ETV Bharat / bharat

ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್​ಓ ಹೊಸ ನೀತಿಯ ಪೂರ್ಣ ಮಾಹಿತಿ - ಇಡಿಎಲ್‌ಐ

ಕೋವಿಡ್ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು ತನ್ನ ಕಾರ್ಮಿಕರ ಠೇವಣಿ ಆಧರಿತ ವಿಮೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದು, ಸಾಕಷ್ಟು ಕುಟುಂಬಗಳಿಗೆ ಆಸರೆಯಾಗಲಿದೆ.

EPFO hikes maximum death insurance cover to Rs 7 lakh: Know details
ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್​ಓ ಹೊಸ ನೀತಿಯ ಪೂರ್ಣ ಮಾಹಿತಿ
author img

By

Published : May 20, 2021, 12:07 AM IST

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿಯ ಪಿಂಚಣಿ ಹಣ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಕಾರ್ಮಿಕರ ಠೇವಣಿ ಆಧರಿತ ವಿಮೆ (ಇಡಿಎಲ್‌ಐ) ಯೋಜನೆಯ ಮೊತ್ತವನ್ನು ಏರಿಕೆ ಮಾಡಲಾಗಿದೆ. ಕೋವಿಡ್ ವೇಳೆ ವಿಮಾದಾರರ ಕುಟುಂಬದ ನೆರವಿಗೆ ಈ ಯೋಜನೆ ಬರಲಿದೆ.

ಈ ಹೊಸ ಬದಲಾವಣೆ ಅನ್ವಯ ಪಿಂಚಣಿದಾರರು ಸಾವನ್ನಪ್ಪಿದ ವೇಳೆ ಅವರ ಕುಟುಂಬಕ್ಕೆ ನೀಡುವ ವಿಮಾ ಮೊತ್ತವನ್ನು ಕನಿಷ್ಠ ಎರಡೂವರೆ ಲಕ್ಷ, ಗರಿಷ್ಠ ಏಳೂವರೆ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಮೊದಲು ಪಿಂಚಣಿದಾರರು ಸಾವನ್ನಪ್ಪಿದ ವೇಳೆ ಕನಿಷ್ಠ 2 ಲಕ್ಷ, ಗರಿಷ್ಠ 6 ಲಕ್ಷ ವಿಮಾ ಹಣ ಪಡೆಯುವ ಮಿತಿ ಇತ್ತು.

ಈ ಹೊಸ ನಿಯಮವು 2021ರ ಏಪ್ರಿಲ್ 28ರಿಂದ ಜಾರಿಗೆ ಬರಲಿದೆ ಎಂದು ಇಪಿಎಫ್​ಓ ತಾನು ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಇದರ ಜೊತೆಗೆ ಸಂಬಂಧಪಟ್ಟ ಪಿಂಚಣಿದಾರರು ಮೃತಪಟ್ಟ ದಿನದ ಹಿಂದಿನ 12 ತಿಂಗಳ ಅವಧಿಗೆ ಅವರು ಉದ್ಯೋಗದಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಪಿಂಚಣಿದಾರರು ಕೆಲಸ ಮಾಡುವ ಸಂಸ್ಥೆ ಬದಲಿಸಿದ್ದರೂ ಅವರಿಗೆ ವಿಮೆ ಒದಗಿಸಲಾಗುತ್ತದೆ.

ಏನಿದು ಕಾರ್ಮಿಕರ ಠೇವಣಿ ಆಧರಿತ ವಿಮೆ ಅಥವಾ ಇಡಿಎಲ್‌ಐ?

ಕೇಂದ್ರ ಸರ್ಕಾರ 1976ರಲ್ಲಿ ಈ ಕಾರ್ಮಿಕರ ಠೇವಣಿ ಆಧಾರಿತ ವಿಮೆ (ಇಡಿಎಲ್‌ಐ) ಯೋಜನೆಯನ್ನ ಜಾರಿಗೊಳಿಸಿತು. ಈ ಮೂಲಕ ಉದ್ಯೋಗಿ ಮರಣಿಸಿದರೆ, ಆತನ ಅಥವಾ ಆಕೆಯ ಕುಟುಂಬಕ್ಕೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿತ್ತು. ಇಪಿಎಫ್​ಒದಲ್ಲಿ ಸಕ್ರಿಯರಾಗಿರುವ ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ.

