ ಮಾಲಿನ್ಯ ಸುಧಾರಿಸಲಿದೆ ಎಂದಿದ್ದಾರೆ.

ಎಥೆನಾಲ್ ಉತ್ಪಾದನೆಗೆ ಸಾಲ

ಈ ಮಿಶ್ರಣ ಗುರಿ ತಲುಪಲು ಸಕ್ಕರೆ ಕಾರ್ಖಾನೆ ಮತ್ತು ಡಿಸ್ಟಿಲರಿ ಇಳಿಸುವ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿಯೇ ಬ್ಯಾಂಕ್​​ಗಳಿಂದ ಸಾಲ ಪಡೆಯಲು ಅನುಕೂಲವಾಗುವಂತೆ ಶೇ.6ರಷ್ಟು ಬಡ್ಡಿಯನ್ನ ಸರ್ಕಾರವೇ ಭರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ಅದರ ಪೂರೈಕೆ 2013-14ರಿಂದ 2018-19ರ ವರೆಗೆ 5 ಪಟ್ಟು ಹೆಚ್ಚಾಗಿದೆ.

ಇಎಸ್​​​ವೈ 2018-19ರಲ್ಲಿ ನಾವು ಐತಿಹಾಸಿಕವಾಗಿ ಸುಮಾರು 189 ಕೋಟಿ ಲೀಟರ್‌ಗಳನ್ನು ಮುಟ್ಟಿದ್ದೇವೆ, ಆ ಮೂಲಕ ಪ್ರಸಕ್ತ 2020-21ರ ಎಥೆನಾಲ್ ಪೂರೈಕೆ ವರ್ಷದಲ್ಲಿ, 8 ರಿಂದ 8.5 ರಷ್ಟು ಮಿಶ್ರಣ ಮಟ್ಟವನ್ನು ಸಾಧಿಸಲು ಒಎಂಸಿಗಳಿಗೆ 300 ಕೋಟಿ ಲೀಟರ್ ಎಥೆನಾಲ್ ಸರಬರಾಜು ಮಾಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಇದು ಕಚ್ಚಾ ತೈಲ ಆಮದು ಮಸೂದೆಯ ಕಾರಣದಿಂದಾಗಿ 30,000 ಕೋಟಿ ರೂ.ಗಿಂತ ಹೆಚ್ಚಿನ ವಿದೇಶಿ ವಿನಿಮಯವನ್ನು ಉಳಿಸುತ್ತದೆ ಮತ್ತು ಆಮದು ಮಾಡಿದ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಪೆಟ್ರೋಲಿಯಂ ವಲಯದಲ್ಲಿ ‘ಆತ್ಮನಿರ್ಭರ ಭಾರತ್’ ಗುರಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ಪಾಂಡೆ ಹೇಳಿದ್ದಾರೆ.

ಓದಿ: ಮುಂದಿನ ನಾಲ್ಕೈದು ದಿನಗಳಲ್ಲಿ ಮಾನ್ಸೂನ್ ಅಬ್ಬರ: ಹಿರಿಯ ಅಧಿಕಾರಗಳೊಂದಿಗೆ ಅಮಿತ್ ಶಾ ಸಭೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.