ಮುಂಬೈ: ವಾರಾಂತ್ಯದ ಬಳಿಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಏರಿಕೆ ಕಂಡಿವೆ.
684 ಅಂಕಗಳ ಹೆಚ್ಚಳದಿಂದ ಸೆನ್ಸೆಕ್ಸ್ 59,449.66 ಅಂಕ ತಲುಪಿದ್ದು, ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 188 ಅಂಕಗಳ ಏರಿಕೆಯೊಂದಿಗೆ 17,720.30 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಶೀಘ್ರ ಬೆಳವಣಿಗೆಗೆ ಕಾರಣವಾಗುವ ಕ್ರಿಪ್ಟೋ ಕರೆನ್ಸಿಯಿಂದ ಆರ್ಥಿಕ ಅಸ್ಥಿರತೆಯ ಸವಾಲು ಇದೆ: IMF
ಮಹೀಂದ್ರಾ & ಮಹೀಂದ್ರಾ, ಡಾ. ರೆಡ್ಡಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಷೇರುಗಳಲ್ಲಿ ಹೆಚ್ಚು ಲಾಭ ಗಳಿಸಿದ ಕಂಪನಿಗಳಾಗಿವೆ. ಮತ್ತೊಂದೆಡೆ, ನೆಸ್ಲೆ ಇಂಡಿಯಾ ಶೇ.0.6 ನಷ್ಟು ನಷ್ಟ ಅನುಭವಿಸಿದೆ. ಇದರ ನಂತರ ಟಾಟಾ ಸ್ಟೀಲ್ ಮತ್ತು ಹೆಚ್ಯುಎಲ್ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ನಷ್ಟ ಕಂಡ ಕಂಪನಿಗಳಾಗಿವೆ.