ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) 2020-21ರ ಹಣಕಾಸು ವರ್ಷಕ್ಕೆ 22.55 ಕೋಟಿ ಖಾತೆದಾರರಿಗೆ ಶೇ.8.50 ಬಡ್ಡಿದರವನ್ನು ಜಮೆ ಮಾಡಿದೆ.
ಹಣಕಾಸು ವರ್ಷ 2020-21ಕ್ಕೆ 22.55 ಕೋಟಿ ಖಾತೆಗಳಿಗೆ ಶೇ 8.50 ಬಡ್ಡಿಯೊಂದಿಗೆ ಈ ಹಣ ಜಮೆ ಮಾಡಲಾಗಿದೆ ಎಂದು EPFO ಟ್ವೀಟ್‌ನಲ್ಲಿ ತಿಳಿಸಿದೆ. ಗ್ರಾಹಕರು ಎಸ್ಎಮ್ಎಸ್ ಇಲ್ಲವೇ ಇಪಿಎಫ್‌ಒ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಯುಎಎನ್ ನಂಬರ್ ದಾಖಲಿಸಿ ತಮ್ಮ ಖಾತೆಯನ್ನು ಪರಿಶೀಲಿಸಬಹುದು.
ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ಪಡೆಯಲು ನೀವು EPFOHO UAN ENG ಎಂದು ಟೈಪ್ ಮಾಡಬೇಕು. ಇಲ್ಲಿ ಕೊನೆಯ ಮೂರು ಅಕ್ಷರಗಳು ಭಾಷೆಯ ಆದ್ಯತೆಯನ್ನು ನಿರ್ಧರಿಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಬಹುದು. ಉದಾಹರಣೆಗೆ, ಹಿಂದಿಗೆ HIN, ಮರಾಠಿಗೆ MAR ಮತ್ತು ತಮಿಳು ಭಾಷೆಗೆ TAM ಎಂದು ಟೈಪ್ ಮಾಡಿ. ನಂತರ 7738299899 ಸಂಖ್ಯೆಗೆ SMS ಕಳುಹಿಸಿ. ನಿಮ್ಮ PF ಬ್ಯಾಲೆನ್ಸ್ ವಿವರಗಳನ್ನು ನೀವು ಸ್ವೀಕರಿಸುತ್ತೀರಿ.
ನೀವು UAN ಗೆ KYC ಮಾಡಿಸಿದ್ದರೆ ನಿಗದಿತ ಟೋಲ್-ಫ್ರೀ ಸಂಖ್ಯೆ 011-22901406 ಗೆ ಮಿಸ್ಡ್ ಕಾಲ್ ನೀಡಿ. ನಿಮ್ಮ ಎಲ್ಲಾ PF ಖಾತೆಯ ವಿವರಗಳನ್ನು ಒಳಗೊಂಡಿರುವ SMS ಅನ್ನು ನೀವು ಸ್ವೀಕರಿಸುತ್ತೀರಿ.