ಇದನ್ನೂ ಓದಿ: ಉದ್ಯೋಗಸ್ಥ ನಾರಿಯ ಮೇಲೆ ಮತ್ತಷ್ಟು ಜವಾಬ್ದಾರಿ ಭಾರ ಹೊರಿಸಿದ ಕೊರೊನಾ- ವರದಿ

ಈ ಯೋಜನೆಗೆ ಉದ್ಯೋಗಿಯು ಯಾವುದೇ ಹಣವನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ. ಉದ್ಯೋಗದಾತನೇ ಸ್ವಲ್ಪ ಹಣವನ್ನು ಕಟ್ಟಬೇಕಾಗುತ್ತದೆ ಎಂದು ಯೋಜನೆಯಲ್ಲಿ ನಿಯಮವಿದೆ. ಅತ್ಯಂತ ಮುಖ್ಯವಾಗಿ ಎಲ್ಲಾ ಖಾಸಗಿ ಸಂಸ್ಥೆಗಳು ಈ ಯೋಜನೆಯನ್ನು ಅಳವಡಿಸಲೇಕೊಳ್ಳಬೇಕೆಂದು ಕಡ್ಡಾಯವಿಲ್ಲ.

ಕಾರ್ಮಿಕರ ಠೇವಣಿ ಆಧರಿತ ವಿಮೆ ಹೇಗೆ ಕೆಲಸ ಮಾಡುತ್ತದೆ..?

ತಿಂಗಳಿಗೆ 15 ಸಾವಿರ ರೂಪಾಯಿಗಿಂತ ಕಡಿಮೆ ವೇತನ ಇರುವ ಉದ್ಯೋಗಿಗಳಿಗೆ ಈ ಕಾರ್ಮಿಕರ ಠೇವಣಿ ಆಧರಿತ ವಿಮಾ ಯೋಜನೆ ಅನ್ವಯವಾಗುತ್ತದೆ. ಯೋಜನೆಯ ನಿಮಯಗಳಂತೆ ಉದ್ಯೋಗದಾತ ಅಥವಾ ಸಂಸ್ಥೆಗಳು ತನ್ನ ಉದ್ಯೋಗಿಯ ಮೂಲ ವೇತನದ 0.5ರಷ್ಟು ಅಥವಾ ಗರಿಷ್ಠ 75 ರೂಪಾಯಿಯನ್ನು ತಿಂಗಳಿಗೊಮ್ಮೆ ಕಟ್ಟಬೇಕಾಗುತ್ತದೆ.

ಪಿಂಚಣಿದಾರನು ಮರಣಿಸಿದರೆ, ಆತನ ವೇತನ, ವಿವಿಧ ಸೌಲಭ್ಯಗಳನ್ನ ಆಧರಿಸಿ ವಿಮಾ ಹಣವನ್ನು ನಿಗದಿ ಪಡಿಸಲಾಗುತ್ತದೆ. ಈ ವಿಮಾ ಹಣವನ್ನು ಆತನ ನಾಮಿನಿಗಳಿಗೆ ನೀಡಲಾಗುತ್ತದೆ. ನಾಮಿನಿಗಳು ಇಲ್ಲದಿದ್ದರೆ ಕಾನೂನು ಅನ್ವಯ ಹತ್ತಿರದ ಸಂಬಂಧಿಗಳು ಪಡೆಯಲು ಅವಕಾಶವಿದೆ.

ಈ ಹೊಸ ನಿಯಮ ಅಧಿಸೂಚನೆ ಪ್ರಕಟವಾದ ಮೂರು ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ ಎಂದು ಇಪಿಎಫ್‌ಓ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.